ಸ್ಥಳೀಯ ಚುನಾವಣೆ ಮುನ್ನವೇ ಆಪರೇಷನ್ ಕಮಲ!
– ಕಾಂಗ್ರೆಸ್ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆ
– ಮಂಗಳ ಗೋಪಿ, ಕಲ್ಲದ್ದೆ ರತ್ನಾಕರ್ ಸೇರಿ ಅನೇಕರು ಸೇರ್ಪಡೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಮುಖ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದಾರೆ. ಈ ಮೂಲಕ ಸ್ಥಳೀಯ ಚುನಾವಣೆ ಮುನ್ನವೇ ತೀರ್ಥಹಳ್ಳಿ ರಾಜಕೀಯ ಚುರುಕುಗೊಂಡಿದೆ.
ಕೋಣಂದೂರು ಭಾಗದ ಪ್ರಮುಖ ನಾಯಕರಾದ ಮಂಗಳ ಗೋಪಿ, ಕಲ್ಲದ್ದೆ ರತ್ನಾಕರ್ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಬಿಜೆಪಿಯ ಸಿದ್ಧಾಂತ, ಹಾಗೂ ಪಕ್ಷ ನಿಷ್ಠೆ ಮತ್ತು ದೇಶಪ್ರೇಮ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಕಾರ್ಯವೈಖರಿ ಮತ್ತು ಕ್ಷೇತ್ರ,ಅಭಿವೃದ್ಧಿ ಮೆಚ್ಚಿಕೊಂಡು ಬಿಜೆಪಿಗೆ ಸೇರ್ಪಡೆ ಆಗಿರುವುದಾಗಿ ಸೇರ್ಪಡೆ ಆಗಿರುವ ಮಂಗಳ ಗೋಪಿ ಹೇಳಿದ್ದಾರೆ.
ಮಾಜಿ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಕಲಗದ್ದೆ ರತ್ನಾಕರ್ ಹಾಗೂ ಮಂಗಳ ಗೋಪಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರೂ ಕೂಡ ಅಗ್ರಹಾರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಯುವ ರಾಜಕಾರಣಿಗಳಾಗಿದ್ದಾರೆ. ಕಲ್ಲದ್ದೆ ರತ್ನಾಕರ್ ಮೂಲತಃ ಕಾಂಗ್ರೆಸ್ ಕಟ್ಟಾಳುವಾಗಿ ಗುರುತಿಸಿಕೊಂಡು ಕೋಣಂದೂರು ಗ್ರಾಮ ಪಂಚಾಯತ್ನಲ್ಲಿ ಸದಸ್ಯ ಬಳಿಕ ಅಧ್ಯಕ್ಷನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದ್ದರು. ಬಳಿಕ ಕಾಂಗ್ರೆಸ್ ಅವರಿಗೆ ತಾಲ್ಲೂಕು ಪಂಚಾಯತ್ ಹಾಗೂ ಅವರ ಪತ್ನಿ ವೀಣಾರವರಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿತ್ತು. ಬಂಟರ ಭವನದಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ
ಶಾಸಕ ಆರಗ ಜ್ಞಾನೇಂದ್ರ ಮತ್ತು ಮಂಡಲದ ಅಧ್ಯಕ್ಷ ಹೆದ್ದೂರ್ ನವೀನ್, ಹಾಗೂ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷ ಸೇರಿದವರ ಪಟ್ಟಿ ರಾಮಚಂದ್ರ ಸಾಲೇ ಜಾನಗಲ್, ವಿಜೇಂದ್ರ ಮಂಗಳ, ರಮೇಶ್ ಮಂಗಳ, ಯೋಗೇಶ್ ಮಂಗಳ, ಸಚಿನ್ ಗೇರುಕಟ್ಟೆ, ದಿವಾಕರ ಹೊರಬೈಲು, ಶಶಿಶೇಖರ್ ಮಂಗಳ, ಗಣೇಶ್ ಕೋಣಂದೂರು, ರಮೇಶ್ ಗವಿಮಠ, ಪ್ರದೀಪ್ ಒಂಭತ್ತುಖಂಡಗ, ಚಂದ್ರು (ಡಿಶ್ ), ಬೋಜರಾಜು ಮಂಗಳ, ಶ್ರೀಕಾಂತ್ ಕಲ್ಗದ್ದೆ ಇನ್ನು ಅನೇಕರು ಸೇರ್ಪಡೆಗೊಂಡಿದ್ದಾರೆ.
ಮಂಗಳ ಗೋಪಿ ಒಂದು ಕಾಲದಲ್ಲಿ ಕಟ್ಟಾ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡವರು. ಬಳಿಕ ಬಿಜೆಪಿಯಿಂದ ದೂರ ಸರಿದು ಕಿಮ್ಮನೆ ರತ್ನಾಕರ್ ಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದರು. ಬಳಿಕ ಅವರೂ ಕೂಡ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು. ಇತ್ತೀಚಿಗೆ ಕೋಣಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಚುನಾವಣೆ ಹಾಗೂ ಸಹಕಾರ ಸಂಘದ ಚುನಾವಣೆಯಲ್ಲಿ ಇವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಹೊಂದಾಣಿಕೆ ಕೊರತೆಯಿಂದ ಬಿರುಕು ಮೂಡಿತ್ತು. ಅದು ಈಗ ದೊಡ್ಡದಾಗಿ ಇಬ್ಬರೂ ಪಕ್ಷ ಬಿಡುವ ಹಂತ ತಲುಪಿದೆ. ಇನ್ನೇನು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಹತ್ತಿರದಲ್ಲಿ ಇರುವ ಸಮಯದಲ್ಲಿ ಈ ಬೆಳವಣಿಗೆ ಕ್ಷೇತ್ರದ ಜನರಲ್ಲಿ ಕುತೂಹಲ ಹುಟ್ಟಿಸಿದೆ.
ಪಕ್ಷ ಸೇರ್ಪಡೆ ವೇಳೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಅಶೋಕ್ ಮೂರ್ತಿ, ಬೇಗುವಳ್ಳಿ ಸತೀಶ್, ಚಂದವಳ್ಳಿ , ಸೋಮಶೇಖರ್, ನಾಗರಾಜ್ ಶೆಟ್ಟಿ, ಕವಿರಾಜ್ ಬೇಗುವಳ್ಳಿ, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.








