- ಗ್ರಾಹಕರ ಖಾತೆ ಮರು ಸೇರ್ಪಡೆ ಪ್ರಕ್ರಿಯೆ ಪೂರ್ಣ
- ತಂತ್ರಜ್ಞಾನ ಸಹಕಾರ ನೀಡಿದ ಆಕ್ಸೆಂಚರ್!
ಬೆಂಗಳೂರು: ಆಕ್ಸೆಂಚರ್ ಮತ್ತು ಬ್ಯಾಂಕ್ ಆಫ್ ಬರೋಡಾ ಯಶಸ್ವಿಯಾಗಿ ಹಿಂದಿನ ವಿಜಯ ಬ್ಯಾಂಕ್ ಶಾಖೆಗಳು ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಗಳ ತಂತ್ರಜ್ಞಾನ ಸಮನ್ವಯನ್ನು ಪೂರ್ಣಗೊಳಿಸಿವೆ.
ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ತ್ರಿಮುಖ ವಿಲೀನ ಪ್ರಕ್ರಿಯೆಯ ನಂತರದ ಭಾಗವಾಗಿ ಈ ತಂತ್ರಜ್ಞಾನ ಸಮನ್ವಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆಕ್ಸೆಂಚರ್ ಇದೀಗ ಹಿಂದಿನ ದೇನಾ ಬ್ಯಾಂಕಿನ ಐಟಿ ವ್ಯವಸ್ಥೆಯನ್ನು ಬ್ಯಾಂಕ್ ಆಫ್ ಬರೋಡಾ ಜತೆ ಜೋಡಿಸಲಿದೆ.
ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಜತೆ 2019ರಲ್ಲಿ ವಿಲೀನವಾದಾಗ ದೇಶದ ಮೂರನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೃಷ್ಟಿಯಾಗಿತ್ತು. ಇದು ಪೂರ್ಣಗೊಂಡ ಬಳಿಕ, ಕ್ರೋಢೀಕೃತ ತಂತ್ರಜ್ಞಾನ ಕಂಪನಿಯಾಗಿ ಆಕ್ಸೆಂಚರ್ ಕಾರ್ಯ ನಿರ್ವಹಿಸುವ ಮೂಲಕ ದೇಶವ್ಯಾಪಿ ಗ್ರಾಹಕ ಸೇವೆಗಳನ್ನು ಮತ್ತು ಸುಮಾರು 9000 ಬ್ಯಾಂಕ್ ಶಾಖೆಗಳು ಹಾಗೂ 12000ಕ್ಕೂ ಅದಿ
ವಿಜಯಾ ಬ್ಯಾಂಕ್ನ 1900ಕ್ಕೂ ಅಧಿಕ ಶಾಖೆಗಳ ಸುಮಾರು 21 ದಶಲಕ್ಷ ಗ್ರಾಹಕರು ಇದೀಗ ಸುಲಲಿತವಾಗಿ ಬ್ಯಾಂಕ್ ಆಫ್ ಬರೋಡಾಗೆ ವಲಸೆ ಬಂದಂತಾಗಿದೆ. ವಹಿವಾಟು ನಿರಂತರತೆ ಮೇಲೆ ಯಾವುದೇ ಪರಿಣಾಮವಾಗಿಲ್ಲ. ವಿಜಯ ಬ್ಯಾಂಕ್ ಗ್ರಾಹಕರು ಇನ್ನೂ ಅಕೌಂಟ್ ಬದಲು ಮಾಡಿಕೊಳ್ಳದಿದ್ದಲ್ಲಿ ತಮ್ಮ ಬ್ಯಾಂಕ್ ಸಂಪರ್ಕಿಸಿ!.