- ಯೂಟ್ಯೂಬರ್ ವಿರುದ್ಧ 500 ಕೋಟಿ ಮಾನನಷ್ಟ ಕೇಸ್
- ನಟ ಅಕ್ಷಯ್ ಕುಮಾರ್ ಹೆಸರಿಗೆ ಅವಮಾನ ಆರೋಪ
ಮುಂಬೈ: ಯಾರದೋ ಹೆಸರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಬಳಸುವ ಮುನ್ನ ಹುಷಾರ್..!. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಬೆಳೆಸಿದ ರಶೀದ್ ಸಿದ್ದಿಕಿ ಎಂಬ ಯೂಟ್ಯೂಬರ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಿದ್ಧಕಿ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 15 ಲಕ್ಷ ರೂ.ಗಳಿಸಿದ್ದಾರೆ. ಅವರ ಫಾಲೋವರ್ಸ್ಗಳು 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಾಗಿದ್ದರು.
ಈ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿ ಎಂಬಾತನ್ನು ಈ ಹಿಂದೆ ಬಂಧಿಸಲಾಗಿತ್ತು. ಜನರನ್ನು ದಾರಿ ತಪ್ಪಿಸಲು ಮತ್ತು ಹಲವಾರು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡಲು ಯೂಟ್ಯೂಬರ್ ಡಿಜಿಟಲ್ ಮಾಧ್ಯಮವನ್ನು ಬಳಸಲಾಗಿದೆ. ತಮ್ಮ ವೀಡಿಯೊಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಅಕ್ಷಯ್ ಎಂದು ಹೆಸರಿಸಿದ್ದಾರೆ ಮತ್ತು ವಿವಿಧ ಆರೋಪಗಳನ್ನು ಮಾಡಿದ್ದಾರೆ.
ಸುಶಾಂತ್ ಅವರು “ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ” ನಂತಹ ದೊಡ್ಡ ಚಿತ್ರದಲ್ಲಿ ನಟಿಸಿದ್ದು ಅಕ್ಷಯ್ ಅಸಮಾಧಾನ ಹೊಂದಿದ್ದರು. ಅಕ್ಷಯ್ ಕುಮಾರ್ ಅವರು ಆದಿತ್ಯ ಠಾಕ್ರೆ ಮತ್ತು ಮುಂಬೈ ಪೆÇಲೀಸರೊಂದಿಗೆ “ರಹಸ್ಯ ಸಭೆ” ನಡೆಸಿದ್ದಾರೆ ಎಂದು ವೀಡಿಯೋವೊಂದರಲ್ಲಿ ಆರೋಪಿಸಿದ್ದರು.
ಬಿಹಾರ ಮೂಲದ ಸಿವಿಲ್ ಎಂಜಿನಿಯರ್ ರಶೀದ್ ಸಿದ್ದಿಕಿ ಅವರ ಮೇಲೆ ಮಾನಹಾನಿ, ಸಾರ್ವಜನಿಕ ಕಿಡಿಗೇಡಿತನ ಮತ್ತು ಉದ್ದೇಶಪೂರ್ವಕ ಅವಮಾನ ಆರೋಪವಿದೆ. ಸಿದ್ದಿಕಿ ಅವರು ಅಕ್ಷಯ್ ಅವರನ್ನು ದಿವಂಗತ ನಟ ಸುಶಾಂತ್ ಅವರ ಗೆಳತಿ, ನಟಿ ರಿಯಾ ಚಕ್ರವರ್ತಿಯೊಂದಿಗೆ ಸಂಪರ್ಕ ಹೊಂದಿದ್ದರು, ರಿಯಾ ಕೆನಡಾಕ್ಕೆ ತಪ್ಪಿಸಿಕೊಳ್ಳಲು ನಟ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.