ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್
– ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ
– ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಟ್ಟದ ಪಿಯುಸಿ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್ ಆಗಿದೆ. ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ, ಬಾಲಕರ, ಬಾಲಕಿಯರ ವಯುಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿದೆ.
ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ
ಬಾಲಕರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಆಗಿ ಸೃಜನ್ ಪ್ರಭು (100 ಮೀ,200ಮೀ ಮತ್ತು 400ಮೀ ಪ್ರಥಮ ), ಬಾಲಕಿಯರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಪ್ರಣಮ್ಯ (100ಮೀ, 200ಮೀ ಹಾಗೂ 400ಮೀ ಪ್ರಥಮ) ಸ್ಥಾನ ಪಡೆದಿದ್ದಾರೆ.
ಆ.27 ಹಾಗೂ 28 ಆಗಸ್ಟ್ 2024 ರಂದು ಎನ್ ಆರ್ ಎಸ್ ಕಾಲೇಜು ಕೋಣಂದೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಕೆಳಕಂಡ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿಯೊಂದಿಗೆ ಕ್ರೀಡೆಯಲ್ಲಿ ತಾಲ್ಲೂಕಿಗೆ ಸೈ ಎನಿಸಿಕೊಂಡಿರುತ್ತಾರೆ
ಬಾಲಕರ ವೈಯಕ್ತಿಕ ವಿಭಾಗ
*100 ಮೀಟರ್ ಪ್ರಥಮ ಮತ್ತು ದ್ವಿತೀಯ
*200 ಮೀಟರ್ ಪ್ರಥಮ ಮತ್ತು ದ್ವಿತೀಯ
*400 ಮೀಟರ್ ಪ್ರಥಮ ಮತ್ತು ದ್ವಿತೀಯ
*ಜಾವಲಿನ್ ಎಸೆತ ಪ್ರಥಮ
*ಗುಂಡು ಎಸೆತ ಪ್ರಥಮ
*800 ಮೀಟರ್ ದ್ವಿತೀಯ ಮತ್ತು ತೃತೀಯ
*ತ್ರಿವಿಧ ಜಿಗಿತ ದ್ವಿತೀಯ ಮತ್ತು ತೃತೀಯ
*ವಾಕಿಂಗ್ ರೇಸ್ ದ್ವಿತೀಯ
*ಹೈ ಜಂಪ್ ದ್ವಿತೀಯ
*1500 ಮೀಟರ್ ತೃತೀಯ
*ತಟ್ಟೆ ಎಸೆತ ತೃತೀಯ
* ಗುಡ್ಡಗಾಡು ಓಟ ನಾಲ್ಕನೇ ಸ್ಥಾನ
ಬಾಲಕರ ಗುಂಪು ಆಟಗಳು
*ವಾಲಿಬಾಲ್ ಚಾಂಪಿಯನ್
*ಥ್ರೋಬಾಲ್ ಚಾಂಪಿಯನ್
*ಖೋಖೋ ಚಾಂಪಿಯನ್
*4*100 ಮೀಟರ್ ರಿಲೇ ಚಾಂಪಿಯನ್
*4*400 ಮೀಟರ್ ರಿಲೇ ಚಾಂಪಿಯನ್
ಬಾಲಕಿಯರ ವೈಯಕ್ತಿಕ ವಿಭಾಗ
*100 ಮೀಟರ್ ಪ್ರಥಮ ಮತ್ತು ದ್ವಿತೀಯ
*200 ಮೀಟರ್ ಪ್ರಥಮ
*400 ಮೀಟರ್ ಪ್ರಥಮ ಮತ್ತು ತೃತೀಯ
*ವಾಕಿಂಗ್ ರೇಸ್ ಪ್ರಥಮ ಮತ್ತು ತೃತೀಯ
*ಜಾವಲಿನ್ ಎಸೆತ ಪ್ರಥಮ
*3000 ಮೀಟರ್ ದ್ವಿತೀಯ
*800 ಮೀಟರ್ ದ್ವಿತೀಯ
*1500 ಮೀಟರ್ ದ್ವಿತೀಯ ಮತ್ತು ತೃತೀಯ
*ಹ್ಯಾಮರ್ ಎಸೆತ ದ್ವಿತೀಯ ಮತ್ತು ತೃತೀಯ
ಬಾಲಕಿಯರ ಗುಂಪು ಆಟಗಳು
*ವಾಲಿಬಾಲ್ ಚಾಂಪಿಯನ್
*ಥ್ರೋಬಾಲ್ ಚಾಂಪಿಯನ್
*4*100 ರಿಲೇ ಚಾಂಪಿಯನ್
*ಬಾಲ್ ಬ್ಯಾಡ್ಮಿಟನ್ ದ್ವಿತೀಯ
*4*400ರಿಲೇ ದ್ವಿತೀಯ
ಸಹ್ಯಾದ್ರಿ ಆಡಳಿತ ಮಂಡಳಿ ಅಭಿನಂದನೆ
ಈ ಅಪೂರ್ವ ಕ್ರೀಡಾ ಸಾಧನೆ ಮಾಡಿದ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ಎಂ ಎಸ್ ಹಾಗೂ ಅಥ್ಲೆಟಿಕ್ ವಿಭಾಗದಲ್ಲಿ ಕೋಚ್ಆದ ಮೊಹಮ್ಮದ್ ಸಿರಾಜ್ ಇವರಿಗೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ,ಪದಾಧಿಕಾರಿಗಳು , ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಉಪನ್ಯಾಸ ವೃಂದದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.