ಕಾಂಗ್ರೆಸ್ ಯುವ ನಾಯಕರ ವಿರುದ್ಧ ತಿರುಗಿಬಿದ್ದ ಯುವ ಬಿಜೆಪಿ!
– ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಯುವಕರು ಮಾಡುತ್ತಿದ್ದಾರೆ
– ಆದರ್ಶ್ ಹುಂಚದ ಕಟ್ಟೆ ಪರಿಚಯವೇ ಹಳ್ಳಿ ಜನರಿಗಿಲ್ಲ: ಮಹಾಂತ್
NAMMUR EXPRESS NEWS
ತೀರ್ಥಹಳ್ಳಿ: ಇತ್ತೀಚಿಗೆ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟು ಬಿಜೆಪಿಯ ಯುವ ಮೋರ್ಚಾ ನಾಯಕರು ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ತೀರ್ಥಹಳ್ಳಿ ಮಯೂರ ಹೋಟೆಲಿನಲ್ಲಿ ನ. 27ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ ಮಾತನಾಡಿ, ಕಾಂಗ್ರೆಸ್ ಮಿತ್ರರು, ಶಾಸಕರು, ನಾಯಕರು ಸಂಘಟನೆಯ ಬಗ್ಗೆ ಅವಹೇಳನ ಪದಗಳನ್ನು ಬಳಸಿ ಒಂದು ರೀತಿಯ ವಿಕೃತ ಮೆರೆಯುತ್ತಿದ್ದಾರೆ.ಈ ಬಾರಿಯ ದಸರಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದಿದ್ದು ಸುಮಾರು ಹತ್ತು ಸಾವಿರ ಜನರು ನೆರೆದಿದ್ದ ಕಾರ್ಯಕ್ರಮ ಇದಾಗಿದೆ. ಆದರೆ ಈ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದರು. ವಿರೋಧ ಪಕ್ಷದವರು ಸರಿ ಇಲ್ಲ ಎಂಬ ಪಟ್ಟವನ್ನು ನೀಡುತ್ತಾರೆ. ಈ ದಿನಗಳಲ್ಲಿ ವಿರೋಧ ಪಕ್ಷದವರಾಗಿ ಕಾರ್ಯನಿರ್ವಹಿಸುತ್ತಿದ್ದು ಪಕ್ಷದವರ ತಪ್ಪುಗಳನ್ನು ತೋರಿಸುವುದು ತಿದ್ದುವುದು ನಮ್ಮ ಆದ್ಯ ಕರ್ತವ್ಯ ಮಾಡಿದ್ದೆಲ್ಲವನ್ನು ಸರಿ ಎಂದು ಒಪ್ಪಿಕೊಳ್ಳಬೇಕೇ?? ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸಬಹುದು ಆದರೆ ನೀವು ಮಾಡುತ್ತಿರುವ ಕೆಲಸಗಳೇನು?? ಎಂದು ಪ್ರಶ್ನಿಸಿದರು.
ಪಟ್ಟಣದಲ್ಲಿ ಸಂಘಟನೆಯ ಪ್ರಬಲ ಶಕ್ತಿಯಾದ ತಾಲೂಕಿನ ಯುವ ಅಧ್ಯಕ್ಷರು ಸಂದೇಶ ನಂಜೇಶ ಎಂಬ ಹೇಳಿಕೆಯನ್ನು ನೀಡಿದ್ದಾರೆ ಸಂದೇಶ ಎಂಬುವವರು ಪಟ್ಟಣ ಪಂಚಾಯಿತಿಯಿಂದ ನಾಲ್ಕು ಬಾರಿ ನಿರಂತರ ಆಯ್ಕೆಯಾದವರು ಹೇಳಿಕೆ ನೀಡಿದವರೇ ನಂಜು ಅಂಶವನ್ನು ಇಟ್ಟುಕೊಂಡು ಬೇರೆಯವರ ಮೇಲೆ ಉಗುಳುತ್ತಿದ್ದಾರೆ. ಸಂದೇಶ್ ಜವಳಿ ಅವರು ಒಂದು ಸಣ್ಣ ಸಮುದಾಯದ ಪ್ರಬಲ ನಾಯಕರು ಸಮಾಜದ ಅಧ್ಯಕ್ಷರು ಕೂಡ ಹೌದು, ಅವರಿಗೆ ಆ ರೀತಿಯ ವ್ಯಂಗ್ಯ ಸಮಾಜಕ್ಕೆ ಮಾಡುವ ಅವಮಾನಕ್ಕೆ ಸರಿ. ಯುವ ಮೋರ್ಚಾ ಪರವಾಗಿ ಹೇಳಿಕೆಯನ್ನು “ನಾವೆಲ್ಲ ಖಂಡಿಸುತ್ತೇವೆ” ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ಹೇಳಿದರು.
ಹಳ್ಳಿಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್ ಮಾತ್ರೆ ಇಲ್ಲದೆ ಸಾಮಾನ್ಯ ಜನರು ಪರದಾಡುವಂತಾಗಿದೆ. ಅಲ್ಲದೆ ಜನರು ಜೆ.ಸಿ ಆಸ್ಪತ್ರೆಗೆ ಹೋಗಿ ಮಾತ್ರೆಗಳನ್ನು ಪಡೆಯುವ ಅಸಹಾಯಕ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದನ್ನು ಆದರ್ಶ ಹುಂಚದಕಟ್ಟೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಅತಿಥಿ ಶಿಕ್ಷಕರಿಗೆ ವೇತನವಿಲ್ಲದೆ 8 ತಿಂಗಳುಗಳಾಗಿದೆ, ಆಸ್ಪತ್ರೆಯಲ್ಲಿ ಡಿ ಗ್ರೂಪ್ನಲ್ಲಿ ಕಾರ್ಯನಿರ್ವಹಿಸುವವರಿಗೆ ಮೂರು ತಿಂಗಳುಗಳಿಂದ ಸಂಬಳವಿಲ್ಲ ಅದರ ವಿರುದ್ಧ ಯಾವುದೇ ಪತ್ರಿಕಾಗೋಷ್ಠಿಯಾಗಲಿ, ಹೋರಾಟವಾಗಲಿ ನಡೆಸುತ್ತಿಲ್ಲ ಬೇರೆಯವರ ತಪ್ಪುಗಳನ್ನು ಗುರುತಿಸುವ ಮೊದಲು ತಮ್ಮ ತಪ್ಪುಗಳನ್ನು ಮೊದಲು ಸರಿಪಡಿಸಿಕೊಳ್ಳಿ ಆಮೇಲೆ ಬಿಜೆಪಿಯವರನ್ನು ಪ್ರಶ್ನಿಸಲು ಬನ್ನಿ ಎಂದರು.
* ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಯುವಕರು ಮಾಡುತ್ತಿದ್ದಾರೆ: ಮಹಾಂತ ಗೌಡ
ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ಯುವ ನಾಯಕರು ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಒಬ್ಬ ಶಾಸಕ 3,200 ಕೋಟಿ ಅನುದಾನ ತರುವುದು ಸುಲಭದ ವಿಷಯವಲ್ಲ. ಸಾಧ್ಯವಾದರೆ ಅವರನ್ನು ಅಭಿನಂದಿಸಬೇಕೇ ಹೊರತು ಟೀಕಿಸುವುದಲ್ಲ ಎಂದು ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹಾಂತ್ ಹೇಳಿದ್ದಾರೆ. ಪಟ್ಟಣ ಮತ್ತು ಮಾಧ್ಯಮಗಳಲ್ಲಿ ಲೈವ್ ಮಾಡುವುದು ಬಿಟ್ಟು ಹಳ್ಳಿ ಹಳ್ಳಿಗಳಿಗೆ ಹೋಗಿ ಜನರನ್ನು ಸಂಪರ್ಕಿಸಿದರೆ ಆರಗ ಜ್ಞಾನೇಂದ್ರರವರ ಸಾಧನೆ ಕಾರ್ಯಗಳ ಬಗ್ಗೆ ತಿಳಿಯುತ್ತಿತ್ತು, ಅವರು ಹಳ್ಳಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ ಇಲ್ಲದಿದ್ದರೆ ಐದು ಬಾರಿ ಶಾಸಕರಾಗುತ್ತಿರಲಿಲ್ಲ ಎಂದು ಹೇಳಿದರು.
ಕಾಂಗ್ರೇಸ್ ಯುವಕರು ಇವತ್ತಿನ ರಾಜಕಾರಣಿ ಎಂದರೆ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವುದು ಎಂದು ತಿಳಿದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದರೆ ನಾಯಕರಾಗಲು ಸಾಧ್ಯವಿಲ್ಲ, ಆ ಭ್ರಮೆಯಿಂದ ಹೊರಬರಬೇಕು. ಜನಗಳಿಂದ ಜನಗಳಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ನಾವು ಸೇರಿಕೊಂಡಿದ್ದೇವೆ ಆ ಅವಕಾಶವನ್ನು ಉಳಿಸಿಕೊಳ್ಳಬೇಕು. ನಾವು ಜನರ ಜೊತೆ ನಿಲ್ಲಬೇಕೆ ಹೊರತು ಅದನ್ನು ಬಿಟ್ಟು ಟೀಕಿಸುವುದು, ವಿರೋಧಿಸುವುದು ಸರಿಯಲ್ಲ ಎಂದಿದ್ದಾರೆ. ಜ್ಞಾನೇಂದ್ರ ಅವರನ್ನು ಟೀಕಿಸುವ ನೈತಿಕತೆಯೇ ಅವರಿಗಿಲ್ಲ ಹೋರಾಟದ ಮಾನಸಿಕತೆ ಮನೋಭಾವವನ್ನೇ ಬೆಳೆಸಿಕೊಂಡಿಲ್ಲ. ಆದರ್ಶ ಹೊಂಚದ ಕಟ್ಟೆ ಪರಿಚಯವೇ ಹಳ್ಳಿ ಜನರಿಗಿಲ್ಲ ಯಾವುದೇ ಜನರನ್ನು ಸಂಪರ್ಕಿಸುವ ಕೆಲಸವನ್ನು ಮಾಡಿಲ್ಲ ಎಂದು ಹೇಳಿದರು.
ಯುವಕರನ್ನು ಕುಡುಕರನ್ನಾಗಿ ಮಾಡುತ್ತಿದ್ದೀರಿ…
ಯಾವುದೇ ವಿಚಾರ ಮಾತನಾಡಬೇಕಾದರೆ ತಿಳಿದು ಹಿನ್ನೆಲೆ ಅರಿತು ಮಾತನಾಡುವುದು ಉತ್ತಮ ಕಾಂಗ್ರೆಸ್ ಯುವಕರನ್ನು ಒಳ್ಳೆಯ ದಾರಿಗೆ ತರುವುದು ಕರ್ತವ್ಯ. ಆದರೆ ಯುವಕರನ್ನು ಇವರು ಒಳ್ಳೆಯ ದಾರಿಗೆ ತರುತ್ತಿದ್ದಾರೋ ಅಥವಾ ಕುಡುಕರನ್ನಾಗಿ ಮಾಡುತ್ತಿದ್ದರೋ ಎಂದು ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ಪ್ರಶ್ನಿಸಿದರು. ಪ್ರಧಾನ ಕಾರ್ಯದರ್ಶಿ ಚೇತನ್ ಗಡಿಕಲ್, ಉಪಾಧ್ಯಕ್ಷ ಸತೀಶ್ ಇಂದಿರಾ ನಗರ, ಯುವ ಮೋರ್ಚ ಮಂಡಗದ್ದೆ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕವಿರಾಜ್ ಚಂದಕಮಕ್ಕಿ, ಕುಪ್ಪಳ್ಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಸಚಿನ್ ಬೊಮ್ಮನಹಳ್ಳಿ, ಆಗುಂಬೆ ಮಹಾಶಕ್ತಿ ಕೇಂದ್ರ ಅಭಿ ಕೈಮರ ಸೇರಿ ಯುವ ಮುಖಂಡರು ಉಪಸ್ಥಿತರಿದ್ದರು.