ಮಳೆಗಾಲದಲ್ಲಿ ಅಡಿಕೆಗೆ ಬಂತು ಬಂಪರ್ ಬೆಲೆ!
– 83 ಸಾವಿರದ ಗಡಿದಾಟಿದ ಸರಕು: ರಾಶಿ, ಬೆಟ್ಟೆಗೆ ಭಾರೀ ಡಿಮ್ಯಾಂಡ್
– ಅಡಿಕೆ ಬೆಳೆಗಾರರ ಮೊಗದಲ್ಲಿ ಮೂಡಿದ ಮಂದಹಾಸ
– ತೀರ್ಥಹಳ್ಳಿ ಅಡಿಕೆಗೆ ರಾಜ್ಯದಲ್ಲೇ ಅತೀ ಹೆಚ್ಚು ದರ!
NAMMUR EXPRESS
ಶಿವಮೊಗ್ಗ/ಚಿಕ್ಕಮಗಳೂರು /ಮಂಗಳೂರು: ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ದರ ಲಭ್ಯವಾಗುತ್ತಿರುವುದು ಅಡಿಕೆ ಬೆಳೆಗಾರರಿಗೆ ಸಂತಸ ತಂದಿದೆ. ಸರಕು ಗರಿಷ್ಠ 83 ಸಾವಿರಕ್ಕೆ ಶನಿವಾರ ಅಡಿಕೆ ಮಾರಾಟವಾಗಿದೆ. ಕನಿಷ್ಠ ಅಂದರೆ ₹50,599 ದರ ದೊರೆತಿದೆ. ಸರಕು ಅಡಿಕೆಗೆ ಈ ದರ ದೊರಕ್ಕಿದ್ದು, ರಾಶಿ ಹಾಗೂ ಬೆಟ್ಟೆಗೆ ಕ್ವಿಂಟಾಲ್ಗೆ ಅರ್ಧಲಕ್ಷ ಸಿಗುತ್ತಿದೆ.
ಕಳೆದ ತಿಂಗಳು ಕ್ವಿಂಟಲ್ಗೆ ₹80 ಸಾವಿರದ ಆಸುಪಾಸಿನಲ್ಲಿತ್ತು. ಆನಂತರ ಜುಲೈ ಆರಂಭದಲ್ಲಿ ಅಡಿಕೆ ದರ ಕ್ವಿಂಟಾಲ್ ₹76,000 ಆಸುಪಾಸು ತಲುಪಿತ್ತು . ಇದೀಗ ಮತ್ತೆ ಅಡಿಕೆ ದರದಲ್ಲಿ ಮತ್ತೆ ಏರಿಕೆ ಕಂಡಿದೆ. ಈಗಾಗಲೇ ಅಡಿಕೆ ಬೆಲೆ ಏರಿದ್ದು ಮುಂದಿನ ವರ್ಷವೂ ಇದೇ ದರವನ್ನು ರೈತರು ನಿರೀಕ್ಷೆ ಮಾಡಿದ್ದಾರೆ.
ಯಾವ ಊರಲ್ಲಿ ಜು.9ಕ್ಕೆ ಎಷ್ಟು ದರ?
ತೀರ್ಥಹಳ್ಳಿ;
ಬೆಟ್ಟೆ- 55,300/-
ಇಡಿ- 54,510/-
ಗೊರಬಲು- 40,510/-
ರಾಶಿ ಅಡಿಕೆ- 54,700/-
ಸರಕು- 83,330/
ಸಿಪ್ಪೆಗೋಟು -19,020/-
ಕೊಪ್ಪ:
ಬೆಟ್ಟೆ-53,700/-
ಗೊರಬಲು-37,500/-
ರಾಶಿ ಅಡಿಕೆ -50,700/-
ಸರಕು -81,363/-
ಶಿವಮೊಗ್ಗ;
ಬೆಟ್ಟೆ- 55,382/-
ಗೊರಬಲು- 42,399/-
ರಾಶಿ ಅಡಿಕೆ- 56,299/-
ಸರಕು- 82,496/-
ಚನ್ನಗಿರಿ;
ರಾಶಿ ಅಡಿಕೆ- 56,299/-
ಹೊನ್ನಾಳಿ;
ರಾಶಿ ಅಡಿಕೆ- 53,279/-
ಸಿದ್ದಾಪುರ;
ಬಿಳಿಗೋಟು- 35,099/-
ಚಾಲಿ-40,009/-
ಹಳೇ ಚಾಲಿ -39,388/-
ಕೆಂಪುಗೋಟು- 34,699/-
ರಾಶಿ ಅಡಿಕೆ- 53,499/-
ತಟ್ಟಿಬೆಟ್ಟೆ- 52,099/-
ಶಿರಸಿ;
ಬೆಟ್ಟೆ- 46,669/-
ಬಿಳಿಗೋಟು- 34,309/-
ಚಾಲಿ-40,338/-
ಕೆಂಪುಗೋಟು- 37,499/-
ರಾಶಿ ಅಡಿಕೆ- 52,499/-
ಯಲ್ಲಾಪುರ;
ಬಿಳಿಗೋಟು- 36,299/-
ಚಾಲಿ-39,599/-
ಕೆಂಪುಗೋಟು- 35,699/-
ರಾಶಿ ಅಡಿಕೆ- 54,309/-
ತಟ್ಟಿಬೆಟ್ಟೆ- 48,617/-
ಸಾಗರ;
ಬಿಳಿಗೋಟು- 35,099/-
ಚಾಲಿ-39,339/-
ಕೆಂಪುಗೋಟು-42,899/-
ರಾಶಿ ಅಡಿಕೆ- 55,599/-
ಸಿಪ್ಪೆಗೋಟು- 22,059/-
ಸೊರಬ;
ಬಿಳಿಗೋಟು-30,313/-
ಚಾಲಿ-33,200/-
ಗೊರಬಲು-36,100/- ಸಿಪ್ಪೆಗೋಟು- 19,099/-
ರಾಶಿ ಅಡಿಕೆ- 52,510/-
ಸಿಪ್ಪೆಗೋಟು -19,099/-
ತುಮಕೂರು;
ರಾಶಿ ಅಡಿಕೆ- 52,099/-
ಭದ್ರಾವತಿ;
ರಾಶಿ ಅಡಿಕೆ- 55,399/-
ಕುಂದಾಪುರ:
ಹಳೇ ಚಾಲಿ -47,000/-
ಹೊಸ ಚಾಲಿ-41,500/-
ತರೀಕೆರೆ;
ಪುಡಿ- 12,500/-
ರಾಶಿ ಅಡಿಕೆ -53,210/-
ಗುಬ್ಬಿ;
ರಾಶಿ ಅಡಿಕೆ -51,000/-
ಬೆಟ್ಟೆ-41,000/-
2000 ನೋಟು ವಾಪಾಸ್: ಅಡಿಕೆ ದರ ಏರಿಕೆಗೆ ಕಾರಣ?!
2 ಸಾವಿರ ರೂಪಾಯಿ ನೋಟು ವಾಪಸ್ ಎಂಬ ಕೇಂದ್ರ ಸರ್ಕಾರದ ನಿರ್ಧಾರ, ಅಡಿಕೆ ಬೆಲೆ ಹೆಚ್ಚಾಗಲು ಕಾರಣವಾಗಿದ್ಯಾ? ಹೀಗೊಂದು ಅಭಿಪ್ರಾಯವೂ ಅಡಿಕೆ ಮಾರಾಟದ ಬಗ್ಗೆ ತಿಳಿದವರಿಂದ ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಅಡಿಕೆ ರೇಟು ಹೆಚ್ಚಾಗುತ್ತಿದೆ. ಅಡಿಕೆ ರೇಟು ಹೆಚ್ಚಾಗಲು ಕಾರಣವಾಗಿದ್ದು ಎನು ಎನ್ನುವ ಪ್ರಶ್ನೆಗೆ ನಾನಾ ಅಭಿಪ್ರಾಯಗಳು ಕೇಳಿಬರುತ್ತಿದೆ. ತಗ್ಗಿದ ಅಡಿಕೆ ಉತ್ಪಾದನೆ, ಎಲೆಚುಕ್ಕಿ ರೋಗದಿಂದ ಆದ ಸಮಸ್ಯೆಯಿಂದಾಗಿಯು ಅಡಿಕೆ ಪೂರೈಕೆಯಲ್ಲಿ ವತ್ಯಾಸವಾಗಿ ಅಡಿಕೆ ದರ ಏರುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ವಿದೇಶಿ ಅಡಿಕೆಯ ಮೇಲಿನ ನಿಯಂತ್ರಣವೂ ಅಡಿಕೆ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023