ಶಿರ್ಲಾಲು ಹಟ್ಟಿಯಿಂದ ಮೂರು ದನ ಕದ್ದೊಯ್ದ ಕಳ್ಳರು
ಕಾರ್ಕಳ : ಶಿರ್ಲಾಲು ಬಳಿ ಮಹಿಳೆಯೋರ್ವರ ಮನೆಯ ಹಟ್ಟಿಯಿಂದ ಮೂರು ದನಗಳನ್ನು ಕದ್ದೊಯ್ದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಶಿರ್ಲಾಲು ಗ್ರಾಮದ ಜಯಶ್ರೀ ಎಂಬುವರ ಮನೆಯ ಹಟ್ಟಿಗೆ ನುಗ್ಗಿದ ದನ ಕಳ್ಳರು, ಮಹಿಳೆಗೆ ಮಾರಕಾಯುಧ ತೋರಿಸಿ ಮೂರು ದನಗಳನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕಳೆದ 3 ವರ್ಷಗಳ ಹಿಂದೆ ಕೂಡಾ ಈ ಮನೆಯಿಂದ ದನ ಕಳ್ಳತನ ಮಾಡಲಾಗಿತ್ತು ಎನ್ನಲಾಗಿದೆ.







