Author: Nammur Express Admin

ಇಲ್ಲಿ ಎಲ್ಲಾ ಧರ್ಮದವರು ಸೇರಿ ಗಣೇಶ ಕೂರಿಸಿದರು! – ಎನ್.ಆರ್ ಪುರ ತಾಲೂಕಿನ ರಾಜೀವ್ ನಗರದಲ್ಲಿ ವಿಶೇಷ – ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಧರ್ಮದವರ ಸಮಾಗಮ NAMMUR EXPRESS NEWS ಎನ್.ಆರ್.ಪುರ: ಎನ್ ಆರ್ ಪುರ ಪಟ್ಟಣದ ರಾಜೀವ್ ನಗರದಲ್ಲಿ ಭಾವೈಕ್ಯತೆಯ ಗಣಪ ಗಮನ ಸೆಳೆದಿದೆ. ಸರ್ವಧರ್ಮದ ರಾಜೀವ್ ನಗರದ ಸಾರ್ವಜನಿಕರೆಲ್ಲರೂ ಸೇರಿ ಪ್ರತಿವರ್ಷ ಒಟ್ಟಾಗಿ ವಿನಾಯಕ ಸೇವಾ ಸಮಿತಿ ರಚಿಸಿಕೊಂಡು 3 ದಿನಗಳ ಗಣೇಶೋತ್ಸವವನ್ನು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವುದು ವಿಶೇಷವಾಗಿದೆ. ಪಟ್ಟಣ ಪಂಚಾಯ್ತಿ ಸದಸ್ಯೆ ಹಾಗೂ ಸಮಾಜ ಸೇವಕಿ ಜುಬೇದ‌ ಸತತ 14 ವರ್ಷದಿಂದಲೂ ಈ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಉತ್ಸವದ ಜವಾಬ್ದಾರಿ ವಹಿಸಿದ್ದಾರೆ. ಪ್ರಧಾನಕಾರ್ಯದರ್ಶಿಯಾಗಿ ಮಗೇಶ,ಬುದ್ದೇಶ ಮತ್ತು ಖಜಾಂಚಿಯಾಗಿ ಸುಜಾತ ಸೇರಿ ಅನೇಕ ಸದಸ್ಯರು ಇದ್ದಾರೆ. ಈ ಸೇವಾ ಸಮಿತಿಯಲ್ಲಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಸಮುದಾಯದ ಸದಸ್ಯರಿದ್ದು ಎಲ್ಲರೂ ಒಟ್ಟಾಗಿ ಹಿಂದೂ ಸಂಪ್ರದಾಯದಂತೆ 3 ದಿನಗಳ ಕಾಲ ಪೂಜೆ,ಸಂ್ಕೃತಿಕ ಕಾರ್ಯಕ್ರಮ,ಗಣಪತಿ ವಿಸರ್ಜನೆ ನಡೆಸಿಕೊಂಡು ಬಂದಿದ್ದು ಇದು ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.

Read More

ರಾಜ್ಯದ ಸಿಂಪಲ್ ಪತ್ರಕರ್ತ ವಸಂತ ನಾಡಿಗೇ‌ರ್ ಇನ್ನಿಲ್ಲ! – ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ವಸಂತ ನಾಡಿಗೇ‌ರ್ ಹೃದಯಾಘಾತದಿಂದ ನಿಧನ – ಮಾಧ್ಯಮ ಕ್ಷೇತ್ರಕ್ಕೆ ನೂರಾರು ಅಪ್ರತಿಮ ಪ್ರತಿಭೆಗಳನ್ನು ನೀಡಿದ್ದ ಸಾಧಕ NAMMUR EXPRESS NEWS ರಾಜ್ಯದ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಸಂತ ನಾಡಿಗೇರ್(59) ಬೆಂಗಳೂರಿನಲ್ಲಿ ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ವಸಂತ ನಾಡಿಗೇರ್ ಶೈಲಿ ಹಾಗೂ ಆಕರ್ಷಕ ಹೆಡ್ಡಿಂಗ್ ಮೂಲಕವೇ ಸುದ್ದಿಮನೆಗಳಲ್ಲಿ ಜನಪ್ರಿಯರಾಗಿದ್ದರು. ನಾಡಿಗೇ‌ರ್ ಅವರು ಕನ್ನಡ ಪ್ರಭ, ವಿಜಯ ಕರ್ನಾಟಕ. ವಿಶ್ವವಾಣಿ ಹಾಗೂ ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, ಪುತ್ರಿ & ಪುತ್ರನನ್ನು ಅಗಲಿದ್ದಾರೆ. ಅಪಾರ ಶಿಷ್ಯ ಹಾಗೂ ಸ್ನೇಹಿತರನ್ನು ಅಗಲಿರುವ ಅವರ ಸೇವೆ ಕನ್ನಡ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ಸಿಂಪಲ್ ವ್ಯಕ್ತಿತ್ವದಿಂದ ಅಪಾರ ಪ್ರಮಾಣದ ಶಿಷ್ಯರನ್ನು ರೂಪಿಸಿರುವ ವಸಂತ…

Read More

ಬೆಂಗಳೂರು ಬಸ್ ಸೇರಿ ಎಲ್ಲೆಡೆ ರಶ್ ರಶ್! – ಖಾಸಗಿ ಬಸ್ ದರ ಹೆಚ್ಚಿದ್ರೂ ಜನವೋ ಜನ – ರೈಲು, ಬಸ್ ಅಲ್ಲಿ ಕಾಲು ಇಡಲು ಜಾಗ ಇಲ್ಲ – ಸೋಮವಾರ ಕೂಡ ರಶ್ ಇರುತ್ತೆ…?! NAMMUR EXPRESS NEWS ಮಲೆನಾಡು: ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಜನ ಮತ್ತೆ ತಮ್ಮ ತಮ್ಮ ಊರುಗಳಿಗೆ ಹೊರಟ ಕಾರಣ ಭಾನುವಾರ ಮತ್ತು ಶನಿವಾರ ಎಲ್ಲೆಡೆ ಬಸ್ ರಶ್ ಆಗಿದ್ದವು. ಸೋಮವಾರವೂ ರಶ್ ಆಗುವ ಸಾಧ್ಯತೆ ಇದೆ. ಶುಕ್ರವಾರ ಬೆಂಗಳೂರಿಂದ ಬರುವಾಗ ಅನೇಕರಿಗೆ ಬಸ್ ಸಿಗದೆ ಪರದಾಟ ನಡೆಸಿದ್ದರು. ಅದರಲ್ಲೂ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ ಭಾಗಕ್ಕೆ ಜನರ ದಂಡು ಕಂಡು ಬಂದಿತ್ತು.. ಭಾನುವಾರ ಕೂಡ ಖಾಸಗಿ ಬಸ್ ಫುಲ್ ಆಗಿ ಹೊಸ ಬಸ್ ಸೇವೆ ಇತ್ತು. ಸರ್ಕಾರಿ ಬಸ್, ರೈಲು ಕಾಲು ಹಾಕದಷ್ಟು ತುಂಬಿ ಹೋಗಿದ್ದವು. ಇನ್ನು ಖಾಸಗಿ ಬಸ್ ದರ ಕೂಡ 1000-2000 ಆಗಿತ್ತು. ಕೆಎಸ್ಆರ್ಟಿಸಿ ಕೂಡ ವಿಶೇಷ ಬಸ್…

Read More

ಸಹ್ಯಾದ್ರಿ ಪಿಯು ಪ್ರಾಂಶುಪಾಲ ಗುರುರಾಜ್ ಅವರಿಗೆ ಗೌರವ – ಕ್ರೀಡೆ, ಶಿಕ್ಷಣ ಕ್ಷೇತ್ರದಲ್ಲಿ ಎಲೆ ಮರೆ ಕಾಯಂತೆ ಸೇವೆ – ಶಿವಮೊಗ್ಗದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕ್ಲಬ್ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಸಹ್ಯಾದ್ರಿ ಪಿಯು ಕಾಲೇಜು ಮತ್ತು ಪ್ರೌಢ ಶಾಲೆ ಇದೀಗ ತೀರ್ಥಹಳ್ಳಿ ತಾಲೂಕಿನ ಹಾಗೂ ಜಿಲ್ಲೆಯ ಟಾಪ್ ಕಾಲೇಜು,ಶಾಲೆಗಳಲ್ಲಿ ಒಂದಾಗಿದೆ. ಈ ಸಾಧನೆಗೆ ತೀರ್ಥಹಳ್ಳಿ ಒಕ್ಕಲಿಗರ ಸಂಘದ ಮಾರ್ಗದರ್ಶನ ಒಂದು ಕಡೆ ಆದರೆ, ಇನ್ನೊಂದೆಡೆ ಸಹ್ಯಾದ್ರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ ಎಚ್ ಬಿ ಅವರ ಸಾರ್ಥಕ ಸೇವೆ, ಮಕ್ಕಳ ಪರ ಕಾಳಜಿ ಕೂಡ ಶಿಕ್ಷಣ ಗುಣಮಟ್ಟ, ಮಕ್ಕಳ ಅಭಿವೃದ್ಧಿಗೆ ಬಹು ಮುಖ್ಯ ಕಾರಣವಾಗಿದೆ. ಶಿಕ್ಷಣ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ, ಪಠ್ಯ ಇತರೆ ಚಟುವಟಿಕೆ ಹಾಗೂ ವ್ಯಕ್ತಿತ್ವ ವಿಕಸನದ ಮೂಲಕ ಸಾವಿರಾರು ಮಕ್ಕಳ ಗಾಡ್ ಫಾದರ್ ಆಗಿದ್ದಾರೆ. ಗುರುರಾಜ್ ಅವರನ್ನು ಇತ್ತೀಚಿಗೆ ಶಿವಮೊಗ್ಗದ ಯುನೈಟೆಡ್ ಸ್ಪೋರ್ಟ್ಸ್ ಅಂಡ್ ಕಲ್ಬಲ್ ಕ್ಲಬ್ ವರ ಶಿಕ್ಷಣ…

Read More

ಐತಿಹಾಸಿಕ ಆರಗದಲ್ಲಿ ಕ್ರೀಡಾ ಸಂಭ್ರಮಕ್ಕೆ ಸಜ್ಜು! – ಸೆ.10, 11ರಂದು ತಾಲೂಕು ಮಟ್ಟದ ಬಾಲಕಿಯರ ಗುಂಪು ಆಟ – ಗ್ರಾಮಸ್ಥರು, ಸಂಘ ಸಂಸ್ಥೆಗಳು, ದಾನಿಗಳ ಸಹಕಾರ – ಶಾಲೆಯ ಪುನರುಜ್ಜೀವನಗೊಳಿಸಿದ ಹಳೆ ವಿದ್ಯಾರ್ಥಿಗಳು NAMMUR EXPRESS NEWS ತೀರ್ಥಹಳ್ಳಿ: ಪೌರಾಣಿಕ, ಐತಿಹಾಸಿಕ ಮಹತ್ವದ ಆರಗ ಈ ಬಾರಿ ತಾಲೂಕು ಮಟ್ಟದ ಪ್ರೌಢಶಾಲೆಗಳ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳ ಕ್ರೀಡಾಕೂಟಕ್ಕೆ ಸಜ್ಜಾಗಿದೆ. ಆತಿಥ್ಯ ವಹಿಸಿರುವ ಆರಗ ಪ್ರೌಢಶಾಲೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಡೆಸಿಕೊಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗ್ರಾಮಸ್ಥರು, ಸಂಘ ಸಂಸ್ಥೆಗಳು, ದಾನಿಗಳು ಕ್ರೀಡಾಕೂಟದ ಯಶಸ್ವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಸೆ.10 ಮತ್ತು 11 ರಂದು ತೀರ್ಥಹಳ್ಳಿ ತಾಲೂಕು ವಲಯ ಮತ್ತು ತಾಲೂಕು ಮಟ್ಟದ ಪ್ರೌಢಶಾಲೆಗಳ 17 ವರ್ಷದೊಳಗಿನ ಬಾಲಕಿಯರ ಗುಂಪು ಆಟಗಳು ನಡೆಯಲಿವೆ. ರಾಜ್ಯಕ್ಕೆ ಆರಗದ ಹೆಗ್ಗಳಿಕೆ ಅಪಾರ ಪಾಂಡವರು ವನವಾಸ ಕಾಲದಲ್ಲಿ ನೆಲೆನಿಂತಿದ್ದ ಅರಗಿನ ಮನೆಯೇ ಆರಗ ಎಂಬ ಪೌರಾಣಿಕ ಕೊಂಡಿಯೊಂದನ್ನು ಹೊಂದಿದ್ದು, ಐತಿಹಾಸಿಕವಾಗಿ ಹಲವು ಹಿನ್ನೆಲೆಗಳಿವೆ. ದೇವಸ್ಥಾನಗಳ…

Read More

ಹೆಚ್ಚಾಯ್ತು ಮಳೆ: ತೋಟದಲ್ಲಿ ಕೊಳೆ! – ಮಲೆನಾಡ ರೈತನ ಬದುಕು ಆತಂಕದತ್ತ: ದೇವರೇ ಕಾಪಾಡು – ಒಂದು ಕಡೆ ಮಳೆ, ಇನ್ನೊಂದೆಡೆ ಅಡಿಕೆ ದರ ಕುಸಿತ – ರೈತರಿಗೆ ಪರಿಹಾರ ಘೋಷಿಸಬೇಕೆಂದು ಕ್ಯಾಂಪ್ಕೊ ಮನವಿ NAMMUR EXPRESS NEWS ಮಲೆನಾಡು: ಮಲೆನಾಡಿನ ಜೀವನ ಆಧಾರ ಬೆಳೆ ಅಡಿಕೆಗೆ ಮಳೆ ಹೆಚ್ಚಾದ ಕಾರಣ ಕೊಳೆ ರೋಗ ಬಾಧಿಸಿದ್ದು ಎಲ್ಲೆಡೆ ಅಡಿಕೆ ಕೊಳೆ ರೋಗದ ಕಾರಣ ಉದುರುತ್ತಿದೆ. ಒಂದು ಕಡೆ ಭಾರೀ ಮಳೆ ಕಾರಣ ಕೊಳೆ ಬಂದು ಈಗಾಗಲೇ ತೋಟಗಳಲ್ಲಿ 4-5 ಬಾರಿ ಔಷಧಿ ಸಿಂಪಡಣೆ ಮಾಡಲಾಗಿದೆ. ಇದೀಗ ಮಳೆ ಕಳೆದ ಒಂದು ವಾರದಿಂದ ಹೆಚ್ಚಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ,ಹೊಸನಗರ, ಭದ್ರಾವತಿ, ಸಾಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ನ. ರಾ ಪುರ, ಕಳಸ, ಮೂಡಿಗೆರೆ, ಚಿಕ್ಕಮಗಳೂರು ಸೇರಿ ಮಲೆನಾಡ ಭಾಗದಲ್ಲಿ ಕೊಳೆ ಮತ್ತು ಎಲೆ ಚುಕ್ಕಿ ರೋಗ ರೈತರನ್ನು ಆತಂಕಕ್ಕೆ ತಳ್ಳಿದೆ. ಈ ನಡುವೆ ಮಳೆ ಮತ್ತೆ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶಿವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವಾಗಲಿದೆ. ಆಸ್ತಿ ಖರೀದಿ ಸಾಧ್ಯ. ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಸ್ಥರು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ವೈಯಕ್ತಿಕ ಬೆಳವಣಿಗೆಗೆ ಅನೇಕ ಅವಕಾಶಗಳು ಸಿಗಲಿವೆ. ನಿಮ್ಮ ಪ್ರೀತಿಪಾತ್ರರ ಪ್ರೀತಿ ಮತ್ತು ಬೆಂಬಲದಿಂದ ಮನಸ್ಸು ಸಂತೋಷವಾಗುತ್ತದೆ. ಹೃದ್ರೋಗಿಗಳು ಆರೋಗ್ಯದ ಕಡೆ ಗಮನ ಹರಿಸೇಕು. ್ಯಕ್ತಿತ್ವ ಸುಧಾರಿಸುತ್ತದೆ. ಆಕರ್ಷಣೆಯ ಕೇಂದ್ರವಾಗಿ ಉಳಿಯಲಿದೆ. ಕೌಟುಂಬಿಕ ಜೀವನದಲ್ಲಿ…

Read More