ಕರ್ನಾಟಕ ಟಾಪ್ ನ್ಯೂಸ್
– ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಏಕಾಏಕಿ ಸ್ಪೋಟ!
– ಮಾರ್ಗ ಮಧ್ಯೆ ಕಾರಿನಲ್ಲಿಯೇ 4.5 ಕೆಜಿ ಮಗುವಿಗೆ ಜನ್ಮ ನೀಡಿದ ಮಹಿಳೆ!
– ಭಾರತದಲ್ಲಿ ಮೊದಲ ಬಾರಿಗೆ ಓಡಲಿದೆ ಹೈಡೋಜನ್ ರೈಲು!
– ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI!
NAMMUR EXPRESS NEWS
ಮಹಾರಾಷ್ಟ್ರ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನ. 13ರಂದು ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಬಾಂಬ್ ನಂತೆ ಸ್ಪೋಟಗೊಂಡಿದೆ. ಗರ್ಭಿಣಿಯನ್ನು ಆಕೆಯ ಮನೆಯವರು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಸ್ವಲ್ಪ ಸಮಯದಲ್ಲೇ ಆಂಬುಲೆನ್ಸ್ ನಲ್ಲಿ ಬಾಂಬ್ ಸ್ಫೋಟದಂತೆ ಭಾರಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಮಾಧಾನದ ವಿಷಯವೆಂದರೆ ಸ್ಫೋಟದ ವೇಳೆ ಆಂಬ್ಯುಲೆನ್ಸ್ನಲ್ಲಿ ಇದ್ದವರೆಲ್ಲಾ ಹೊರಗೆ ಬಂದಿದ್ದರು. ಆಂಬ್ಯುಲೆನ್ಸ್ ಡ್ರೈವರ್ ವಾಹನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಅವ್ರು ಆಂಬ್ಯುಲೆನ್ಸ್ ಅನ್ನು ನಿಲ್ಲಿಸಿ ಎಲ್ಲರನ್ನೂ ಆಂಬ್ಯುಲೆನ್ಸ್ ನಿಂದ ಹಿರ ಬರುವಂತೆ ಸೂಚಿಸಿದ್ದಾರೆ. ಅಲ್ಲದೆ ಹತ್ತಿರದಲ್ಲಿದ್ದವರನ್ನು ಕಾರಿನಿಂದ ದೂರ ಸರಿಯುವಂತೆ ಹೇಳಿದ್ದಾರೆ.
* ಮಾರ್ಗ ಮಧ್ಯೆ ಕಾರಿನಲ್ಲಿಯೇ 4.5 ಕೆಜಿ ಮಗುವಿಗೆ ಜನ್ಮ ನೀಡಿದ ಮಹಿಳೆ!
ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬಳು ಕಾರಿನಲ್ಲಿ 4.5ಕೆಜಿ (10 ಪೌಂಡ್) ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆಗೆ ತಲುಪಲು ಸಮಯವಿಲ್ಲದ ಕಾರಣ, ಆಕೆಯ ಪತಿ ಶಾಂತವಾಗಿರುವಂತೆ ಹೇಳುತ್ತಿದ್ದು, ಸುರಕ್ಷಿತವಾಗಿ ಚಾಲನೆ ಮಾಡಲು ಪ್ರಯತ್ನಿಸಿದರು. ಹೆರಿಗೆ ಸನ್ನಿಹಿತವಾಗುತ್ತಿದ್ದಂತೆ, ಪತಿ ಬೇಗನೆ ಆಕೆ ಸೀಟ್ ಬೆಲ್ಟ್ ಬಿಚ್ಚಿ, ಪ್ರಯಾಣಿಕರ ಸೀಟಿನಲ್ಲಿಯೇ ಹೆರಿಗೆಗೆ ತಯಾರಿ ನಡೆಸಲು ಪ್ಯಾಂಟ್ ಕೆಳಗಿಳಿಸಲು ಸಹಾಯ ಮಾಡಿದನು. ವೈದ್ಯಕೀಯ ಸಹಾಯವಿಲ್ಲದೆ ಹೆರಿಗೆಯ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ಆಕೆ ಕಾರಿನಲ್ಲಿ ಮಗುವಿಗೆ ಜನ್ಮ ನೀಡುವಲ್ಲಿ ಯಶಸ್ವಿಯಾದಳು. ನಂತರ ಅವರ ನವಜಾತ ಮಗ ಕೆಲವು ಕ್ಷಣಗಳ ನಂತರ ಆರೋಗ್ಯಕರವಾಗಿ ಅಳುತ್ತಿದ್ದು, ಆಸ್ಪತ್ರೆಗೆ ಆಗಮಿಸಿದ ನಂತರ, ಸಿಬ್ಬಂದಿ ತ್ವರಿತವಾಗಿ ಕೆಲಸ ಮುಂದುವರೆಸಿದ್ದು, ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತ ಮತ್ತು ಚೆನ್ನಾಗಿದ್ದಾರೆ ಎಂದು ಖಚಿತಪಡಿಸಿಕೊಂಡರು. ಧೈರ್ಯಶಾಲಿ ಕ್ಷಣವನ್ನು ಸೆರೆಹಿಡಿಯುವ ವೀಡಿಯೊ ವೈರಲ್ ಆಗಿದ್ದು, ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ದಂಪತಿಗಳ ತಾಳ್ಮೆ, ಶೌರ್ಯವನ್ನ ವೀಕ್ಷಕರು ಶ್ಲಾಘಿಸಿದ್ದಾರೆ. ಈ ಘಟನೆ ಅಮೆರಿಕದಿಂದ ಬಂದಿದ್ದು, 2015ರಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
* ಭಾರತದಲ್ಲಿ ಮೊದಲ ಬಾರಿಗೆ ಓಡಲಿದೆ ಹೈಡೋಜನ್ ರೈಲು!
ನವದೆಹಲಿ : ಸದ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭಾರತದ ರೈಲು ಹಳಿಗಳ ಮೇಲೆ ಹೈಡೋಜನ್ ರೈಲು ಓಡಲಿದೆ.
ಡಿಸೆಂಬರ್ ನಲ್ಲಿ ಈ ಒಂದು ರೈಲನ್ನು ಭಾರತೀಯ ರೈಲ್ವೆ ಇದನ್ನು ಲಾಂಚ್ ಮಾಡಲಿದೆ. ಈ ರೈಲು ಓಡಲು ಯಾವುದೇ ರೀತಿಯ ಡಿಸೇಲ್ ಆಗಲಿ ವಿದ್ಯುತ್ ಶಕ್ತಿ ಆಗಲಿ ಬೇಕಿಲ್ಲ. ಇದು ಹೊರಸೂಸುವ ಕಾರ್ಬನ್ನ ಪ್ರಮಾಣ ಸೊನ್ನೆ ಎಂದು ಹೇಳಲಾಗಿದೆ. ಆರಂಭದಲ್ಲಿ ನೀರಿನಿಂದಲೇ ಈ ರೈಲು ತನ್ನ ಓಡುವ ಶಕ್ತಿಯನ್ನ ಉತ್ಪಾದಿಸಿಕೊಳ್ಳುವ ಈ ರೈಲು ಬಳಿಕ ಹೈಡೋಜನ್ ಶೆಲ್ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಿಕೊಂಡು ಓಡುತ್ತದೆ ಎಂದು ಕೂಡ ಹೇಳಲಾಗಿದೆ. 2030ರ ವೇಳೆಗೆ ಇಡೀ ರೈಲ್ವೆ ಇಲಾಖೆ ಜಿರೋ ಕಾರ್ಬನ್ ಎಮಿಟರ್ ಆಗಿ ಹೊರಹೊಮ್ಮುವ ಗುರಿಯನ್ನು ಇಟ್ಟುಕೊಂಡಿದೆ.
ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ. ಡಿಸೇಲ್ ಇಂಜಿನ್ಗಳ ರೈಲಿನಿಂದ ತೀವ್ರ ವಾಯುಮಾಲಿನ್ಯವಾಗುತ್ತದೆ. ಆದ್ರೆ ಹೈಡೋಜನ್ ಸೆಲ್ಗಳಿಂದ ಓಡುವ ಈ ರೈಲು ಯಾವುದೇ ರೀತಿಯ ಕಾರ್ಬನ್ ಡೈಯಾಕ್ಸೆಡ್ ಹಾಗೂ ನೆಟ್ರೋಜನ್ ಆಕ್ಸಿಡ್ಗಳನ್ನ ಹೊರಸೂಸುವುದಿಲ್ಲ.ಹೀಗಾಗಿ ಭವಿಷ್ಯದಲ್ಲಿ ಇದು ಪರಿಸರ ಸ್ನೇಹಿ ರೈಲ್ವೆಯಾಗಿ ದೇಶಾದ್ಯಂತ ಗುರುತಿಸಿಕೊಳ್ಳಲಿದೆ. ಹಿಮಾಚಲ ಪ್ರದೇಶ, ನೀಲಗಿರಿ ಮೌಂಟೇನ್ ರೈಲ್ವೆ, ಕಲ್ಕಾ- ಶಿಮ್ಲಾ ರೈಲ್ವೆ ಇಂತಹ ಪ್ರದೇಶಗಳಲ್ಲಿ ಓಡಿಸಲು ಚಿಂತನೆ ನಡೆದಿದೆ. 2025ರೊಳಗೆ ದೇಶದಲ್ಲಿ ಒಟ್ಟು 35 ಹೈಡೋಜನ್ ರೈಲುಗಳನ್ನು ಓಡಿಸುವ ಗುರಿಯನ್ನು ಹೊಂದಿದೆ ರೈಲ್ವೆ ಇಲಾಖೆ. ಈ ರೈಲಿನ ವೇಗ ಗಂಟೆಗೆ 140 ಕಿಲೋ ಮೀಟರ್ ಎಂದು ಹೇಳಲಾಗುತ್ತಿದೆ.
* ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ SBI!
ಮುಂಬೈ: ಎಸ್ಬಿಐ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧಾರಿತ ಸಾಲದ (ಎಂಸಿಎಲ್ಆರ್) ಮೇಲಿನ ಬಡ್ಡಿದರವನ್ನು ಶೇ.0.05ರಷ್ಟು ಹೆಚ್ಚಿಸಿದೆ. ಇಂದಿನಿಂದಲೇ ನ.15 ಈ ಆದೇಶ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಒಂದು ವರ್ಷದ ಎಂಸಿಎಲ್ಆರ್ ಬಡ್ಡಿದರವನ್ನು ಶೇ.9ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ದೀರ್ಘಕಾಲದ ಗೃಹ ಸಾಲದ ಮೇಲಿನ ಇಎಂಐ ಏರಿಕೆಯಾಗಲಿದೆ. ಎಸ್ಬಿಐ ನೀಡಿರುವ ಸಾಲದ ಪೈಕಿ ಶೇ 42ರಷ್ಟು ಸಾಲಗಳು ಎಂಸಿಎಲ್ಆರ್ ಬಡ್ಡಿದರದೊಟ್ಟಿಗೆ ಸಂಯೋಜನೆಗೊಂಡಿವೆ.