- ರೆಸ್ಯೂಮ್ನಲ್ಲೇ ನಿಮ್ಮ ಮಾಹಿತಿ ಸ್ಪಷ್ಟವಾಗಿರಬೇಕು
- ಅನುಭವ, ಕೌಶಲ್ಯ ಬರೆಯಬೇಕು..ಕಾಟಾಚಾರದ ರೆಸ್ಯೂಮ್ ವೇಸ್ಟ್!
ಮದುವೆ ಮಾಡಿ ನೋಡು…ಮನೆ ಕಟ್ಟಿ ನೋಡು…ಎಂಬ ಗಾದೆ ಹಿಂದಿತ್ತು. ಆದರೆ ಈಗ ಒಂದು ಕೆಲಸ ಪಡೆದು ನೋಡು ಎಂಬಂತಾಗಿದೆ.
ಉದ್ಯೋಗ ದೇಶದ ದೊಡ್ಡ ಸಮಸ್ಯೆಯಾಗಿರುವಾಗ ಉದ್ಯೋಗ ಹುಡುಕಾಟ ರೆಸ್ಯೂಮ್ನಿಂದ ಆರಂಭವಾಗುತ್ತದೆ. ನೇಮಕಾತಿದಾರರು ಮೊದಲು ಪರಿಗಣಿಸುವ ದಾಖಲೆ ಎಂದರೆ ಅದು ರೆಸ್ಯೂಮ್. ಇನ್ನೂ ಸಂದರ್ಶನಕ್ಕೆ ಆಯ್ಕೆಯಾದ ನಂತರ ಕಾನ್ಫಿಡೆನ್ಸ್, ಸಂವಹನ ಕೌಶಲ್ಯ ಮತ್ತು ಇತರೆ ಕೌಶಲ್ಯಗಳು ಉದ್ಯೋಗಕ್ಕೆ ಆಯ್ಕೆಮಾಡಲು ಸಜ್ಜುಗೊಳಿಸುವ ಇತರೆ ಪ್ಲಸ್ ಪಾಯಿಂಟ್ಸ್!.
ಉದ್ಯೋಗ ಗಿಟ್ಟಿಸುವ ವೇಳೆ ಅಭ್ಯರ್ಥಿಗಳು ತಮ್ಮನ್ನು ಉತ್ತಮ ಬ್ರ್ಯಾಂಡ್ ಮಾಡಿಕೊಳ್ಳುವುದು ಹೇಗೆ?, ಸ್ಟೇಟ್ಮೆಂಟ್ ಶಾರ್ಟ್ ಮತ್ತು ಆಕರ್ಷಕವಾಗಿರಬೇಕು. ಇದು ಇತರೆ ಅಭ್ಯರ್ಥಿಗಳಿಗಿಂತ ನಿಮ್ಮನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಅಣಿಗೊಳಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಕೆಲಸಕ್ಕೆ ಸಂಬಂಧಪಟ್ಟಂತೆ ಅಥವಾ ಮುಂದಿನ ಭವಿಷ್ಯದ ಗುರಿ ಸಂಬಂಧಪಟ್ಟಂತೆ ಅನನ್ಯವಾದ ವಾಕ್ಯವನ್ನು ರೆಸ್ಯೂಮ್ನಲ್ಲಿ ಬರೆಯಬೇಕು. ಶಿಕ್ಷಣ ಪಡೆಯುವ ಹಂತದಲ್ಲೇ ಅಥವಾ ಶಿಕ್ಷಣ ಮುಗಿಸಿದ ನಂತರವಾದರೂ ಸರಿ, ಕುಳಿತು ಒಂದು ಉತ್ತಮ ಪ್ಲಾನ್ ಅನ್ನು ಸಿದ್ಧತೆಗೊಳಿಸಬೇಕು. ಅಂದರೆ ಮುಂದೆ ಏನು ಮಾಡಬೇಕು, ಗುರಿಗಳೇನು, ಆ ಗುರಿಗಳನ್ನು ಮುಟ್ಟಲು ಸರಿಯಾದ ದಾರಿಗಳು ಯಾವುವು ಎಂದು ಪ್ಲಾನ್ಗಳನ್ನು ಬರೆದಿಟ್ಟುಕೊಳ್ಳಬೇಕು.
ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ರೆಸ್ಯೂಮ್ನಲ್ಲಿ ನೀಡಲಾದ ಮಾಹಿತಿಗಳು ಮ್ಯಾಚ್ ಆಗಬೇಕು. ನೇಮಕಾತಿದಾರರು ಈ ಮಾಹಿತಿಗಳನ್ನು ಪರಿಶೀಲನೆ ಮಾಡುತ್ತಾರೆ. ಆದ್ದರಿಂದ ಅಭ್ಯರ್ಥಿಯ ಅನುಭವಗಳನ್ನು ವೃತ್ತಿ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡಿರಬೇಕು. ಪ್ರಮುಖ ಉದ್ಯೋಗ ಬದಲಾವಣೆ ಹಾಗೂ ಕರಿಯರ್ ಬದಲಾವಣೆ ಸಂದರ್ಭದಲ್ಲಿ, ರೀಬ್ರ್ಯಾಂಡಿಂಗ್ ಚಟುವಟಿಕೆಗಳು ನಿಧಾನವಾಗಿ ಮತ್ತು ಜಾಗರೂಕತೆಯಿಂದ ನಡೆಯಬೇಕು. ಈ ಅಗತ್ಯ ಚಟುವಟಿಕೆಗಳು ನಿಮ್ಮ ಭವಿಷ್ಯದ ಉದ್ಯೋಗವನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಹಾಯವಾಗುವಂತಿರಬೇಕು. ಉತ್ತಮ ಬ್ರ್ಯಾಂಡ್ ಆಗುವ ಮೂಲಕ ಯಶಸ್ವಿಯಾಗಿ ಕರಿಯರ್ ವೃದ್ಧಿಸಿಕೊಳ್ಳಬೇಕು. ಫ್ರೆಶರ್ ಆಗಿಯೇ ಉದ್ಯೋಗ ಹುಡುಕುತ್ತಿರಲಿ ಅಥವಾ ಅನುಭವಿಗಳೇ ಉದ್ಯೋಗ ಹುಡುಕುತ್ತಿರಲಿ. ರೆಸ್ಯೂಮ್ನಲ್ಲಿ ಉತ್ತಮ ಪದಗಳ ಬಳಕೆ ಇರಬೇಕು. ಈಗಾಗಲೇ ಎಕ್ಸ್ಪೀರಿಯನ್ಸ್ ಪಡೆದಿರುವ ಅಭ್ಯರ್ಥಿಗಳು ತಮ್ಮ ರೈಸ್ಯೂಮ್ ಅನ್ನು ರೀರೈಟ್ ಮಾಡಬೇಕು. ಅಪ್ಲೈ ಮಾಡುತ್ತಿರುವ ಜಾಬ್ ರೋಲ್ ಕುರಿತು ಪರಿಣಾಮಕಾರಿ ಪದ ಬಳಕೆ ಮೂಲಕ ವಿವರಣೆ ನೀಡಬೇಕು.