ತೀರ್ಥಹಳ್ಳಿ: ಮಹಿಳೆ ಕುತ್ತಿಗೆಯಲ್ಲಿ ಚಿನ್ನದ ಸರಕ್ಕೆ ಕೈಹಾಕಿ ಪರಾರಿ!
– ಸಮಯಪ್ರಜ್ಞೆ ಪ್ರದರ್ಶಿಸಿದ ಮಹಿಳೆಯಿಂದ ಚಾಕು ಇರಿತ
ತೀರ್ಥಹಳ್ಳಿ ಕುಶಾವತಿ ಪಾರ್ಕ್ನಲ್ಲಿ ಸಿಸಿಟಿವಿ ಕಣ್ಗಾವಲು
– ಪಾರ್ಕಿನ ಸ್ವಚ್ಛತೆ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳ್ಳತನ ಪ್ರಕರಣ ಜಾಸ್ತಿ ಆಗಿದೆ ಎಂಬ ಆರೋಪದ ನಡುವೆ ತೀರ್ಥಹಳ್ಳಿ ಯುವ ಕಾಂಗ್ರೆಸ್ ಮುಖಂಡ ಕುಶಾವತಿ ವಾಸು ಅವರ ಪತ್ನಿ ತಮ್ಮ ದಿನಸಿ ಅಂಗಡಿಯಲ್ಲಿ ಇದ್ದಾಗ ಸರಗಳ್ಳನೊಬ್ಬ ಅವರ ಚಿನ್ನದ ಸರವನ್ನು ಕಿತ್ತು ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಈವೇಳೆ ಸಮಯಪ್ರಜ್ಞೆ ಪ್ರದರ್ಶಿಸಿದ ವಾಸು ಅವರ ಪತ್ನಿ ಅಲ್ಲೇ ಇದ್ದ ಚಾಕುವಿನಿಂದ ಕಳ್ಳನನ್ನು ಇರಿದಿದ್ದಾರೆ ಕಳ್ಳ ಸುರಿವ ರಕ್ತ ಗಾಯದೊಂದಿಗೆ ಪರಾರಿಯಾಗಿದ್ದಾನೆ. ತೀರ್ಥಹಳ್ಳಿ ಪೊಲೀಸರು ಅವನ ಪತ್ತೆಗೆ ಜಾಲ ಬೀಸಿದ್ದಾರೆ.
ತೀರ್ಥಹಳ್ಳಿ ಕುಶಾವತಿ ಪಾರ್ಕ್ನಲ್ಲಿ ಸಿಸಿಟಿವಿ ಕಣ್ಗಾವಲು!
ತೀರ್ಥಹಳ್ಳಿ ಕುಶಾವತಿ ಪಾರ್ಕ್ ಸಿಂಗಾರಗೊಂಡಿದೆ. ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಅಸಾದಿ ಅವರ ಅಧ್ಯಕ್ಷತೆಯಲ್ಲಿ ಪಾರ್ಕ್ ಅಲ್ಲಿ ಹೊಸ ಸೆಲ್ಫಿ ಪಾಯಿಂಟ್, ರಿಪೇರಿ ಕೆಲಸ, ವಿದ್ಯುತ್ ದೀಪ ಸೇರಿ ಅನೇಕ ಅಭಿವೃದ್ಧಿ ಕೆಲಸ ನಡೆದಿದೆ. ಇನ್ನು ಸಂಜೆಯ ವೇಳೆಯಲ್ಲಿ ಕುಶಾವತಿ ಪಾರ್ಕ್ನಲ್ಲಿ ಕೆಲ ಕಿಡಿಗೇಡಿಗಳು ಮದ್ಯಪಾನ ಮಾಡುವುದು ಹಾಗೂ ಪಾರ್ಕ್ನಲ್ಲಿ ಮಲಗುವಂತಹ ಅಸಭ್ಯ ಕೃತ್ಯಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ, ಪಾರ್ಕಿನ ಸ್ವಚ್ಛತೆ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕ್ರಮ ಕೈಗೊಂಡಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಸಾದಿ ಅವರ ನೇತೃತ್ವದಲ್ಲಿ ಪಾರ್ಕಿನ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ರಮದ ಮೂಲಕ ಸಾರ್ವಜನಿಕ ಸ್ಥಳದ ಮೇಲಿನ ನಿಗಾವನ್ನು ಹೆಚ್ಚಿಸಿ, ಪಾರ್ಕ್ನಲ್ಲಿ ಶಿಸ್ತಿನ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಅಧ್ಯಕ್ಷ ಅಸಾದಿ ಅವರ ನೇತೃತ್ವದಲ್ಲಿ ಪುರಸಭೆ ಮುಂದಾಗಿದೆ.








