ಶ್ರೀ ಚನ್ನಮ್ಮದೇವಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆ!
– ಶ್ರೀ ವಿಶ್ವನಾಥ್ ಗದ್ದೆಮನೆ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣ
– ವಿಜಯ ದಶಮಿಯಂದು ಗಣಹೋಮದೊಂದಿಗೆ ಪೂಜೆ
NAMMUR EXPRESS NEWS
ನರಸಿಂಹರಾಜಪುರ: ಶ್ರೀ ಕ್ಷೇತ್ರ ಕೂಸ್ಕಲ್ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀ ಚನ್ನಮ್ಮದೇವಿ ದೇವಸ್ಥಾನ ಸಾರ್ಯ ಗ್ರಾಮ, ನರಸಿಂಹರಾಜಪುರ ತಾಲ್ಲೂಕು ಇಲ್ಲಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆ ನೆರವೇರಿತು.
ದಾನಿಗಳಾದ ವಿಶ್ವನಾಥ್ ಗದ್ದೆಮನೆ ಅವರು ನೂತನವಾಗಿ ನಿರ್ಮಾಣ ಮಾಡುತ್ತಿರುವ ಶ್ರೀ ಚನ್ನಮ್ಮದೇವಿ ಕಲ್ಯಾಣ ಮಂಟಪದ ಗುದ್ದಲಿ ಪೂಜೆಯನ್ನುಗುರುವಾರ ವಿಜಯದಶಮಿಯ ದಿನದಂದು ಬೆಳಿಗ್ಗೆ ಗಣಹೋಮದೊಂದಿಗೆ ನೆರವೇರಿಸಲಾಯಿತು.
ಶ್ರೀ ಕ್ಷೇತ್ರದ ಎಲ್ಲಾ ಭಕ್ತಾದಿಗಳು, ಗ್ರಾಮಸ್ಥರು, ಹಾಗೂ ವಿಶ್ವನಾಥ್ ಗದ್ದೆಮನೆ ಅಭಿಮಾನಿ ಬಳಗದ ಸದಸ್ಯರುಗಳು ಈ ಶುಭ ಕಾರ್ಯದಲ್ಲಿ ಎಲ್ಲರೂ ಕೂಡ ಭಾಗವಹಿಸಿದ್ದರು. ಹಾಗೆಯೇ ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಬಾಳೆಹೊನ್ನೂರಿನಲ್ಲಿ ವಿಶ್ವನಾಥ್ ಅವರಿಗೆ ಸನ್ಮಾನ
ಬಾಳೆಹೊನ್ನೂರಿನ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ 16ನೇ ನವರಾತ್ರಿ ಮಹೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ವಿಶ್ವನಾಥ ಗದ್ದೆಮನೆ ಅವರನ್ನು ಸನ್ಮಾನಿಸಲಾಯಿತು.








