- ಕೋವಿಡ್-19 ಸಲಹಾ ಸಮಿತಿಗೆ ನೇಮಕ
- ಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿಗೆ ಹುದ್ದೆ
ವಾಷಿಂಗ್ಟನ್: ಇತ್ತೀಚೆಗಷ್ಟೆ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್ ಅವರು ರಚಿಸಿರುವ ಅಮೆರಿಕಾ ಕೋವಿಡ್-19 ಸಲಹಾ ಸಮಿತಿಗೆ ತಮಿಳುನಾಡು ಮೂಲದ ಡಾ.ಸಲೈನ್ ಗೌಂಡರ್ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಇದೇ ಸಮಿತಿಗೆ ಮಂಡ್ಯ ಮೂಲದ ಡಾ.ವಿವೇಕ್ ಎಚ್.ಮೂರ್ತಿ ಅವರು ಸಹ ಅಧ್ಯಕ್ಷರಾಗಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಭಾರತದ ಪತಾಕೆ ಹಾರುತ್ತಿದೆ.
ಡಾ.ಸಲೈನ್ ಅವರು ನ್ಯೂಯಾರ್ಕ್ನ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ಕ್ಲಿನಿಕಲ್ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನಡುವೆ ಈ ಹುದ್ದೆ ಭಾರತೀಯರಿಗೆ ಹೆಮ್ಮೆ ತರಿಸಿದೆ.