- ಮೋದಿ ಧ್ವಜಾರೋಹಣ ಮಾಡಿ ದೇಶದ ಜನರ ಕುರಿತು ಭಾಷಣ
- ದೇಶದ ಮನೆ ಮನೆ, ಹಳ್ಳಿ ಹಳ್ಳಿಯಲ್ಲೂ ಸ್ವಾತಂತ್ರ್ಯ ಹಬ್ಬ
NAMMUR EXPRESS NEWS
ನವದೆಹಲಿ/ ಬೆಂಗಳೂರು: 75ನೇ ವರ್ಷದ ಸಂಭ್ರಮದ ಸ್ವಾತಂತ್ರ ದಿನದ ಅಂಗವಾಗಿ ಪ್ರಧಾನಿ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನು ಕುರಿತು ಮಾತನಾಡಿದ್ದಾರೆ.
ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವುದಾಗಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ಉಡುಗೆಯಿಂದ ಗಮನ ಸೆಳೆದರು.ರಾಷ್ಟ್ರೀಯ ಧ್ವಜದ ಚಿತ್ರವಿರುವ ಟರ್ಬಾನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮದ ಮೇಲೆ ನೀತಿ ಬಣ್ಣದ ನೆಹರೂ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್ ಹಾಗೂ ಅದಕ್ಕೊಪ್ಪುವ ವಿಶೇಷ ವಿನ್ಯಾಸದ ಪೇಟ ಗಮನ ಸೆಳೆಯಿತು.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಡಾ. ರಕ್ಷಣಾ ಕಾರ್ಯದರ್ಶಿಯು ಪ್ರಧಾನ ಮಂತ್ರಿಯವರಿಗೆ ಜನರಲ್ ಆಫೀಸರ್ ಕಮಾಂಡಿಂಗ್ (GoC), ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ, AVSM ಅನ್ನು ಪರಿಚಯಿಸಿದರು. ಪ್ರಧಾನ ಮಂತ್ರಿಯ ಗೌರವ ಗಾರ್ಡ್ ತುಕಡಿಯಲ್ಲಿ ಒಬ್ಬ ಅಧಿಕಾರಿ ಮತ್ತು ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 20 ಸಿಬ್ಬಂದಿ ಇದ್ದರು.
ಧ್ವಜಾರೋಹಣ ಮುನ್ನ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಭಾಷಣದುದ್ದಕ್ಕೂ ದೇಶದ ಸಮಸ್ತ ಜನರ ಸೇವೆ, ಮಹಿಳೆಯರ ಸ್ವಾವಲಂಬನೆ, ಡಿಜಿಟಲ್ ಉನ್ನತಿ ದೇಶದ ಅಭಿವೃದ್ಧಿ ಎಂದು ಮೋದಿ ಹೇಳಿದ್ದಾರೆ.
ನವ ಭಾರತ ಕಟ್ಟಲು ದೇಶಕ್ಕೆ ಕರೆ ನೀಡಿದ ಮೋದಿ
- ಯುವ ಜನತೆ ದೇಶದ ಆಸ್ತಿ…2047ಕ್ಕೆ ಅಭಿವೃದ್ಧಿ ಹೊಂದಿದ ದೇಶ ಮಾಡೋಣ
ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವಜನರಿಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದಾರೆ. ಭಾರತದ ಯುವಜನತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವುದರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ಸೇನಾನಿಗಳಿಗೆ ನಮನ
ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನ ನಾಗರಿಕರು ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರಿಗೆ ಕರ್ತವ್ಯದ ಹಾದಿಯಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ಭಾರತದ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ಚೆನ್ನಮ್ಮ, ಬೇಗುನ್ ಹಜರತ್ ಮಹಲ್, ಈ ದೇಶವು ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ನಮ್ಮ ದೇಶ ಕೃತಜ್ಞವಾಗಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ 75 ವರ್ಷಗಳ ಪಯಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ನಾವು ಎಲ್ಲರ ಪ್ರಯತ್ನದಿಂದ ನಾವು ಎಲ್ಲಿಗೆ ತಲುಪಿದ್ದೇವೆ. 2014ರಲ್ಲಿ ಈ ದೇಶದ ಜನರು ನನಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿಯಾದ ನಾನು ಇಂದು ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಹಾಡಿ ಹೊಗಳುವ ಅವಕಾಶವನ್ನು ಪಡೆದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತದ ಅಭಿವೃದ್ಧಿ ಪಥದ ಬಗ್ಗೆ ಸಂಶಯ ಇರುವವರಿಗೆ ಈ ಮಣ್ಣು ವಿಶೇಷವಾದುದು ಎಂದು ತಿಳಿದಿರಲಿಲ್ಲ. ಈಗ ನಾವು ಸಾಧನೆಗಳ ಮೂಲಕ ನಮ್ಮ ಸಾಮರ್ಥ್ಯವನ್ನು ಸಾರುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೇರಿಕಾ ಶುಭಾಶಯ
ಭಾರತ ಹಾಗೂ ಅಮೆರಿಕ ಆತ್ಮೀಯ ಪಾಲುದಾರರಾಗಿದ್ದು, ಮುಂದಿನ ವರ್ಷಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಭ ಕೋರಿದ್ದಾರೆ.