- ಇಬ್ಬರ ನಡುವೆ ಹೈಕಮಾಂಡ್ ಸಂಧಾನ ಯಶಸ್ವಿ
- ಎಲ್ಲಾ ಕಾರ್ಯಕ್ರಮದಲ್ಲೂ ಇಬ್ಬರೂ ಒಟ್ಟಿಗೆ
- ಇಬ್ಬರೂ ನೆಟ್ಟಾಗಾದ್ರೆ ಮಾತ್ರ ಉಳಿಗಾಲ: ಕಾರ್ಯಕರ್ತರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಧಾನಕ್ಕೆ ಬಲಗೊಳ್ಳುತ್ತಿದೆ. ಅಲ್ಲದೆ ಫಿನಿಕ್ಸ್ ಅಂತೆ ಪುಟಿದೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇಬ್ಬರೂ ನಾಯಕರಾದ ಕಿಮ್ಮನೆ ಮತ್ತು ಮಂಜುನಾಥ ಗೌಡ ಒಟ್ಟಿಗೆ ಹಾಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ, ಪ್ರಬಲ ಮುಖಂಡರು ,ಪ್ರಮುಖ ಸಂಘಟಕರು, ಮತ್ತಿಮನೆ ಮಾಜಿ ಗ್ರಾಮ ಪಂಚಾಯತ್ ಸದಸ್ಯರು,ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅರಮನೆ ಕೊಪ್ಪ ಗೋಪಾಲ ರವರು , ಜೆಡಿಎಸ್ ನ ಪ್ರಮುಖ ಮುಖಂಡರಾದ ಶಶಿಧರ್ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾಜಿ ಸಚಿವರು, ಕೆಪಿಸಿಸಿ ವಕ್ತಾರರು ಆದ ಶ್ರೀಯುತ ಕಿಮ್ಮನೆ ರತ್ನಾಕರ್ ಮತ್ತು ಕೆಪಿಸಿಸಿ ಸಹಕಾರಿ ಘಟಕದ ಸಂಚಾಲಕರು ಆದ ಅರ್ ಎಮ್ ಮಂಜುನಾಥಗೌಡ ಒಟ್ಟಾಗಿ ಕಾಣಿಸಿಕೊಂಡಿ ದ್ದಾರೆ.
ಒಬ್ಬರು ಎಂಎಲ್ಎ ಒಬ್ಬರು ಎಂಎಲ್ಸಿ ಮಾಡ್ತೇವೆ ಎಂಬ ಡಿಕೆಶಿ ಭರವಸೆ ಬಳಿಕ ಇಬ್ಬರೂ ಒಟ್ಟಾಗುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ಕಾರ್ಯಕರ್ತರ ಆಸೆ ಕೂಡ ಅದೇ ಆಗಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಇಬ್ಬರೂ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಕಾಂಗ್ರೆಸ್ ಉದ್ದಾರ ಆಗಬಹುದು ಎಂಬ ಕಾರ್ಯಕರ್ತರ ಮಾತು ನಾಯಕರ ಕಿವಿಗೆ ತಾಗಿದೆ ಎಂದು ಹೇಳಲಾಗಿದೆ.