ನಮೋ ಬಂಪರ್ ಗಿಫ್ಟ್..!
– ಬಡವರಿಗೆ 5 ವರ್ಷ ಉಚಿತ ಅಕ್ಕಿ, ಸ್ತ್ರೀಶಕ್ತಿ ಸಂಘಗಳಿಗೆ ಕೃಷಿ ಡೋನ್ ವಿತರಣೆ
– ಏನಿದು ಯೋಜನೆ.. ಹೊಸ ಕೊಡುಗೆಗಳೇನು…?
NAMMUR EXPRESS NEWS
ನವದೆಹಲಿ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಡವರಿಗೆ ಆಹಾರದ ಖಾತ್ರಿ ಮತ್ತು ಮಹಿಳೆಯರಿಗೆ ಆದಾಯದ ಹೊಸ ಮೂಲ ಸೃಷ್ಟಿಸುವ ಎರಡು ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ.
ದೇಶದ 81.35 ಕೋಟಿ ಬಡವರಿಗೆ ತಿಂಗಳಿಗೆ 5ಕೆಜಿ ಉಚಿತ ಪಡಿತರ ಆಹಾರ ಧಾನ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದ್ದು, ಜೊತೆಗೆ 15, 000 ಸ್ತ್ರೀಶಕ್ತಿ ಸಂಘಗಳಿಗೆ ಕೃಷಿ ಡೋನ್ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಬಗ್ಗೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ ಶ್ಲಾಘಿಸಿತ್ತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಡವರಿಗೆ ಆಹಾರ ಒದಗಿಸುವ ಮೂಲಕ ಕಡುಬಡತನದಿಂದ ದೇಶವಾಸಿಗಳನ್ನು ಪಾರು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು. ವರದಿಯ ಪ್ರಕಾರ ಭಾರತದಲ್ಲಿ ದಿನಕ್ಕೆ 142 ರೂಪಾಯಿಗಿಂತ ಕಡಿಮೆ ಸರಾಸರಿ ಆದಾಯ ಇರುವ ಕಡುಬಡವರ ಸಂಖ್ಯೆ ಕೊರೋನಾ ಬಿಕ್ಕಟ್ಟಿನ 2020ರ ವರ್ಷದಲ್ಲಿಯೂ ಕೊರೋನಾ ಪೂರ್ವ 2019ರ ಮಟ್ಟದಲ್ಲಿ ಉಳಿದುಕೊಂಡಿದೆ. ಗರೀಬ್ ಕಲ್ಯಾಣ ಯೋಜನೆ ಬಡತನವನ್ನು ದೂರ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.