ಭೀಕರ ಮಳೆ: ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ..!
– ಸುರಕ್ಷತೆಯಿಂದ ಶಾಲೆಗೆ ಕಳುಹಿಸುವುದು ಪ್ಲಾನ್ ಮಾಡಿ
– ವಿದ್ಯುತ್, ನೀರು, ಸೇತುವೆ, ರಸ್ತೆ ಬಗ್ಗೆ ಜಾಗೃತಿ ಇರಲಿ
– ಮಳೆ ವೇಳೆ ಮನೆಯಿಂದ ಹೊರ ಬಾರದಿರುವುದು ಸೇಫ್
NAMMUR EXPRESS NEWS
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಮಲೆನಾಡು, ಕರಾವಳಿ ಸೇರಿ ರಾಜ್ಯದಲ್ಲಿ ಬಹುತೇಕ ಭಾಗದಲ್ಲಿ ಅನಾಹುತ ಸೃಷ್ಟಿ ಆಗುತ್ತಿದೆ.ಮಳೆ ಸಮಯದಲ್ಲಿ ಮಕ್ಕಳು ಕಾಲು ಸಂಕಗಳಲ್ಲಿ ಬರುವ ಸಾಧ್ಯತೆ ಇದೆ, ನದಿಗಳ ದಡದಲ್ಲಿ ನಡೆದು ಬರುವ ಸಾಧ್ಯತೆ ಇರುತ್ತದೆ, ಗುಡ್ಡ ಜಾರುವ ಪ್ರದೇಶಗಳಲ್ಲಿ ಬರುವ ಸಾಧ್ಯತೆ ಇದೆ. ಆದುದರಿಂದ ಮಕ್ಕಳ ಸುರಕ್ಷತೆ ಅತಿ ಮುಖ್ಯ. ಅಂತ ಮಕ್ಕಳು ಶಾಲೆಗೆ ಬರುತ್ತಿದ್ದರೆ ಹೆಚ್ಚು ಮಳೆ ಬರುತ್ತಿರುವ ಸಂದರ್ಭದಲ್ಲಿ ಅವರನ್ನ ಶಾಲೆಗೆ ಬರಲು ಹೇಳಬೇಡಿ. ಶಾಲೆಗೆ ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಸುರಕ್ಷತೆಯಿಂದ ಕಳುಹಿಸುವುದು ಪೋಷಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯ ಕೂಡ ಆಗಿದೆ. ಬಾರಿ ಮಳೆ ಇದ್ದಾಗ ಶಾಲೆಗೆ ಹೋಗುವ ಮಕ್ಕಳು ಅದರಲ್ಲೂ ಗ್ರಾಮೀಣ ಭಾಗದಿಂದ ಬರುವ ಮಕ್ಕಳ ಬಗ್ಗೆ ಗಮನ ಇರಲಿ. ಮಕ್ಕಳ ಸುರಕ್ಷತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಇನ್ನು ಪ್ರತಿಯೊಬ್ಬರೂ ಮಳೆ ವೇಳೆ ಹೊರಗೆ ಹೋಗುವಾಗ ಎಚ್ಚರ ವಹಿಸಿ. ವಿದ್ಯುತ್ ಕಂಬ ಮತ್ತು ತಂತಿಗಳ ಬಗ್ಗೆ ಗಮನ ಇರಲಿ.ಧರೆ, ರಸ್ತೆ, ಮರಗಳ ಬಳಿ ಹೋಗುವಾಗ ಎಚ್ಚರಿಕೆ ವಹಿಸಿ. ವಾಹನ ಓಡಿಸುವಾಗ ಜಾಗೃತಿ ಹಾಗೂ ಎಚ್ಚರಿಕೆ ಇರಲಿ.
ಇದು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಕಾಳಜಿ.