- ದೀಪಾವಳಿಯಲ್ಲಿ ಅತೀ ಹೆಚ್ಚು ಬಹಿಷ್ಕಾರ
ನವದೆಹಲಿ: ದೀಪಾವಳಿ ವ್ಯಾಪಾರ-ವಹಿವಾಟಿನಲ್ಲಿ ಚೀನಾಗೆ ಈ ವರ್ಷ ಭಾರೀ ನಷ್ಟ ಉಂಟಾಗಿದೆ. ಜೊತೆಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಚೀನಾ ವಸ್ತು ಬಹಿಷ್ಕಾರ ಅತೀ ಹೆಚ್ಚು ಪ್ರಮಾಣದಲ್ಲಾಗಿದೆ.
ಚೀನಾಕ್ಕೆ ಈಗಾಗಲೇ 40,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಈಗಾಗಲೇ ಸಿಎಐಟಿ ಮೂಲಕ ತಿಳಿದುಬಂದಿದೆ. ಶೇ.71ರಷ್ಟು ಭಾರತೀಯರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿದ್ದಾರೆ.
ಲೋಕಲ್ ಸರ್ಕಲ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ ಶೇ.71ರಷ್ಟು ಜನರು ಮೇಡ್ ಇನ್ ಚೀನಾ ಗುರುತನ್ನು ಹೊಂದಿರುವ ಸರಕುಗಳನ್ನು ಖರೀದಿಸಿಲ್ಲ. ಸಮೀಕ್ಷೆಯಲ್ಲಿ ಕಮ್ಯುನಿಟಿ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ 204 ಜಿಲ್ಲೆಗಳಲ್ಲಿ 14,000 ಭಾರತೀಯ ಗ್ರಾಹಕರನ್ನು ಸಮೀಕ್ಷೆಗೊಳಪಡಿಸಿದ್ದು, ಶೇ.29 ಗ್ರಾಹಕರು ಒಂದು ಅಥವಾ ಒಂದಕ್ಕಿಂತ ಹೆಚ್ಚು ಚೀನಾ ಉತ್ಪಾದಿತ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಈ ಪೈಕಿ ಶೇ.11ರಷ್ಟು ಅದರ ಬಗ್ಗೆ ಮಾಹಿತಿ ಇಲ್ಲದೇ ಖರೀದಿಸಿದ್ದರೆ ಶೇ.16 ತಿಳಿದೂ ಸಹ ಚೀನಾ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಚೀನಾ ಪಟಾಕಿ, ಅಲಂಕಾರಿಕ ವಸ್ತುಗಳು ಈಗಾಗಲೇ ಮಾರುಕಟ್ಟೆಯಿಂದ ಸರಿಯುತ್ತಿವೆ.