ವಿಮಾನ ಪತನದಿಂದ ಒಂದೇ ಕುಟುಂಬದ ಐವರು ಸಾವು..!!
– ಒಬ್ಬನೇ ಪ್ರಯಾಣಿಕ ಪವಾಡಸದೃಶ ಪಾರು!
– ಭಾರತದ ಎರಡನೇ ಅತಿದೊಡ್ಡ ವೈಮಾನಿಕ ದುರ್ಘಟನೆ ಇದು
– ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಸಾವು..!!
NAMMUR EXPRESS NEWS
ವಿಮಾನ ಪತನದಿಂದ ಒಂದೇ ಕುಟುಂಬದ ಐವರು ಸಾವು..!!
ವಿಮಾನ ಪತನದಿಂದ ಒಂದೇ ಕುಟುಂಬದ ಐವರು ಸಾವು ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ಪೈಕಿ ಒಂದೇ ಕುಟುಂಬದ ಐವರು ಸೇರಿದ್ದಾರೆ. ಪ್ರತೀಕ್ ಜೋಶಿ ಮತ್ತು ಡಾ. ಕೋಮಿ ವ್ಯಾಸ್ ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ರಾಜಸ್ಥಾನದ ಬಾರಾದಿಂದ ಲಂಡನ್ಗೆ ತೆರಳುತ್ತಿದ್ದರು. ವಿಮಾನದಲ್ಲಿ ಕುಳಿತ ಬಳಿಕ ನಗುತ್ತಾ ಅವರು ತೆಗೆದುಕೊಂಡ ಕೊನೆಯ ಸೆಲ್ಪಿ ವೈರಲ್ ಆಗುತ್ತಿದ್ದು ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ. ವಿಮಾನದ ದುರಂತದಲ್ಲಿ ಅಗಲಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
– ಒಬ್ಬನೇ ಪ್ರಯಾಣಿಕ ಪವಾಡಸದೃಶ ಪಾರು!
ಅಹಮದಾಬಾದ್ : ಗುರುವಾರ ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ವ್ಯಕ್ತಿಯೊಬ್ಬರು ಪವಾಡ ಸದೃತವಾಗಿ ಬದುಕುಳಿದಿದ್ದಾರೆ. ಭಾರತ ಮೂಲದ ಬ್ರಿಟನ್ ಪ್ರಜೆ ವಿಶ್ವನಾಥ ಕುಮಾರ್ ರಮೇಶ್ (40) ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ. ನತದೃಷ್ಟ ವಿಮಾನದಲ್ಲಿ ಇವರು 11ಎ ಸೀಟಿನಲ್ಲಿ ಕುಳಿತಿದ್ದರು. ಅವರ ಎದೆ, ಕಣ್ಣು, ಪಾದಗಳಿಗೆ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ವಿಶ್ವನಾಥ ಕಳೆದ 20 ವರ್ಷಗಳಿಂದ ಲಂಡನ್ನಲ್ಲಿ ವಾಸವಿದ್ದರು. ಅವರ ಪತ್ನಿ ಹಾಗೂ ಮಗು ಕೂಡ ಲಂಡನ್ನಲ್ಲೇ ಇದ್ದಾರೆ.
– ಭಾರತದ ಎರಡನೇ ಅತಿದೊಡ್ಡ ವೈಮಾನಿಕ ದುರ್ಘಟನೆ ಇದು
ನವದೆಹಲಿ: 1996ರಲ್ಲಿ ಹರ್ಯಾಣದಲ್ಲಿ 2 ವಿಮಾನಗಳ ಡಿಕ್ಕಿ ಸಂಭವಿಸಿ 349 ಜನ ಸಾವನ್ನಪ್ಪಿದ್ದರು. ಹರ್ಯಾಣದ ದಾದ್ರಿ ಚಕ್ರಿ ಎಂಬಲ್ಲಿ ಅಂದು ಘಟನೆ ನಡೆದಿತ್ತು. ಅದಾದ ಬಳಿಕ ದೇಶದಲ್ಲಿ ಸಂಭವಿಸಿದ ಅತಿ ದೊಡ್ಡ ವಿಮಾನ ದುರಂತ ಇದಾಗಿದೆ. 1996 ರಲ್ಲಿ, ಸೌದಿ ಏರ್ಲೈನ್ಸ್ ಬೋಯಿಂಗ್ 747 ಮತ್ತು ಕಜಕಿಸ್ತಾನ್ ಏರ್ಲೈನ್ಸ್ ನಡುವೆ ಅಪಘಾತ ವಾಗಿತ್ತು. ಒಂದು ವಿಮಾನ ಟೇಕಾಫ್ ಆಗುತ್ತಿದ್ದರೆ ಇನ್ನೊಂದು ಇಳಿಯುತ್ತಿತ್ತು
– ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಸಾವು..!!
ಅಹಮದಾಬಾದ್: ಇಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ ಮಹಿಳೆಯೊಬ್ಬರು ಪ್ರಯಾಣಕ್ಕೂ ಮುನ್ನ, ತಮ್ಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರೂಪಾನಿ ಅವರು ಕಾಣುವಂತೆ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದರು. ಬಹುಶಃ ಅದು ಆಕೆಯ ಕೊನೆಯ ಸೆಲ್ಸಿ ಹಾಗೂ ಮಾಜಿ ಸಿಎಂ ಅವರ ಕೊನೆಯ ಫೋಟೋ ಆಗಿರಲೂಬಹುದು. ರೂಪಾನಿ ಅವರು ವಿಮಾನ ದುರಂತದಲ್ಲಿ ಹತರಾದ ರಾಜ್ಯದ 2ನೇ ಸಿಎಂ. 1965ರಲ್ಲಿ ಗುಜರಾತ್ನ ಮುಖ್ಯಮಂತ್ರಿ ಆಗಿದ್ದ ಬಲವಂತ್ ರಾಯ್ ಮೆಹ್ರಾ ಅವರೂ ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು. 1965ರ ಸೆ.19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಆಗ ಮೆಹ್ರಾ ಅವರು ದ್ವಾರಕಾ ಸಮೀಪದ ಮಿಥಾಪುರ್ನಿಂದ ಕಲ್ಗೆ ಸಣ್ಣ ವಿಮಾನ ಏರಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಾಕಿಸ್ತಾನದ ಪಡೆಗಳು ನಡೆಸಿದ ದಾಳಿಯಿಂದ ವಿಮಾನ ಪತನಗೊಂಡು ಮೆಹ್ರಾ ಮೃತಪಟ್ಟಿದ್ದರು.








