ತೀರ್ಥಹಳ್ಳಿಯಲ್ಲಿ ಯಶಸ್ವಿ ರಾಜ್ಯ ಮಟ್ಟದ ಚೆಸ್ ಪಂದ್ಯಾಟ
– ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ಅಚ್ಚುಕಟ್ಟಿನ ಆಯೋಜನೆ
– ಶಾಸಕ ಆರಗ ಜ್ಞಾನೇಂದ್ರ ಸೇರಿ ಅನೇಕ ಗಣ್ಯರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತೀಚಿಗೆ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಲೆನಾಡಲ್ಲೇ ಅತ್ಯುತ್ತಮ ಆಯೋಜನೆ ಮೂಲಕ ಗಮನ ಸೆಳೆಯಿತು. ನೂರಾರು ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಆಟ ಪ್ರದರ್ಶನ ಮಾಡಿದರು.
ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಆಗಮಿಸಿದ್ದು, ಸ್ಪರ್ಧೆಯಲ್ಲಿ ಅಗಸ್ಟಿನ್ ಅವರು 1973 ರೇಟಿಂಗ್ ನೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ, ಮಂಜುಶ್ರೀ ಕಪ್ ನ ವಿಜೇತರಾಗಿದ್ದಾರೆ.
ಎರಡನೇ ಸ್ಥಾನವನ್ನು 1853 ರೇಟಿಂಗ್ ನೊಂದಿಗೆ ಚಿರಂತ್ ಎಂ.ಡಿ, ತೃತೀಯ ಸ್ಥಾನವನ್ನು 1733 ರೇಟಿಂಗ್ ನೊಂದಿಗೆ ನವೀನ್ ಎಸ್ ಹೆಗ್ಡೆ, ನಾಲ್ಕನೇ ಸ್ಥಾನವನ್ನು 1492 ರೇಟಿಂಗ್ ನೊಂದಿಗೆ ವರ್ಣಿತ ವಿ. ಕುಂದರ್ ಮತ್ತು ಐದನೇ ಸ್ಥಾನವನ್ನು 1908 ರೇಟಿಂಗ್ ನೊಂದಿಗೆ ಅಜಿತ್ ಎಂಪಿ ಪಡೆದುಕೊಳ್ಳುವ ಮೂಲಕ ವಿಜಯಶಾಲಿಗಳಾಗಿದ್ದಾರೆ. ಸ್ಪರ್ಧೆಯ ಮೊದಲ ವಿಜೇತರಿಗೆ 15.000 ರೂಪಾಯಿ ಮತ್ತು ಟ್ರೋಫಿಯನ್ನು, ದ್ವಿತೀಯ ಸ್ಥಾನ ಪಡೆದವರಿಗೆ 12.000 ರೂಪಾಯಿ ಮತ್ತು ಟ್ರೋಫಿಯನ್ನು, ಮೂರನೇ ಸ್ಥಾನ ಪಡೆದವರಿಗೆ 10,000 ರೂಪಾಯಿ ಮತ್ತು ಟ್ರೋಫಿಯನ್ನು, ನಾಲ್ಕನೇ ಸ್ಥಾನ ಪಡೆದವರಿಗೆ 7,000 ರೂಪಾಯಿ ಮತ್ತು ಟ್ರೋಫಿಯನ್ನು ಹಾಗೂ ಐದನೇ ಸ್ಥಾನ ಪಡೆದವರಿಗೆ 5,000 ರೂಪಾಯಿ ಮತ್ತು ಟ್ರೋಫಿಯನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಎಚ್. ಎಮ್. ಸುರೇಶ್ ಅವರು ಮತ್ತು ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಟ್ರಸ್ಟಿಗಳು ಪಾಲ್ಗೊಂಡಿದ್ದರು.
ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್ ಕೆ. ಎನ್ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ನಾರಾಯಣರಾವ್, ಸುರೇಶ್ ಎಚ್ ಎಂ, ಶ್ರೀರಾಮು ಬಿ, ಟ್ರಸ್ಟಿಗಳಾದ ರಾಜೇಶ್ವರಿ., ಡಾ. ಋತ್ವಿಕ್ ಎಂ, ಗಿರೀಶ್ ಕುಮಾರ್, ರಾಮ ಶೇರೆಗಾರ, ಸತ್ಯನಾರಾಯಣ, ಡಾ. ರಿಷಿಕಾ ಎಂ ಭಾಗವಹಿಸಲಿದ್ದಾರೆ. ತೀರ್ಪುಗಾರರಾಗಿ ಪ್ರಾಣೇಶ್ ಯಾದವ್, ಲ.ಉಮೇಶ್, ಸಚಿನ್, ಚಂದ್ರಕಾಂತ್, ಅಬ್ಬಾಸ್, ನಾಗರಾಜ್, ವಿಲ್ಸನ್ ಅಂದ್ರಾಡೆ, ಶಶಿಧರ್ ನಾಯಕ, ರಾಮಕೃಷ್ಣ ಸೇರೆಗಾರ, ಕಾಮಧೇನು ನಾಗರಾಜ್, ಎಸ್. ಕೆ. ನಾಯಕ್, ಕಲ್ಪತರು ಚಂದ್ರಶೇಖರ, ಪಿ. ಶ್ರೀಧರ. ಸೇರಿ ಅನೇಕ ಗಣ್ಯರು ಹಾಜರಿದ್ದರು. ಈ ಪಂದ್ಯಾವಳಿಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.








