- ವಿಶ್ವ ಯೋಗ ದಿನಾಚರಣೆಯಲ್ಲಿ ಹಾಜರ್
- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪತ್ರ
NAMMUR EXPRESS NEWS
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21ರಂದು ಅರಮನೆ ನಗರಿ ಮೈಸೂರಿಗೆ ಬರಲಿದ್ದಾರೆ.
ವಿಶ್ವ ಯೋಗ ದಿನಾಚರಣೆಯನ್ನು ಪ್ರಧಾನಿ ಮೈಸೂರಿನಲ್ಲಿ ಆಚರಿಸಲಿದ್ದಾರೆ. ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಪ್ರಧಾನಿಗಳು ಯೋಗಾ ದಿನಾಚರಣೆಗೆ ಚಾಲನೆ ನೀಡಿ ಬಳಿಕ ತಾವು ಕೂಡ ಯೋಗ ಮಾಡಲಿದ್ದಾರೆ.
ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ.