2021ನೇ ಸಾಲಲ್ಲಿ ಚಾರ್ಲಿ 777’ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ!
– ʻದೊಡ್ಡಹಟ್ಟಿ ಬೋರೇಗೌಡʼ ಚಿತ್ರಕ್ಕೆ ಮೊದಲನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ
– ಯಾವ ಸಿನಿಮಾಕ್ಕೆ ಪ್ರಶಸ್ತಿ? ಯಾರು ಯಾರಿಗೆ ಬೆಸ್ಟ್ ನಟ ನಟಿ ಪ್ರಶಸ್ತಿ?
NAMMUR EXPRESS NEWS
ಬೆಂಗಳೂರು: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟಗೊಂಡಿದ್ದು, ರಕ್ಷಿತ್ ಶೆಟ್ಟಿ ಅವರು ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಅರ್ಚನಾ ಜೋಯ್ಸ್ ‘ಮ್ಯೂಟ್’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಿವಂಗತ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಅತ್ಯುತ್ತಮ ಮನರಂಜನಾ ಚಿತ್ರ’ ಎಂಬ ಹಿರಿಮೆಗೆ ಪಾತ್ರವಾಗಿದೆ.
ರಘು ಕೆ.ಎಂ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದು, ಕಿರಣ್ ರಾಜ್ ನಿರ್ದೇಶನದ ‘ಚಾರ್ಲಿ 777’ ಎರಡನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಹೃದಯ ಶಿವ ನಿರ್ದೇಶನದ ‘ಬಿಸಿಲು ಕುದುರೆ’ ಮೂರನೇ ಅತ್ಯುತ್ತಮ ಚಿತ್ರವಾಗಿದೆ. ಕೃಷ್ಣಮೂರ್ತಿ ಚರಂ ನಿರ್ದೇಶನದ ‘ಭಾರತೀಯ ಪ್ರಜೆಗಳಾದ ನಾವು’ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಗೊಂಡಿದೆ.
‘ರತ್ನನ ಪ್ರಪಂಚ’ ಚಿತ್ರಕ್ಕಾಗಿ ಪ್ರಮೋದ್ ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು. ಅಚ್ಚರಿ ಎಂದರೆ ಇನ್ನು 2022,23,24ನೇ ಸಾಲಿನ ಹೆಸರು ಇನ್ನು ಪ್ರಕಟಗೊಂಡಿಲ್ಲ.
2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟ
ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ (ಚಿತ್ರ : ಚಾರ್ಲಿ 777)
ಅತ್ಯುತ್ತಮ ನಟಿ ಅರ್ಚನಾ ಜೋಯಿಸ್ (ಚಿತ್ರ: ಮ್ಯೂಟ್)
ಅತ್ಯುತ್ತಮ ಪೋಷಕ ನಟ ಪ್ರಮೋದ್ (ಚಿತ್ರ: ರತ್ನನ್ ಪ್ರಪಂಚ)
ಅತ್ಯುತ್ತಮ ಪೋಷಕ ನಟಿ ಉಮಾಶ್ರೀ (ಚಿತ್ರ: ರತ್ನನ್ ಪ್ರಪಂಚ)
ಅತ್ಯುತ್ತಮ ಕಥೆ ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)
ಅತ್ಯುತ್ತಮ ಚಿತ್ರಕಥೆ ರಘು ಕೆ.ಎಂ. (ಚಿತ್ರ: ದೊಡ್ಡಹಟ್ಟಿ ಬೋರೇಗೌಡ)
ಅತ್ಯುತ್ತಮ ಸಂಭಾಷಣೆ ಬರಗೂರು ರಾಮಚಂದ್ರಪ್ಪ (ಚಿತ್ರ : ತಾಯಿ ಕಸ್ತೂರ್ ಗಾಂಧಿ)
ಅತ್ಯುತ್ತಮ ಛಾಯಾಗ್ರಹಣ ಭುವನೇಶ್ ಪ್ರಭು (ಚಿತ್ರ : ಅಮ್ಚೆ ಸಂಸಾರ)
ಅತ್ಯುತ್ತಮ ಸಂಗೀತ ನಿರ್ದೇಶನ ಇಮ್ಮಿಯಾಜ್ ಸುಲ್ತಾನ್ (ಚಿತ್ರ: ಬಿಸಿಲು ಕುದುರೆ)
ಅತ್ಯುತ್ತಮ ಸಂಕಲನ ಪ್ರತೀಕ್ ಶೆಟ್ಟಿ (ಚಿತ್ರ: ಚಾರ್ಲಿ 777)
ಅತ್ಯುತ್ತಮ ಬಾಲ ನಟ ಮಾಸ್ಟರ್ ಅತೀಶ್ ಶೆಟ್ಟಿ (ಚಿತ್ರ : ಕೇಕ್)
ಅತ್ಯುತ್ತಮ ಬಾಲ ನಟಿ ಬೇಬಿ ಭೈರವಿ (ಚಿತ್ರ : ಭೈರವಿ)
ಅತ್ಯುತ್ತಮ ಕಲಾ ನಿರ್ದೇಶನ ರವಿ ಸಂತೇಹಕ್ಲು (ಚಿತ್ರ : ಭಜರಂಗಿ 2)
ಅತ್ಯುತ್ತಮ ಗೀತ ರಚನೆ ನಾಗಾರ್ಜುನ ಶರ್ಮಾ (ಚಿತ್ರ: ಚಾರ್ಲಿ 777)
ಅತ್ಯುತ್ತಮ ಹಿನ್ನೆಲೆ ಗಾಯಕ ಅನೀಕ್ ಕೇಶವ ರಾವ್ (ಚಿತ್ರ : ಶ್ರೀ ಜಗನ್ನಾಥ ದಾಸರು)
ಅತ್ಯುತ್ತಮ ಹಿನ್ನೆಲೆ ಗಾಯಕಿ ಸಹನಾ ಎಂ. ಭಾರದ್ವಾಜ್ (ಚಿತ್ರ: ದಂಡಿ)
ತೀರ್ಪುಗಾರರ ವಿಶೇಷ ಪ್ರಶಸ್ತಿ ಚಿತ್ರ: ಭೈರವಿ, ವಸ್ತ್ರ ವಿನ್ಯಾಸ: ಯೋಗಿ ಜಿ ರಾಜು (ಚಿತ್ರ: ಭಜರಂಗಿ 2), ಪ್ರಸಾದನ : ಶಿವಕುಮಾರ್ (ಚಿತ್ರ: ತಾಯಿ ಕಸ್ತೂರ್ ಗಾಂಧಿ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ ಶ್ರೀ ಶಿವಕುಮಾರ್ ಎಸ್ (ಚಿತ್ರ : ಪೊಗರು)








