ವಿರೇಶ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
– ಹೊಸೂರು ಗುಡ್ಡೇಕೇರಿಯ ಸಮಾಜ ವಿಜ್ಞಾನ ಶಿಕ್ಷಕ ವಿರೇಶ್ ಅವರಿಗೆ ಗೌರವ
– ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ಮೂಲಕ ಸಾಧನೆ ಮಾಡಿದ ಶಿಕ್ಷಕ
– ಶಿಕ್ಷಕಿ ಭಾಗೀರಥಿ, ಉಪನ್ಯಾಸಕ ವಾಸುದೇವ ಕೆ.ಹೆಚ್ ಅವರಿಗೆ ಪ್ರಶಸ್ತಿ
NAMMUR EXPRESS NEWS
ತೀರ್ಥಹಳ್ಳಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ನೀಡುವ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆ ವಿಭಾಗದಲ್ಲಿ 20 ಶಿಕ್ಷಕರು, ಪ್ರೌಢಶಾಲೆ ವಿಭಾಗದಲ್ಲಿ 11 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲೇ ತನ್ನ ಸಾಧನೆ ಹಾಗೂ ಶೈಕ್ಷಣಿಕ ಾತಾವರಣ, ಕ್ರೀಡೆ ಮೂಲಕ ಗಮನ ಸೆಳೆದಿರುವ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಸಮಾಜ ವಿಜ್ಞಾನ ಸಹ ಶಿಕ್ಷಕರಾದ ವಿರೇಶ್ ಟಿ. ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ವೀರೇಶ್ ಅವರು ಕಳೆದ 14 ವರ್ಷದ ಸೇವೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ 30 ಕ್ಕಿಂತ ಹೆಚ್ಚು ಮಕ್ಕಳು 100/100 ಅಂಕ ಗಳಿಸಿದ್ದಾರೆ. ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದ ಶಿಕ್ಷಕರಾಗಿದ್ದಾರೆ. ಎಸ್.ಎಸ್.ಎಲ್.ಸಿಯಲ್ಲಿ ವಿಷಯ ಅತ್ಯುತ್ತಮ ಸರಾಸರಿ ತಾಲೂಕು ಮಟ್ಟದಲ್ಲಿ ಸಾಧನೆ, ಮೂರು ರಾಜ್ಯ ಮಟ್ಟದ ರಸಪ್ರಶ್ನೆ ಗೆಲ್ಲಿಸಿದ ಮಾರ್ಗದರ್ಶಿ ಶಿಕ್ಷಕ, ಕೆರಿಯರ್ ಗೈಡ್ ಮಾಡಿ 5-6 ಮಕ್ಕಳಿಗೆ ಸರ್ಕಾರಿ ನೌಕರಿ ದೊರೆಯುವಂತೆ ಮಾಡಿದ ಶಿಕ್ಷಕ, ಕಲಿಕಾ ಸ್ಪೂರ್ತಿ 9ನೇ ತರಗತಿ ಪಠ್ಯ ಪುಸ್ತಕ ರಚನೆಯ ಸದಸ್ಯ, ಶಾಲೆಯ ಸಮಗ್ರ ಪ್ರಗತಿಯಲ್ಲಿ ಮತ್ತು ದಶಕದ ಕ್ರೀಡಾ ಸಾಧನೆಯಲ್ಲಿ ಬೆನ್ನೆಲುಬು ಆಗಿ ನಿಂತ ಶಿಕ್ಷಕ ಎಂಬ ಖ್ಯಾತಿ ಗಳಿಸಿದ್ದಾರೆ. ತಮ್ಮ ಸೇವೆ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದರು.
ಶಿಕ್ಷಕಿ ಭಾಗೀರಥಿ, ಉಪನ್ಯಾಸಕ ವಾಸುದೇವ ಕೆ.ಹೆಚ್ ಅವರಿಗೆ ಪ್ರಶಸ್ತಿ
ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿವಮೊಗ್ಗದ ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾಗೀರಥಿ.ಎಂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಿಪ್ಪನ್ಬಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ವಾಸುದೇವ ಕೆ.ಹೆಚ್ ಅತ್ಯುನ್ನತ ಉಪನ್ಯಾಸಕರಿಗೆ ಪ್ರಶಸ್ತಿ ಲಭಿಸಿದೆ.
ಎಲ್ಲಾ ಸಾಧಕ ಶಿಕ್ಷಕರಿಗೆ ನಮ್ಮೂರ್ ಎಕ್ಸ್ ಪ್ರೆಸ್ ಶುಭಾಶಯ ಸಲ್ಲಿಸಿದೆ.