-ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಭಾವನಾ ಕಾಂತ್
-ಕೇಂದ್ರ ಆರೋಗ್ಯ ಸಚಿವರಿಂದ ಅಭಿನಂದನೆ
ಹೊಸದಿಲ್ಲಿ: ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ರವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುತ್ತಿರುವ “ಪ್ರಪ್ರಥಮ ಮಹಿಳಾ ಫೈಟರ್ ಪೈಲಟ್’’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜ. 26ರಂದು ಐಎಎಫ್ ನ ಟ್ಯಾಬ್ಲೊ ಜತೆ ಅವರು ಸಂಚರಿಸಲಿದ್ದು, ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಖೋಯ್-30 ಯುದ್ಧ ವಿಮಾನಗಳ ಅಣಕು ಸ್ತಬ್ಧಚಿತ್ರದೊಂದಿಗೆ ಭಾವನಾ ಪರೇಡ್ ನಡೆಸಲಿದ್ದಾರೆ.
ಪ್ರಸ್ತುತ ಇವರು ರಾಜಸ್ಥಾನದ ವಾಯುನೆಲೆಯೊಂದರಲ್ಲಿ ಮಿಗ್-21 ಬೈಸನ್ ಫೈಟರ್ ಪ್ಲೇನ್ಗೆ ಪೈಲಟ್ ಆಗಿದ್ದಾರೆ. 2016ರಲ್ಲಿ ವಾಯುಪಡೆಗೆ ಆಯ್ಕೆಯಾದ “ಮೊದಲ ಫೈಟರ್ ಪೈಲಟ್’ ಖ್ಯಾತಿಯ ಭಾವನಾ ಅವರಿಗೆ ಕೇಂದ್ರ ಆರೋಗ್ಯ ಸಚಿವರು ಟ್ವಿಟರಿನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.