- ಮಂಗಳೂರಿನ ಗುರುರಾಜ ಪೂಜಾರಿ ಸಾಧನೆ
- ಭಾರತಕ್ಕೆ ಎರಡನೇ ಪದಕ ಸಂಭ್ರಮ
NAMMUR EXPRESS NEWS
ಮಂಗಳೂರು: ಮಂಗಳೂರಿನ ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ನಡೆದ ಪುರುಷರ 61 ಕೆಜಿ ವಿಭಾಗದ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಗುರುರಾಜ ಪೂಜಾರಿ ಒಟ್ಟಾರೆ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗಳಿಸಿದರು. ಸ್ಟ್ಯಾಚ್ ವಿಭಾಗದಲ್ಲಿ 119 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 151 ಕೆಜಿ ಭಾರ ಎತ್ತಿ ಪದಕ ಖಚಿತಪಡಿಸಿಕೊಂಡರು. ಕೆನಡಾದ ಸಿಮಾರ್ಡ್ ವಿರುದ್ಧದ ನೇರಾನೇರ ಸ್ಪರ್ಧೆಯಲ್ಲಿ 1 ಕೆಜಿ ಹೆಚ್ಚು ಭಾರ ಎತ್ತಿ ಪದಕ ಗೆದ್ದ ಸಾಧನೆ ಮಾಡಿದರು.
ಮಲೇಷ್ಯಾದ ಮುಹಮದ್ ಅಜಿಲ್ ಬಿಡಿನ್ 285 ಕೆಜಿ ಭಾರ ಎತ್ತಿ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂ ಜಿನಿವಾದ ಮೊರಿಯಾ ಬಾರು 273 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.