ಭೂಮಿ ಹುಣ್ಣಿಮೆ ಹಬ್ಬಕ್ಕೆ ಎಲ್ಲಡೆ ಸಿದ್ಧತೆ!
– ಭೂಮಿ ತಾಯಿಗೆ ಸೀಮಂತದ ಹಬ್ಬಕ್ಕೆ ಕ್ಷಣಗಣನೆ
– ಇಂದು ರಾತ್ರಿ ಇಡೀ ಅಡುಗೆ.. ಬೆಳಿಗ್ಗೆ ಭೂ ಪೂಜೆ
NAMMUR EXPRESS NEWS
ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಹಬ್ಬ ತುಂಬಾ ವಿಶೇಷ. ಈಗಾಗಲೇ ಭೂಮಿ ಹುಣ್ಣಿಮೆ ಹಬ್ಬಕ್ಕೆ ಎಲ್ಲಡೆ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೇ ಹೇಳಲಾಗುತ್ತದೆ. ಈ ಹಬ್ಬದ ಸಾಕಷ್ಟು ವಿಶೇಷ ಎಂದರೆ ನೂರಾಒಂದು ಬೆರಕೆ ಸೊಪ್ಪನ್ನು ಬೆರೆಸಿ ಪಲ್ಯ ಮಾಡುವುದೇ ತುಂಬಾ ವಿಶೇಷವಾಗಿದೆ. ಈಗಾಗಲೇ ಈ ಭೂಮಿ ಹುಣ್ಣಿಮೆ ಹಬ್ಬಕ್ಕೆ ನೂರಾಒಂದು ಕುಡಿ ಅಥವಾ ಬೆರಕೆ ಸೊಪ್ಪನ್ನು ಹುಡುಕಲು ಮಹಿಳೆಯರು ಚಿಕ್ಕ ಚಿಕ್ಕ ಮಕ್ಕಳು ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ರೈತರಿಗೆ ಇದೊಂದು ವಿಶೇಷವಾದ ಹಬ್ಬ. ತನ್ನ ಜಮೀನು ಅಥವಾ ಹೊಲವನ್ನು ಉಳುಮೆ ಮಾಡಿ, ಬೀಜ ಬಿತ್ತಿ, ಬೆಳೆದು, ಕಟಾವು ಮಾಡಿ, ಭೂಮಿಯಿಂದಲೇ ತನ್ನ ಜೀವನ ನಡೆಸುವ ಪ್ರತಿಯೊಬ್ಬ ರೈತರು ವರ್ಷಕ್ಕೊಮ್ಮೆ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ತನ್ನನ್ನು ಹಾಗೂ ತನ್ನ ಕುಟುಂಬವನ್ನೂ ಸಲಹು ಎಂದು ಬೇಡಿಕೊಳ್ಳುತ್ತಾರೆ.
ಹಸಿರಾಗಿ ನಿಂತ ಭೂಮಿ ತಾಯಿಗೆ ಹಬ್ಬದ ಆಚರಣೆಯೇ ವಿಶೇಷ ಮಲೆನಾಡಿನ ಭೂಮಿ ಹುಣ್ಣಿಮೆ ಹಬ್ಬ ತುಂಬಾ ಸಡಗರ.
ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗೆ ಭೂಮಣ್ಣಿ ಬುಟ್ಟಿ ಅತ್ಯಂತ ಮಹತ್ವದ ವಸ್ತು . ಇದನ್ನು ಹಿಂದಿನಿಂದಲೂ ಕೂಡ ಇದನ್ನ ಕಾಪಾಡಿಕೊಂಡು ರೂಡಿಸಿಕೊಂಡು, ಸಿಂಗರಿಸಿ ಪೂಜೆಗೆ ಬಳಸಲಾಗುತ್ತದೆ.
– ರಾತ್ರಿ ಇಡೀ ಜಾಗರಣೆಯ ಮಾಡಿ ಅಡುಗೆ ಸಂಭ್ರಮ..!
ಭೂಮಿ ಹುಣ್ಣಿಮೆಯ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ರಾತ್ರಿ ಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ಆ ಸಂಧರ್ಭದಲ್ಲಿ ‘ಹಚ್ಚಂಬಲಿ.. ಹಾಲಂಬಲಿ…ಬೇಲಿ ಮೇಲೆ ಇರುವ ದಾರ ಹಿರೇಕಾಯಿ ಭೂಮಿ ತಾಯಿ ಊಟ ಮಾಡೇ” ಎಂದು ಹಾಡುತ್ತ ಹಚ್ಚಂಬಲಿಯನ್ನು ಬೀರಲಾಗುತ್ತದೆ. ಈ ಸಂಪ್ರದಾಯ ಹಿಂದಿನ ಕಾಲದಿಂದಲೂ ಬಂದಿರುವುದರಿಂದ ಎಲ್ಲಾ ಆಚರಣೆಗಿಂತ ವಿಭಿನ್ನವಾಗಿದೆ.








