ಕುಪ್ಪಳಿ ಕವಿ ಮನೆ ಮುಂದೆ ವಿಶ್ವಮಾನವ ಸಂದೇಶ ಫಲಕ!
– ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕದ ವಿಶೇಷ
– ಕುಪ್ಪಳಿಯ ಕವಿಮನೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ
NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಮನೆ ಕುಪ್ಪಳಿಯ ಕವಿಮನೆ ಆವರಣದಲ್ಲಿ ವಿಶ್ವಮಾನವ ಸಂದೇಶ ಫಲಕ ಅನಾವರಣಗೊಳಿಸಲಾಗಿದೆ.
ಕುವೆಂಪು ಅವರ ಮನೆ ಎದುರು ಹುಲ್ಲು ಹಾಸಿನ ಪಕ್ಕ ಈ ಫಲಕ ಅನಾವರಣ ಮಾಡಿದ್ದು ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ ಆಗಿದೆ.
ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕ
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಆವರಣದಲ್ಲಿ ವಿಶ್ವಮಾನವ ಸಂದೇಶವುಳ್ಳ 36 ಅಡಿ ಅಗಲ, 18 ಅಡಿ ಎತ್ತರದ ಫಲಕ ಇದಾಗಿದೆ. ಈ ಫಲಕವನ್ನು ಗ್ರಾನೈಟ್ನಲ್ಲಿ ಕೆತ್ತಲಾಗಿದೆ. ಕವಿ ಕುವೆಂಪು ಪರಿಚಯ, ಸಪ್ತಸೂತ್ರ, ಪಂಚಮಂತ್ರ, ವಿಶ್ವಮಾನವ ಗೀತೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. 9 ಅಡಿ ಎತ್ತರ 4 ಅಡಿ ಅಗಲವಿರುವ ಕುವೆಂಪು ಅವರ ಕಂಚಿನ ಉಬ್ಬು ಕಲಾಕೃತಿಯನ್ನೂ ಫಲಕ ಹೊಂದಿದೆ. ಇದಕ್ಕೆ ಒಟ್ಟು ₹16 ಲಕ್ಷ ವೆಚ್ಚವಾಗಿದ್ದು, ಮೈಸೂರಿನ ಕಲಾಿದ ಿತಿನ್ ಶೆಟ್ಟಿಗಾರ್ ಅವರು 9 ತಿಂಗಳಲ್ಲಿ ಫಲಕದಲ್ಲಿನ ಕೆತ್ತನೆಯನ್ನು ಪೂರ್ಣಗೊಳಿಸಿದ್ದಾರೆ.
ಕುಪ್ಪಳಿಯ ಕವಿಮನೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಕುವೆಂಪು ಅವರ ಆಶಯದಂತೆಯೂ ಫಲಕವನ್ನು ನಿರ್ಮಿಸಲಾಗಿದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್ ತಿಳಿಸಿದ್ದಾರೆ.
ಫಲಕ ಅನಾವರಣ ಕಾರ್ಯಕ್ರಮದ ರಂಗು
ಕುವೆಂಪು ಸಾರಿದ ವಿಶ್ವಮಾನವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಅದನ್ನು ಜೀವಂತವಾಗಿರಿಸಿ ತಲೆಮಾರಿಗೆ ದಾಟಿಸುವ ಕರ್ತವ್ಯ ನಮ್ಮೆಲ್ಲರದ್ದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಗುರುವಾರ ಕುಪ್ಪಳಿಯ ಕವಿಮನೆ ಆವರಣದಲ್ಲಿ ವಿಶ್ವಮಾನವ ಸಂದೇಶ ಫಲಕ ಅನಾವರಣಗೊಳಿಸಿ ಅವರು ಮಾತನಾಡಿ, ಕುಪ್ಪಳಿಗೆ ಭೇಟಿ ನೀಡುವ ವಿದೇಶಿಯರಿಗೂ ಕವಿ ಪರಿಚಯ ಸುಲಭವಾಗುವಂತೆ ಬಹಳ ಅಚ್ಚುಕಟ್ಟಾಗಿ ಫಲಕ ನಿರ್ಮಿಸಲಾಗಿದೆ. ಅನೇಕರಿಗೆ ಇದು ಸ್ಪೂರ್ತಿ, ಪ್ರೇರಣೆ ನೀಡಲಿದೆ ಎಂದರು.
“ಕುವೆಂಪು ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳದ ಅತ್ಯುತ್ತಮ ಶಿಕ್ಷಕ. ಸಮಸ್ಯೆ, ಸವಾಲುಗಳನ್ನು ಗಟ್ಟಿಯಾದ ನಿರ್ಧಾರದಿಂದ ಪ್ರಕಟಿಸಿ ತಮ್ಮ ವಕ್ತಿತ್ವದ ಅನಾವರಣ ಮಾಡಿದ್ದಾರೆ. ಕರ್ನಾಟಕ ಏಕೀಕರಣ, ಆಡಳಿತ ಭಾಷೆಗೆ ಒತ್ತಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಹೇಳಿದರು.
“ವಿಶ್ವಮಾನವ ಸಂದೇಶ ಮಾನವೀಯತೆಯ ಮುಂದಿನ ಹೆಜ್ಜೆಗೆ ದಾರಿದೀಪವಾಗಿದೆ. ಸಮಾನತೆ ಮಾರ್ಗವನ್ನು ವಿಶ್ವಕ್ಕೆ ಸಂಕ್ಿ್ತವಾಗಿ ವಿವರಿಸಿದ್ದಾರೆ” ಎಂದು ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶರತ್ ಅನಂತಮೂರ್ತಿ ಹೇಳಿದರು.
“ಗ್ರಾಮೀಣ ಬದುಕು ಆಧರಿಸಿ ಕಾವ್ಯ ಸೃಷ್ಟಿಸಿದ್ದ ಕುವೆಂಪು ಪರಸ್ಪರ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಕೃತಿಗಳ ಎಲ್ಲಾ ಸಾಂಕೇತಿಕ ಪಾತ್ರಗಳು ಮನುಷ್ಯತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಅಗಾಧ ಕೊಡುಗೆ ನೀಡಿದೆ” ಎಂದು ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಪ್ರಮುಖರಾದ ಎಂ.ಸಿ.ನರೇಂದ್ರ, ಸಸಿತೋಟ ದಯಾನಂದ, ಡಿ.ಎಂ.ಮನುದೇವ್, ಕೊಳವಾರ ನಾರಾಯಣಮೂರ್ತಿ, ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್ ಸಂಸ್ಥೆಯ ಸಂಚಾಲಕರಾದ ಸುಧಾಕರ್, ದೇವಂಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಬೋದ್ ಕುಪ್ಪಳಿ, ಸದಸ್ಯರಾದ ನಾಗರಾಜ್ ತಟ್ಟಾಪುರ, ಸರೋಜಾ ನಾಗಪ್ಪ ಗೌಡ ಸೇರಿದಂತೆ ಕವಿಮನೆ ಸಿಬ್ಬಂದಿ, ಸ್ಥಳೀಯರು ಇದ್ದರು.