ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಶಿಕ್ಷಕರ ದಿನಾಚರಣೆ ಬಹಿಷ್ಕಾರ!
– ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿಕೆ ಸರಿಯಲ್ಲ
– ಸೇವಾ ಹಿರಿತನವಿದ್ದರೂ ಕೂಡ ಯಾವುದೇ ರೀತಿಯ ಮುಂಬಡ್ತಿ ಇಲ್ಲ
– ಉನ್ನತ ವಿದ್ಯಾಭ್ಯಾಸ ಪರಿಗಣನೆ ಇಲ್ಲದೆ ವರ್ಗಾವಣೆಯಲ್ಲೂ ಮೋಸ
– ಮುಖ್ಯ ಉಪಾಧ್ಯಾಯರ ಬಡ್ತಿಯಲ್ಲಿ ಅವಕಾಶ ವಂಚಿತರಾಗಿರುವುದು
– ಶಾಲೆಗಳಲ್ಲಿ ಪಾಠ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗದೆ ಬಹಿಷ್ಕಾರ
NAMMUR EXPRESS NEWS
ತೀರ್ಥಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದು, ಸೇವಾ ಹಿರಿತನವಿದ್ದರೂ ಕೂಡ ಯಾವುದೇ ರೀತಿಯ ಮುಂಬಡ್ತಿ ಇಲ್ಲ. ಉನ್ನತ ವಿದ್ಯಾಭ್ಯಾಸ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮುಖ್ಯ ಉಪಾಧ್ಯಾಯರ ಬಡ್ತಿಯಲ್ಲಿ ಅವಕಾಶ ವಂಚಿತರಾಗಿರುವುದು, ವರ್ಗಾವಣೆಯಲ್ಲಿ ಅಸಮರ್ಪಕ ನಿಯಮ ಖಂಡಿಸಿ ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆ ಮೇರೆಗೆ ಗುರುವಾರ ಶಿಕ್ಷಕರ ದಿನಾಚರಣೆ ಬಹಿಷ್ಕಾರ ಮಾಡಿ ಶಾಲೆಗಳಲ್ಲಿ ಪಾಠ ಮಾಡಿ ಶಿಕ್ಷಕರ ದಿನಾಚರಣೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದರಿಂದ ಏಳನೇ ತರಗತಿ ಪಾಠ ಬೋಧನೆ ಮಾಡುವ ಶಿಕ್ಷಕರಾಗಿ ನೇಮಕಾತಿ ಹೊಂದಿದ್ದು ಇದೀಗ ಸರ್ಕಾರ ವೃಂದ ಮತ್ತು ನೇಮಕಾತಿ ( C ಅಂಡ್ R) ನಿಯಮದನ್ವಯ ಈ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಂದಿಂದ ಐದನೇ ತರಗತಿಗೆ ಮಾತ್ರ ಬೋಧಿಸಲು ಅರ್ಹರೆಂದು ಹಿಂಬಡ್ತಿ ನೀಡಿದೆ. ಅಲ್ಲದೆ ಸೇವಾ ಹಿರಿತನವಿದ್ದು ಸುಮಾರು 20, 25, 30 ವರ್ಷಗಳ ಸೇವಾ ಹಿರಿತನವಿದ್ದರೂ (ಬಿಎ, ಬಿಎಡ್, ಎಮ್ ಎ ) ಉನ್ನತ ವ್ಯಾಸಂಗ ಮಾಡಿದ್ದರೂ ಕೂಡ ಯಾವುದೇ ರೀತಿಯ ಮುಂಬಡ್ತಿ ಕೊಡದೆ 2017 ರಿಂದ ಅನ್ವಯವಾದ ಹೊಸ ನಿಯಮದಡಿ ಪ್ರಾಥಮಿಕ ಶಾಲಾ ಶಿಕ್ಷಕರನ್ನ ( ಸಿ ಅಂಡ್ ಆರ್) ನಿಯಮದಡಿ ಪೂರ್ವನ್ವಯ ಗೊಳಿಸಿ ಹಿಂಬಡ್ತಿ ನೀಡಿದೆ. ಯಾವುದೇ ಮುಖ್ಯೋಪಾಧ್ಯಾಯರ ಹುದ್ದೆಗಳಲ್ಲಿ ಸೇವಾ ಜೇಷ್ಠತೆ ಹಾಗೂ ಉನ್ನತ ವಿದ್ಯಾಭ್ಯಾಸವನ್ನು ಪರಿಗಣನೆಗೆ ತೆಗೆದುಕೊಳ್ಳದೆ ವರ್ಗಾವಣೆಯಲ್ಲೂ ಸ್ಥಳಾವಕಾಶ ಸಿಗದೆ ಶಿಕ್ಷಕರು ಮನನೊಂದಿದ್ದಾರೆ. ಆದರೆ ಇಲಾಖೆಯು ಮುಂಬಡ್ತಿ ನೀಡದೆ ಇದೆ. ಪಿ ಎಸ್ ಟಿ ಶಿಕ್ಷಕರಿಂದ ಪಾಠ ಬೋಧನೆ ಕ್ರೀಡಾಕೂಟ, ಪ್ರತಿಭಾ ಕಾರಂಜಿ ಹಾಗೂ ಇತರೆ ಇಲಾಖೆ ಕಾರ್ಯಗಳನ್ನು ಮಾಡಿಸುತ್ತಿದೆ. 2017ರ ಸಿ ಅಂಡ್ ಆರ್ ನಿಯಮದನ್ವಯ 6 ಮತ್ತು 7ನೇ ತರಗತಿಗೆ ಜಿಪಿಟಿ ಶಿಕ್ಷಕರೆಂದು ಹೊಸ ನೇಮಕಾತಿ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತುಂಬಾ ಅನ್ಯಾಯ ಮಾಡಿದೆ. ಆದುದ್ದರಿಂದ ಈ ದಿನ ತಾಲ್ಲೂಕು ಆಡಳಿತ ವತಿಯಿಂದ ನಡೆಸಿದ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು /ಕಾರ್ಯದರ್ಶಿ /ಪದಾಧಿಕಾರಿಗಳು / ನಿರ್ದೇಶಕರು,/ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತೀರ್ಥಹಳ್ಳಿ ಘಟಕ ಕರೆ ಕೊಟ್ಟಿತ್ತು.
ಹಿಂಬಡ್ತಿ ಕೊಟ್ಟು ಶಾಲಾ ಶಿಕ್ಷಕರ ಸೇವಾ ಹಿರಿತನ ಗುರುತಿಸದೆ ಇರುವ ಬಗ್ಗೆ ತಾಲೂಕು ಸಂಘದ ಕರೆ ಮೇರೆಗೆ ಎಲ್ಲಾ ಶಿಕ್ಷಕರು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮ ಬಹಿಷ್ಕಾರ ಮಾಡಿದ್ದಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಂತಿ ಎನ್. ಕೆ, ಕಾರ್ಯದರ್ಶಿಯವರಾದ ಲಕ್ಷ್ಮಣ್ ಟಿ ಆರ್, ಜಿಲ್ಲಾ ಶಿಕ್ಷಕರ ಸಂಘದ ಖಜಾಂಚಿ ಎಂ. ಸಿ ಮಂಜುನಾಥ್ ಅವರು ತಿಳಿಸಿದ್ದಾರೆ. ತಾಲ್ಲೂಕು ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಶಾಲಾ ಕರ್ತವ್ಯ ನಿರ್ವಹಿಸಿದ್ದಾರೆ. ಈ ಬಗ್ಗೆ ಮೊದಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಮುಖೇನ ಸಂಘ ಮಾಹಿತಿ ನೀಡಿತ್ತು. ಈ ಸರ್ಕಾರದ ಅಸರ್ಪ ನಿಯಮದ ಖಂಡಿಸಿ ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಹಾಗೂ ತಾಲೂಕಿನ 500ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಕ್ರಮ ಬಹಿಷ್ಕಾರ ಮಾಡಿ ಶಾಲಾ ಕರ್ತವ್ಯದಲ್ಲಿ ಹಾಜರಾಗಿದ್ದಾರೆ.