Categories
ರಾಜ್ಯ

ರಾಜ್ಯದ ಸಿಂಪಲ್ ಪತ್ರಕರ್ತ ವಸಂತ ನಾಡಿಗೇ‌ರ್ ಇನ್ನಿಲ್ಲ!

ರಾಜ್ಯದ ಸಿಂಪಲ್ ಪತ್ರಕರ್ತ ವಸಂತ ನಾಡಿಗೇ‌ರ್ ಇನ್ನಿಲ್ಲ!
– ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ವಸಂತ ನಾಡಿಗೇ‌ರ್ ಹೃದಯಾಘಾತದಿಂದ ನಿಧನ
– ಮಾಧ್ಯಮ ಕ್ಷೇತ್ರಕ್ಕೆ ನೂರಾರು ಅಪ್ರತಿಮ ಪ್ರತಿಭೆಗಳನ್ನು ನೀಡಿದ್ದ ಸಾಧಕ

NAMMUR EXPRESS NEWS
ರಾಜ್ಯದ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಸಂತ ನಾಡಿಗೇರ್(59) ಬೆಂಗಳೂರಿನಲ್ಲಿ ಸೋಮವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ವಸಂತ ನಾಡಿಗೇರ್ ಶೈಲಿ ಹಾಗೂ ಆಕರ್ಷಕ ಹೆಡ್ಡಿಂಗ್ ಮೂಲಕವೇ ಸುದ್ದಿಮನೆಗಳಲ್ಲಿ ಜನಪ್ರಿಯರಾಗಿದ್ದರು. ನಾಡಿಗೇ‌ರ್ ಅವರು ಕನ್ನಡ ಪ್ರಭ, ವಿಜಯ ಕರ್ನಾಟಕ. ವಿಶ್ವವಾಣಿ ಹಾಗೂ ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ನಿ, ಪುತ್ರಿ & ಪುತ್ರನನ್ನು ಅಗಲಿದ್ದಾರೆ.
ಅಪಾರ ಶಿಷ್ಯ ಹಾಗೂ ಸ್ನೇಹಿತರನ್ನು ಅಗಲಿರುವ ಅವರ ಸೇವೆ ಕನ್ನಡ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ತಮ್ಮ ಸಿಂಪಲ್ ವ್ಯಕ್ತಿತ್ವದಿಂದ ಅಪಾರ ಪ್ರಮಾಣದ ಶಿಷ್ಯರನ್ನು ರೂಪಿಸಿರುವ ವಸಂತ ನಾಡಿಗೇರ್ ಅವರ ನಿಧನಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.