- 2 ದಿನ ಮಳೆ ಆಟ: ಜನತೆಗೆ ಪ್ರಾಣ ಸಂಕಟ
- ತಮಿಳುನಾಡಲ್ಲಿ ಸರ್ಕಾರಿ ರಜೆ ಘೋಷಣೆ
ಬೆಂಗಳೂರು: ತಮಿಳುನಾಡು ಮೂಲಕ ನಿವಾರ್ ಚಂಡಮಾರುತ ಆರ್ಭಟಿಸುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ಆಪಾಯದ ಸೂಚನೆ ನೀಡುರುವ ಜಂಡಮಾರುತ ರಾಜ್ಯಕ್ಕೂ ಅಬ್ಬರಿಸಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಕರ್ನಾಟಕಕ್ಕೆ ಚಂಡಮಾರುತ ಅಪ್ಪಳಿಸುತ್ತಿದ್ದು, ಇದರ ಪರಿಣಾಮ ಬೆಂಗಳೂರು ಸೇರಿದಂತೆ ಹಲವೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ನಿವಾರ್ ಚಂಡಮಾರುತ ಈಗಾಗಲೇ ತಮಿಳುನಾಡು-ಪುದುಚೇರಿ ಕಡಲ ತೀರಕ್ಕೆ ಬಂದಪ್ಪಳಿಸಿದೆ. ಇಂದು ಸಂಜೆ ವೇಳೆಗೆ ನಿವಾರ್ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.
ಸಂಜೆ ವೇಳೆಗೆ 120 ಕಿಲೋಮೀಟರ್ ವೇಗದಲ್ಲಿ ನಿವಾರ್ ಅಪ್ಪಳಿಸುವ ಮುನ್ಸೂಚನೆ ಇದೆ. ಮುಂದಿನ 6 ಗಂಟೆಗಳಲ್ಲಿ ನಿವಾರ್ ಅಬ್ಬರ ಗೊತ್ತಾಗಲಿದೆ. ಮುಂಜಾಗ್ರತಾ ಕ್ರಮವಾಗಿ 1,200 ಮಂದಿಯ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಜೊತೆಗೆ ಪ್ರಧಾನಿ ಮೋದಿ ಕೂಡ ನೆರವಿನ ಭರವಸೆ ನೀಡಿದ್ದಾರೆ. ಅಲ್ಲದೇ ನಿವಾರ್ ಹಾವಳಿಯಿಂದಾಗುವ ಅನಾಹುತ ತಪ್ಪಿಸಲು ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ಪ್ರಮುಖ ಬಂದರುಗಳನ್ನು ಬಂದ್ ಮಾಡಲಾಗಿದೆ.
ಕರ್ನಾಟಕ, ಆಂಧ್ರ, ತೆಲಂಗಾಣದ ಮೇಲೆಯೂ ನಿವಾರ್ ಪರಿಣಾಮ ಬೀರಲಿದೆ. ಇಂದಿನಿಂದ ನವೆಂಬರ್ 27ರವರೆಗೆ ರಾಜ್ಯದ ಹಲವೆಡೆ ಮಳೆ ಆಗಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರದಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.