- ದೇಶದ ರಾಜಕೀಯದಲ್ಲಿ ಭಾರಿ ಕುತೂಹಲ
- ಬಿಜೆಪಿ ಸೇರ್ತಾರಾ ಸ್ಟಾರ್ ನಟ?
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದು, ಇದೀಗ ಈ ಸುದ್ದಿ ದೇಶದ ಗಮನ ಸೆಳೆದಿದೆ.
ಗುರುವಾರ ರಜನೀಕಾಂತ್ ಈ ಬಗ್ಗೆ ಅಧಿಕೃತ ಟ್ವೀಟ್ ಮಾಡಿದ್ದು, ತಮ್ಮ ಸ್ವಂತ ಪಕ್ಷ ಘೋಷಣೆಯನ್ನು ಮಾಡಿದ್ದಾರೆ.
ರಜನಿ ಬಿಜೆಪಿ ಸೇರ್ತಾರೆ ಎಂಬ ವದಂತಿ ಇದ್ದು ಇದೀಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇತ್ತ ತಮಿಳು ನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೊಸ ರಾಜಕೀಯ ಬಿರುಗಾಳಿ ಏಳಲಿದೆ.
ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ ಮಾಡುವುದಾಗಿ ಹೇಳಿರುವ ಅವರು ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ.
ರಜನಿ ಅವರ ರಾಜಕೀಯ ಪ್ರವೇಶದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಅವರ ನಂತರ ಮತ್ತೊಬ್ಬ ಸ್ಟಾರ್ ಎಂಟ್ರಿ ಅಧಿಕೃತವಾಗಲಿದೆ. ಇನ್ನು ತಮಿಳು ನಾಡಿನಲ್ಲಿ ಜಯಲಲಿತಾ ಹಾಗೂ ಕರುಣಾನಿಧಿ ಸಾವಿನ ಬಳಿಕ ನಾಯಕತ್ವ ಕೊರತೆ ಎದುರಾಗಿದ್ದು ರಜನಿ ಮಾಸ್ ಎಂಟ್ರಿ ಹೊಸ ಅಧ್ಯಾಯ ಬರೆಯಲಿದೆ.
ರಜನೀಕಾಂತ್ ಚುನಾವಣೆಗೆ ನಿಲ್ಲಬೇಕು. ಅವರೇ ಸಿಎಂ ಆಗಬೇಕು ಎಂಬ ಒತ್ತಾಯ ಶುರುವಾಗಿದೆ. ಇತ್ತ ಮತ್ತೊಬ್ಬ ಕನ್ನಡಿಗ ಸಿಎಂ ಆಗುವ ಸಾಧ್ಯತೆ ಹೆಚ್ಚಾಗಿದೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಜನೀಕಾಂತ್, ಬದಲಾವಣೆ ಅಗತ್ಯ. ಎಲ್ಲರೂ ಸೇರಿ ಹೊಸ ಬದಲಾವಣೆ ಮಾಡೋಣ ಎಂದಿದ್ದಾರೆ. ಇತ್ತ ಬಿಜೆಪಿ ಕೂಡ ದಕ್ಷಿಣ ಭಾರತದಲ್ಲಿ ಸ್ಟಾರ್ ಅಂಡ್ ಮಾಸ್ ನಾಯಕನ ಹುಡುಕಾಟದಲ್ಲಿದ್ದು ರಜನೀಕಾಂತ್ ಅವರನ್ನು ಸಂಪರ್ಕಿಸಿದೆ ಎಂಬ ಸುದ್ದಿ ಇದೆ.