- ಪಡುಕೋಣೆ ವ್ಯವಸ್ಥಾಪಕಿಗೆ ವಿಚಾರಣಾ ಸಮನ್ಸ್
ಮುಂಬೈ: ಡ್ರಗ್ಸ್ ಹಗರಣದ ಸುಳಿ ಎತ್ತ ಎತ್ತಲೋ ತಿರುಗುತ್ತಿದೆ. ಬಾಲಿವುಡ್, ಸ್ಯಾಂಡಲ್ವುಡ್ ನಟಿಯರ ಸುತ್ತ ಗಿರಕಿ ಹೊಡೆಯುತ್ತಿರುವ ಹಗರಣ ಈಗ ಮತ್ತೆ ದೀಪಿಕಾ ಪಡಕೋಣೆ ಬಳಿ ಬಂದಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ (ಮ್ಯಾನೇಜರ್) ಕರಿಷ್ಮಾ ಪ್ರಕಾಶ್ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ(ಎನ್.ಸಿ.ಬಿ.) ವಿಚಾರಣೆಗೆ ಕರೆದಿದೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ.
ಮಂಗಳವಾರ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಅವರ ಮುಂಬೈ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಎನ್,ಸಿ,ಬಿ, ಸಮನ್ಸ್ ಕೊಟ್ಟಿದೆ.
ನಟಿಯರಾದ ರಾಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಕಳೆದ ತಿಂಗಳು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ತನಿಖೆಯಲ್ಲಿ ಏಜನ್ಸಿ ವಿಚಾರಣೆ ನಡೆಸಿತ್ತು. ಈಗಾಗಲೇ ಕನ್ನಡದ ನಟಿಯರಾದ ಸಂಜನಾ, ರಾಗಿಣಿ ಜೈಲಲ್ಲಿದ್ದಾರೆ.