ಮೇಗರವಳ್ಳಿಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಹೋರಾಟ!
– ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ: ಅಧಿಕಾರಿಗಳಿಗೆ ಎಚ್ಚರಿಕೆ
– ಅರೇಹಳ್ಳಿ ಗ್ರಾಮ ಸದಸ್ಯ ಸಿದ್ದಾರ್ಥ್ ವಿರುದ್ಧ ದೂರು ಪ್ರಕರಣ ಖಂಡನೆ
NAMMUR EXPRESS NEWS
ತೀರ್ಥಹಳ್ಳಿ: ಸಾರ್ವಜನಿಕ ರಸ್ತೆ ಕಾಮಗಾರಿ ಸಂಬಂಧಪಟ್ಟ ಹಾಗೆ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ಕೇಸು ದಾಖಲಿಸಿದ ಪ್ರಕರಣ ಖಂಡಿಸಿ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಮುಂದೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಮೇಗರವಳ್ಳಿ ಆರ್ ಎಫ್ ಓ ಕೆಲವು ಹಿತಾಸಕ್ತಿಗಳ ಕೈ ಗೊಂಬೆಯಂತೆ ವರ್ತಿಸಿ ಸಾರ್ವಜನಿಕರ ಅರ್ಜಿಯ ಮೇರೆಗೆ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ರಸ್ತೆ ದುರಸ್ತಿಗೆ ಹಣ ಮಂಜೂರು ಮಾಡಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಸಿದ್ದಾರ್ಥ್ ಅವರ ಮೇಲೆ ಅರಣ್ಯ ಇಲಾಖೆಯ ಪ್ರಕರಣ ದಾಖಲಿಸಿ ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನು ಇಂಥ ದುರ್ವರ್ತನೆ ಬಿಡಬೇಕು ಎಂದು ಜ್ಞಾನೇಂದ್ರ ಎಚ್ಚರಿಸಿದರು. ತೀರ್ಥಹಳ್ಳಿ ತಾಲೂಕು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟ ಕೂಡ ಪ್ರತಿಭಟನೆಯಲ್ಲಿ ಕೈ ಜೋಡಿಸಿತು. ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು, ಪ್ರಮುಖರಾದ ಕುಕ್ಕೆ ಪ್ರಶಾಂತ್, ನಂದನ್, ದಿಂಡ ಮಂಜುನಾಥ್, ಯಶೋದಾ, ಸಂತೋಷ್ ದೇವಾಡಿಗ, ಗುರು ಗೌಡ, ಮಧುರಾಜ್ ಹೆಗ್ಡೆ, ಯಶಸ್ವಿ, ಸಿದ್ದಾರ್ಥ್ ಸೇರಿ ಹಲವರು ಇದ್ದರು.