- E-KYC ಮಾಡಿಸಲು ಆ.15ರಂದು ಕೊನೆ ದಿನ
NAMMUR EXPRESS NEWS
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ನೇರವಾಗಿ ವಾರ್ಷಿಕ ರೂ. 6000/-ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ಮೂಲಕ ವರ್ಗಾವಣೆ (DBT) ಮಾಡಲಾಗುತ್ತದೆ. ಮುಂದಿನ ಕಂತಿನ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಬೇಕಾದರೆ e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 2,56,811 ಫಲಾನುಭವಿಗಳ ಪೈಕಿ ಕೇವಲ 60,455 ರೈತರು e-KYC ಮಾಡಿಕೊಂಡಿರುತ್ತಾರೆ. ಇನ್ನೂ 1,96,356 ರೈತರು e-KYC ಮಾಡಿಸಿರುವುದಿಲ್ಲ. ಅದಕ್ಕಾಗಿ e-KYC ಮಾಡಿಸದ ಫಲಾನುಭವಿ ರೈತರು ದಿನಾಂಕ 15.08.2022ರ ಒಳಗೆ e-KYC ಮಾಡಿಸಲು ವಿನಂತಿಸಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ ಫೋನ್ ಬಳಸುವ ರೈತರುhttps://exlink.pmkisan.gov.in/aadharekyc.aspx ಈ ಲಿಂಕ್ ಅನ್ನು ಬಳಸಿ ಓಟಿಪಿ ಆಧಾರಿತ e-KYC ಮಾಡಿಸಲು ತಿಳಿಸಿದೆ ಅಥವಾ ಹತ್ತಿರದ ಸೇವಾ ಸಿಂಧು ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ e-KYC ಮಾಡಿಸಲು ತಿಳಿಸಿದೆ.