50ನೇ ವರ್ಷದ ಕಟೀಲು ಕನಕ ಸಂಭ್ರಮಕ್ಕೆ ಸಜ್ಜು!
– ನ.16, 17ರಂದು ಪಾವಂಜೆಯ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾರ್ಯಕ್ರಮ
– ಸರ್ವರಿಗೂ ಸ್ವಾಗತಿಸಿದ ಸೀತಾರಾಮ್ ಕುಮಾರ್ ಕಟೀಲ್
NAMMUR EXPRESS NEWS
ಉಡುಪಿ: 50ನೇ ವರ್ಷದ ಕಟೀಲು ಕನಕ ಸಂಭ್ರಮ ನಡೆಯಲಿದ್ದು ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ಪಾವಂಜೆ 16-11-2024ನೇ ಶನಿವಾರ ನಡೆಯುತ್ತದೆ. ಉದ್ಘಾಟನಾ ಸಮಾರಂಭ, ಗೌರವರ್ಪಣೆ, ಸನ್ಮಾನ ಸಮಾರಂಭ ಕೂಡ ನೆರವೇರಲಿದೆ. ಬೆಳಿಗ್ಗೆ 11.00 ರಿಂದ ರಕ್ಷಿತ್ ಪಡ್ರೆ ಶಿಷ್ಯರಿಂದ, ನಿತ್ಯವೇಷ, ಸ್ತ್ರೀವೇಷ, ಪರಂಪರೆ ಬಾಲ ಪ್ರತಿಭೆ ಕು। ದಿಯಾ ಡಿ.ಆಚಾರ್ಯ ಮಂಚಕಲ್ ಇವರಿಂದ ನೃತ್ಯವೈಭವ ಮಯೂರ ಪ್ರತಿಷ್ಠಾನ ತಂಡದವರಿಂದ ಬಯಲಾಟ,ಪಾದ ಪ್ರತಿಕ್ಷಾ ಸುಧೀರ್ ಉಳ್ಳೂರು & ರಕ್ಷಿತ್ ಪಡ್ರೆ ಇವರಿಂದ ನೃತ್ಯ ವೈಭವ ಸಂಜೆ 6.30 ರಿಂದ ಯಕ್ಷ ಯುವ ಗಿರ್ಕಿ ಪ್ರವೀಣರಿಂದ ಯಕ್ಷಗಾನ ಬಯಲಾಟ ಮಕರಾಕ್ಷ ಕಾಳಗ ನ. 16 ರಂದು ನೆರವೇರುತ್ತದೆ.
17-11-2024ನೇ ಆದಿತ್ಯವಾರ ಬೆಳಿಗ್ಗೆ 10.00ಕ್ಕೆ ಸಮಾರೋಪ ಸಮಾರಂಭ, ಗೌರವರ್ಪಣೆ, ಸನ್ಮಾನ ಸಮಾರಂಭ ಕೈಗೊಳ್ಳಲಾಗಿದ್ದು. ಬೆಳಗ್ಗೆ 11.30ರಿಂದ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಮಹಿಳಾ ತಂಡದವರಿಂದ ಯಕ್ಷಗಾನ ಬಯಲಾಟ ಶಮಂತಕ ಮಣಿ,ಮಧ್ಯಾಹ್ನ 2.30ರಿಂದ ಬೊಳಂತಿಮೊಗರು ತಂಡದವರಿಂದ ತಾಳಮದ್ದಲೆ,ವೀರ ವೈಷ್ಣವ ಆಳ್ವಾಸ್ ದೀಂಕಿಟ್ ಕಲಾವಿದರಿಂದ ಬಯಲಾಟ ನರ ಶಾರ್ದೂಲ, ಸಂಜೆ 6.30ರಿಂದ ವಿಶ್ವನಾಥ್ ಪೂಜಾರಿ ಕಮಲಶಿಲೆ ಕಲಾವಿದರಿಂದ ಸುಂದೋಪ ಸುಂದ ಕಾಳಗ ಬಡಗುತಿಟ್ಟು ಯಕ್ಷಗಾನ, ರಾತ್ರಿ 8.00ರಿಂದ ಯಕ್ಷಾರಾಧನ ನೂಪುರ ತಂಡದವರಿಂದ ಸುದರ್ಶನ ವಿಜಯ
ಚೆಂಡೆ ಮದ್ದಲೆ : ಶ್ರೀ ಪದ್ಯಾಣ, ಶ್ರೀಧರ್ ವಿಟ್ಲ, ಯೋಗಿಶ್ ಆಚಾರ್ಯ, ಪದ್ಮನಾಭ ಶೆಟ್ಟಿಗಾರ್
ಭಾಗವತರು : ಕನ್ನಡಿಕಟ್ಟೆ, ಪುಣಿಂಚಿತ್ತಾಯ, ಕಕ್ಕೆಪದವು, ಚಿನ್ಮಯ, ವೇಷಭೂಷಣ ಸಹಕಾರ : ಪ್ರಮೋದ್ ತಂತ್ರಿ ಉಡುಪಿ
ಸಂಪೂರ್ಣ ಸಹಕಾರವನ್ನ ಆಡಳಿತ ಮಂಡಳಿ ಹಾಗೂ ಗೌರವಾನ್ವಿತ ಸಿಬ್ಬಂದಿವರ್ಗ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ನಾಗವೃಜ ಕ್ಷೇತ್ರ ಪಾವಂಜೆ ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸುವವರು ಸೀತಾರಾಮ್ ಕುಮಾರ್ ಕಟೀಲ್.