ಉಡುಪಿ-ಚಿಕ್ಕಮಗಳೂರಲ್ಲಿ ಬಿಜೆಪಿ ಸಂಭ್ರಮ!
– ಶ್ರೀನಿವಾಸ ಪೂಜಾರಿ- 7,31,408, ಜಯಪ್ರಕಾಶ್ ಹೆಗ್ಡೆ- 4,72,505, ಮತ : 2,58,903 ಮತಗಳ ಅಂತರದ ಗೆಲುವು
– ಉಡುಪಿ -ಚಿಕ್ಕಮಗಳೂರಿನ ಪ್ರತಿ ಊರಲ್ಲೂ ವಿಜಯೋತ್ಸವ
– ಯಾವ ತಾಲೂಕಲ್ಲಿ ಎಷ್ಟು ಮತ ಇಲ್ಲಿದೆ ಡೀಟೇಲ್ಸ್!
NAMMUR EXPRESS
ಉಡುಪಿ/ ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು ಸಂಗಮ ಕ್ಷೇತ್ರ ಉಡುಪಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರಿದೆ. ಬಿ.ಜೆ.ಪಿ.ಕೋಟ ಶ್ರೀನಿವಾಸ ಪೂಜಾರಿ- 7,31,408, ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ- 4,72,505, ಕೋಟ ಶ್ರೀನಿವಾಸ ಪೂಜಾರಿ 2,58,903 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಸೋಲುವ ಮೂಲಕ ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ.
ಉಡುಪಿ -ಚಿಕ್ಕಮಗಳೂರು ಹಿಂದೇನಾಗಿತ್ತು?:
ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಅಂತರ 3,49,599 ಮತಗಳು ಆಗಿತ್ತು.ಕಳೆದ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ನಲ್ಲಿದ್ದ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳಿಂದ ಸೋಲಿಸಿದ್ದರು. ಶೋಭಾ 7,18,916 ಮತಗಳನ್ನು ಗಳಿಸಿದ್ದರೆ, ಪ್ರಮೋದ್ 3,69,317 ಮತ ಗಳಿಸಿದ್ದರು.
ಉಡುಪಿ -ಚಿಕ್ಕಮಗಳೂರಿನ ಪ್ರತಿ ಊರಲ್ಲೂ ವಿಜಯೋತ್ಸವ
ಉಡುಪಿ -ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಯಕರ್ತರು, ಮತದಾರರಿಗೆ ಕೋಟಾ ಧನ್ಯವಾದ
ಉಡುಪಿ-ಚಿಕ್ಕಮಗಳೂರಲ್ಲಿ ಮತ ಹಾಕಿದ, ನನ್ನ ಪರವಾಗಿ ಕೆಲಸ ಮಾಡಿದ ಸರ್ವರಿಗೂ ಕೋಟಾ ಶ್ರೀನಿವಾಸ್ ಪೂಜಾರಿ ಧನ್ಯವಾದ ಅರ್ಪಿಸಿದ್ದಾರೆ.
ವಿಧಾನಸಭೆ ಕ್ಷೇತ್ರವಾರು ಫಲಿತಾಂಶ ಪಟ್ಟಿ
1 ಉಡುಪಿ:
ಕೋಟ: 106022 ಜೆಪಿ: 6250
2 ಕಾಪು:
ಕೋಟ: 91077 ಜೆಪಿ: 58947
3 ಕುಂದಾಪುರ:
ಕೋಟ: 107173 ಜೆಪಿ: 57078
4 ಕಾರ್ಕಳ
ಕೋಟ: 57429 ಜೆಪಿ: 33098
5 ಶ್ರಿಂಗೇರಿ
ಕೋಟ: 79175 ಜೆಪಿ: 53937
6 ಮೂಡಿಗೆರೆ
ಕೋಟ: 74597 ಜೆಪಿ: 54572
7 ತರೀಕೆರಿ
ಕೋಟ: 80995 ಜೆಪಿ: 60314
8 ಚಿಕ್ಕಮಗಳೂರು
ಕೋಟ: 92429 ಜೆಪಿ: 68693








