ಕಾಂಗ್ರೆಸ್ಗೆ ನಕ್ಸಲರನ್ನು ಕಂಡರೆ ಇಷ್ಟ,ದೇಶಭಕ್ತರೆಂದರೆ ಕಷ್ಟ – ಸಿ ಟಿ ರವಿ
* ಕಾಂಗ್ರೆಸ್ ಸೇವಾದಳಕ್ಕೂ ನೂರು ವರ್ಷ ಯಾರದರೂ ನೆನಪಿಸುತ್ತಾರಾ ?
* ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗೆ ನಿರ್ಬಂಧಕ್ಕೆ ಆಕ್ರೋಶ
NAMMMUR EXPRESS NEWS
ಚಿಕ್ಕಮಗಳೂರು: ರಾಜ್ಯ ಸರ್ಕಾರ ಆರ್ಎಸ್ಎಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್ಎಸ್ಎಸ್ ಇರುವುದು ಜನರ ಮನಸ್ಸಿನಲ್ಲಿ ದೇಶವನ್ನು ಹಾಳುಮಾಡುವ ವಿಚಾರ ಹರಡಲು ಆಗಿದ್ರೆ ಸಂಘ ಇಷ್ಟು ದೊಡ್ಡ ಮಟ್ಡಕ್ಕೆ ಬೆಳೆಯುತ್ತಿರಲಿಲ್ಲ. ಸಂಘದಲ್ಲಿರುವುದು ನಿಸ್ವಾರ್ಥ ದೇಶಪ್ರೇಮ, ಅದು ಬೆಳೆಯುತ್ತಲೇ ಇದೆ ಎಂದಿದ್ದಾರೆ.
ಕಾಂಗ್ರೆಸ್ ಸೇವಾದಳ ಅದಕ್ಕೂ ನೂರು ವರ್ಷ, ಯಾರಾದರೂ ನೆನಪಿಸುತ್ತಾರಾ? ನಮಗೆ ಗಣವೇಷವನ್ನು ಸರಬರಾಜು ಮಾಡಲು ಆಗದಂತಹ ಮಟ್ಟಕ್ಕೆ ಬೇಡಿಕೆ ಬಂದಿದೆ. ಆರ್ಎಸ್ಎಸ್ನಲ್ಲಿ ಕೆಲಸ ಮಾಡುವ ಜನ ದೇಶ ಬಲ ಆಗಬೇಕೆಂದು ಬಯಸುತ್ತಾರೆ. ದೂರ ಇಟ್ಟರೆ ದೇಶಕ್ಕೆ ನಷ್ಟವಾಗಲಿದೆ. ಇದರ ಲಾಭವನ್ನು ಅರಾಜಕವಾದಿಗಳು, ಭಾರತ್ ತೇರೆ ತುಕಡೆ ಹೋಂಗೆ, ಇನ್ಷಾ ಅಲ್ಲಾ ಅನ್ನೋರು ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಕ್ಸಲರು,ನಗರ ನಕ್ಸಲರು ಕಾಂಗ್ರೆಸ್ನವರಿಗೆ ಆತ್ಮೀಯರಾಗುತ್ತಾರೆ. ದೇಶಭಕ್ತಿಯ ಸಂಘಟನೆ ಕಂಡರೆ ಅವರಿಗೆ ಅಸಹನೆ ಹಾಗೂ ಕಷ್ಟ ಆಗುತ್ತೆ, ಯಾರನ್ನ ದೇಶದ್ರೋಹಿಗಳು ಎನ್ನಬೇಕು? ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







