ಕ್ರೀಡೆಯಲ್ಲಿ ತೀರ್ಥಹಳ್ಳಿ ವಾಗ್ದೇವಿ ಸಾಧನೆ
– ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ
– ಪ್ರಥಮ ಸ್ಥಾನ ಪಡೆದು 04 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
NAMMUR EXPRESS NEWS
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 04 ವಿದ್ಯಾರ್ಥಿಗಳು ದಿನಾಂಕ 19- 10- 2025 ರಂದು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ತೀರ್ಥಹಳ್ಳಿ, ಕ್ಷೇತ್ರ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಚಿಟ್ಟೆಬೈಲಿನ ಪ್ರಜ್ಞಾಭಾರತಿ ಪ್ರೌಢಶಾಲೆಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾಮಟ್ಟದ 17 ವರ್ಷ ವಯೋಮಿತಿ ಒಳಗಿನ ಬಾಲಕ -ಬಾಲಕಿಯರ ಜಿಲ್ಲಾಮಟ್ಟದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ವಾಗ್ದೇವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಉತ್ತಮ ಪ್ರದರ್ಶನವನ್ನು ನೀಡಿ, ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.
ಕ್ರ.ಸಂ ಹೆಸರು ತರಗತಿ ಸ್ಪರ್ಧೆ ಸ್ಥಾನ
01 ಅಭಿನಂದನ್ ಹೊಳ್ಳ 10 ಚೆಸ್ ಪ್ರಥಮ
02 ಪ್ರಥಮ್ ಟಿ.ಎನ್ ರಾವ್ 9 ಚೆಸ್ ಪ್ರಥಮ
03 ಹಿಮಾಂಶು ಶ್ರೀವಾಸ್ತವ್ 9 ಚೆಸ್ ಪ್ರಥಮ
04 ಆದ್ಯಾ ಎ.ಹೆಚ್ 8 ಚೆಸ್ ಪ್ರಥಮ
05 ಸಾನ್ವಿ ಜೋಯ್ಸ್ 8 ಯೋಗ ತೃತೀಯ
ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಶಿಕ್ಷಕ ವೃಂದ ಮತ್ತು ಪೋಷಕರು ಅಭಿನಂದಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.








