ಕುಪ್ಪಳಿ ಕವಿ ಮನೆ ಮುಂದೆ ವಿಶ್ವಮಾನವ ಸಂದೇಶ ಫಲಕ! – ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕದ ವಿಶೇಷ – ಕುಪ್ಪಳಿಯ ಕವಿಮನೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ NAMMUR EXPRESS NEWS ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರ ಮನೆ ಕುಪ್ಪಳಿಯ ಕವಿಮನೆ ಆವರಣದಲ್ಲಿ ವಿಶ್ವಮಾನವ ಸಂದೇಶ ಫಲಕ ಅನಾವರಣಗೊಳಿಸಲಾಗಿದೆ. ಕುವೆಂಪು ಅವರ ಮನೆ ಎದುರು ಹುಲ್ಲು ಹಾಸಿನ ಪಕ್ಕ ಈ ಫಲಕ ಅನಾವರಣ ಮಾಡಿದ್ದು ಪ್ರವಾಸಿಗರಿಗೆ ಇದೊಂದು ವಿಶೇಷ ಆಕರ್ಷಣೆ ಆಗಿದೆ. ವಿಶ್ವಮಾನವ ಸಂದೇಶವುಳ್ಳ ವಿಶೇಷ ಫಲಕ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಆವರಣದಲ್ಲಿ ವಿಶ್ವಮಾನವ ಸಂದೇಶವುಳ್ಳ 36 ಅಡಿ ಅಗಲ, 18 ಅಡಿ ಎತ್ತರದ ಫಲಕ ಇದಾಗಿದೆ. ಈ ಫಲಕವನ್ನು ಗ್ರಾನೈಟ್‌ನಲ್ಲಿ ಕೆತ್ತಲಾಗಿದೆ. ಕವಿ ಕುವೆಂಪು ಪರಿಚಯ, ಸಪ್ತಸೂತ್ರ, ಪಂಚಮಂತ್ರ, ವಿಶ್ವಮಾನವ ಗೀತೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. 9 ಅಡಿ ಎತ್ತರ 4 ಅಡಿ ಅಗಲವಿರುವ ಕುವೆಂಪು ಅವರ ಕಂಚಿನ…
Author: Nammur Express Admin
ಗಣೇಶ ಮತ್ತೆ ಬಂದ.. ಏನಿದು ಹಬ್ಬದ ವಿಶೇಷ?! – ಆಚರಣೆ ಹೇಗೆ..? ಎಲ್ಲರಿಗೂ ಹಬ್ಬದ ಶುಭಾಶಯಗಳು NAMMUR EXPRESS NEWS ಭಗವಂತ ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅಂದರೆ, ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುವವನು. ಮಹಾಭಾರತವನ್ನು ಬರೆಯುವಾಗ ವ್ಯಾಸರು ಉತ್ತಮ ಲಿಪಿಕಾರನನ್ನು ಅರಸುವ ಸಂದರ್ಭ ಸಿಕ್ಕಿದ್ದು ಈ ಗಜಮುಖನೆ. ಈ ಮೂಲಕ ಗಣೇಶನ ಬುದ್ಧಿವಂತಿಕೆಯನ್ನು ಗಮನಿಸಬಹುದಾಗಿದೆ. ಗಣೇಶ ಚತುರ್ಥಿಯು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ವಿಘ್ನಹರ್ತಾ, ಬುದ್ಧಿಯ ದೇವರು ಎಂದು ಪೂಜಿಸಲ್ಪಡುವ ಗಣಪತಿಯ ಜನ್ಮದಿನವನ್ನು ಆಚರಿಸುತ್ತದೆ. ಈ ಹಬ್ಬವು ಭಾರತದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲ್ಪಡುತ್ತದೆ ಮತ್ತು ಇದಕ್ಕೆ ಹಲವಾರು ಮಹತ್ವಗಳಿವೆ. * ಅವುಗಳನ್ನು ಒಂದೊಂದಾಗಿ ಗಮನಿಸುವುದಾದರೆ! ವಿಘ್ನ ನಿವಾರಣೆ: ಗಣೇಶನನ್ನು ವಿಘ್ನವಿನಾಶಕ ಎಂದು ಪೂಜಿಸಲಾಗುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸುವುದರಿಂದ ಎ್ಲಾ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಗಣೇಶನ ಮೂರ್ತಿ ಪ್ರತಿಷ್ಠಾಪನೆ: ಈ ದಿನ ಮನೆ ಅಥವಾ ಪೂಜಾ…
ಶೃಂಗೇರಿಯ ಖ್ಯಾತ ವೈದ್ಯ ಡಾ.ಉರಾಳ್‌ಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್ – ವೆರಿಕೋಸ್ ಸಮಸ್ಯೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ನೀಡುವ ಮೂಲಕ ಅನೇಕ ವರ್ಷದಿಂದ ಸೇವೆ – ರಾಜ್ಯದ ಪ್ರಸಿದ್ಧ ವೈದ್ಯರಲ್ಲಿ ಇವರು ಒಬ್ಬರು NAMMUR EXPRESS NEWS ಶೃಂಗೇರಿ: ವೆರಿಕೋಸ್ ಖಾಯಿಲೆಗೆ ತಮ್ಮದೇ ಆಯುರ್ವೇದ ಚಿಕಿತ್ಸೆ ಮೂಲಕ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಅನೇಕ ವರ್ಷದಿಂದ ಖಾಯಿಲೆ ಗುಣ ಮಾಡುವ ಶೃಂಗೇರಿಯ ಖ್ಯಾತ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳ್‌ರವರಿಗೆ ಕರ್ನಾಟಕ ಹೇಲ್ತ್ ಕೇರ್ ಆಯುಷ್ ಎಕ್ಸಲೆನ್ಸ್ ಅವಾರ್ಡ್ ನೀಡಿದೆ. ಮೂಲತಃ ಉಡುಪಿಯ ಕೋಟಾದ ಮಣೂರಿನವರಾದ ಇವರು ತಮ್ಮ ಆಯುರ್ವೇದ ಅಧ್ಯಯನದ ನಂತರ ಶೃಂಗೇರಿಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿ ವಿವಿಧ ದೀರ್ಘಕಾಲದ ಖಾಯಿಲೆಗೆ ಸರಳ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುತ್ತಾ ಬಂದಿದ್ದಾರೆ. ವೆರಿಕೋಸ್ ಸಮಸ್ಯೆಗೆ ಸೂಕ್ತ ಔಷಧಿ ಇಲ್ಲದಿರುವುದನ್ನು ಮನಗಂಡ ಇವರು ತಮ್ಮದೇ ಪರಿಕಲ್ಪನೆ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಸತತ ಐದು ವರ್ಷಗಳ ಕಾಲ ಕ್ಲಿನಿಕಲ್ ಸಂಯೋಜನೆಯೊಂದಿಗೆ ಸಮಸ್ಯೆಗೆ ಶಸ್ತ್ರ…
ತೀರ್ಥಹಳ್ಳಿ, ಹೊಸನಗರದಲ್ಲಿ ಗಣೇಶೋತ್ಸವಕ್ಕೆ ಸಜ್ಜು! – ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಅಲಂಕಾರ – ಹೊಸನಗರ ತಾಲೂಕಲ್ಲಿ ಅತೀ ಹೆಚ್ಚು ಗಣೇಶ – ಎಲ್ಲೆಡೆ ಪೊಲೀಸ್ ಕಣ್ಣು: ಜನರೇ ಶಾಂತಿಯಿಂದ ಹಬ್ಬ ಆಚರಿಸಿ NAMMUR EXPRESS NEWS ತೀರ್ಥಹಳ್ಳಿ/ಹೊಸನಗರ: ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಲ್ಲಿ ತಾಲೂಕಿನಲ್ಲಿ ಶಾಂತಿಯುತ ಗಣೇಶ ಹಬ್ಬಕ್ಕೆ ಎಲ್ಲೆಡೆ ಅಂತಿಮ ಸಿದ್ಧತೆ ನಡೆದಿದೆ. ಎಲ್ಲಾ ಊರುಗಳಲ್ಲೂ ಹಬ್ಬಕ್ಕೆ ಸಂಘಗಳು ತಯಾರಿ ಮಾಡಿವೆ. ತೀರ್ಥಹಳ್ಳಿಯ ಪ್ರತಿಷ್ಠಿತ ಗಣಪತಿ ಉತ್ಸವಗಳಾದ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ, ದೇವಂಗಿ, ಕುರುವಳ್ಳಿ, ಹಿಲಿಕೆರೆ, ಕೋಳಿಕಾಲು ಗುಡ್ಡ, ಛತ್ರಕೇರಿ, ಮಂಡಗದ್ದೆ, ಕಟ್ಟೆಹಕ್ಲು, ಹೊದಲ, ಕಮ್ಮರಡಿ, ಆಗುಂಬೆ ಸೇರಿ ಎಲ್ಲಾ ಗ್ರಾಮ ವ್ಯಾಪ್ತಿಯಲ್ಲಿ ಗಣೇಶ ಕೂರಿಸಲಾಗುತ್ತಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಣೇಶ ಹಬ್ಬವನ್ನು ಶಾಂತಿಯುತವಾಗಿ ನಡೆಸುವಂತೆ ಡಿವೈಎಸ್ಪಿ ಗಜಾನನ ವಾಮನ ಸುತಾರ ಮನವಿ ಮಾಡಿದ್ದಾರೆ. ಯಾವ ಠಾಣಾ ವ್ಯಾಪ್ತಿಯಲ್ಲಿ ಎಷ್ು ಗಣೇಶ? ತೀರ್ಥಹಳ್ಳಿ 114, ಮಾಳೂರು 64, ಆಗುಂಬೆ 51, ಹೊಸನಗರ 88, ರಿಪ್ಪನಪೇಟೆ 121,…
ಮಲೆನಾಡ ಇಬ್ಬನಿ ಫುಡ್ಸ್ ಸಂಸ್ಥೆಗೆ ಅವಾರ್ಡ್! – ಆಹಾರ ಗುಣಮಟ್ಟದಲ್ಲಿ ಆಯುಷ್ ಕೇರ್ ಎಕ್ಸಲೆನ್ಸ್ ಅವಾರ್ಡ್ – ಸಂಸ್ಥೆಯ ಮಾಲೀಕ ಕುಂಟುವಳ್ಳಿ ವಿಶ್ವನಾಥ್ ಅವರಿಗೆ ಗೌರವ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನ ಪರಿಶುದ್ಧ ರುಚಿ ಇಬ್ಬನಿ ತೀರ್ಥಹಳ್ಳಿಯ ಕುಂಟುವಳ್ಳಿ ಮೇಳಿಗೆಯಲ್ಲಿ ಹೊಸ ಆವಿಷ್ಕಾರದೆಡೆಗೆ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಮಾಡಿರುವ ಇಬ್ಬನಿ ಫುಡ್ಸ್ ಸಂಸ್ಥೆಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿಗ್ನೇಚರ್ ಮೀಡಿಯಾ ನಡೆಸಿದ ಕಾರ್ಯಕ್ರಮದಲ್ಲಿ ಆಯುಷ್ ಕೇರ್ ಎಕ್ಸಲೆನ್ಸ್ ಅವಾರ್ಡ್ ಸಿಕ್ಕಿದೆ. ಕುಂಟುವಳ್ಳಿ ವಿಶ್ವನಾಥ್ ಅವರು ಮೂಲತಃ ಕೃಷಿ ಕುಟುಂಬ ವಾಗಿರುವುದರಿಂದ ಭೂಮಿ, ಗಿಡ ,ಪರಿಸರದೊಂದಿಗೆ ಇವರಿಗೆ ಒಡಾಟ ಹೆಚ್ಚು. ಅಡಿಕೆ ಸುಲಿಯುವ ಯಂತ್ರ ನಿರ್ಮಾಣ ಮಾಡುವಲ್ಲಿ ಮೊದಲಿಗರಾದ ಇವರು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿ ಜನರಿಗೆ ಆರೋಗ್ಯಕರ ಪದಾರ್ಥಗಳನ್ನು ಒದಗಿಸಬೇಕು ಎಂಬ ಆಲೋಚನೆ ಇವರಲ್ಲಿ ಮೂಡಿದಾಗ ಇದಕ್ಕೆ ಪ್ರೋತ್ಸಾಹದ ಬೆನ್ನೆಲುಬಾಗಿ ನಿಂತಿದ್ದು ಇವರ ತಾಯಿ. ತಾಯಿಯ ಪ್ರೇರಣೆಯಿಂದಾಗಿ 2017ರಲ್ಲಿ ಶ್ರೀ…
ತೀರ್ಥಹಳ್ಳಿ ಪ. ಪಂ ಅಧ್ಯಕ್ಷರ ಅಧಿಕಾರ ಸ್ವೀಕಾರ – ನೂತನ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್ ಅಧಿಕಾರ ಸ್ವೀಕಾರ – ಕವಲೇದುರ್ಗ ಮಠದ ಶ್ರೀಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್ ಗೌರಿ ಹಬ್ಬದ ದಿನವಾದ ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಮುಖರಾದ ಕಲಗೋಡು ರತ್ನಾಕರ್, ಮಂಜುನಾಥ್ ಕೆಸ್ತೂರು, ಮುಡುಬ ರಾಘವೇಂದ್ರ, ಧರ್ಮೇಶ್, ಪಟ್ಟಣ ಪಂಚಾಯತ್ ಸದಸ್ಯರು ಸೇರಿದಂತೆ ಹಲವು ಪ್ರಮುಖರು ಇದ್ದರು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ ಗಣ್ಯರಿಗೆ ಸನ್ಮಾನಿಸಿದರು. ಕವಲೇದುರ್ಗ ಮಠದ ಶ್ರೀಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಕವಲೇದುರ್ಗ ಮಠದ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ತೀರ್ಥಹಳ್ಳಿ ರಾಜಕಾರಣದಲ್ಲಿ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್…
ಕ್ರಿಯೇಟಿವ್ ಕಾಲೇಜಿನಲ್ಲಿ ಗುರು ದೇವೋಭವ..! – ಕಾರ್ಕಳ, ಉಡುಪಿ ಕಾಲೇಜಲ್ಲಿ ಶಿಕ್ಷಕರಿಗೆ ನಮನ – ಸಾಧಕ ಶಿಕ್ಷಕರು, ಸೇವಕರಿಗೆ ಸನ್ಮಾನದ ಗೌರವ NAMMUR EXPRESS NEWS ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಜ್ಞಾನಜ್ಯೋತಿಯನ್ನು ಬೆಳಗಿ, ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಕಾರ‍್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು. ಗುರುವಂದನೆಯನ್ನು ಸ್ವೀಕರಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ, ನಲ್ಲೂರಿನ ನಿವೃತ್ತ ಮುಖ್ಯ ಗುರುಗಳಾದ ಪೂರ್ಣಿಮಾ ರಮೇಶ್ ಶೆಣೈರವರು ಮಾತನಾಡಿ, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೌಲ್ಯವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರು ಎಂದರು. ಕಾರ್ಕಳದ ಬೈಲೂರ ಹೊಸ ಬೆಳು ಸಂಸ್ಥೆಯ ವ್ಯವಸ್ಥಾಪಕರಾದ ತನುಲಾ ತರುಣ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಗುರುವಿಲ್ಲದೆ ಗುರಿಯನ್ನು ತಲುಪುವುದು ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು…
ಕರಾವಳಿ ಟಾಪ್ ನ್ಯೂಸ್ ಕಾರ್ಕಳ ಯುವತಿ ಅತ್ಯಾಚಾರ: ಡ್ರಗ್ಸ್ ಜಾಲದ ತನಿಖೆ! – ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡಕ್ಟರ್ ನಡುವೆ ಹೊಡೆದಾಟ – ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರು ಸವಾರರ ಸಾವು NAMMUR EXPRESS NEWS ಕಾರ್ಕಳ: ಕಾರ್ಕಳದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ತಾಫ್ ಮತ್ತು ಅಭಯ್ ಅವರು ಬೆಂಗಳೂರಿಗೆ ಹೋಗಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ, ಆ ಬ್ಯಾಂಕಿಗೆ ಹಣ ಹಾಕಿರುವವರು ಯಾರು ಎಂದು ಪತ್ತೆಯಾಗಿದೆ. ಮಂಗಳೂರಿನ ಪೊಲೀಸ್ ಅವರು ಅವರನ್ನ ಬಂಧನ ಮಾಡಲಾಗಿದೆ. ಅವರ ಆಧಾರದ ಮೇಲೆ ಮಾಹಿತಿಗಳನ್ನ ಕಲೆಹಾಕಿ ನಾವು ಕಾನೂನಿನ ಮೂಲಕ ಕ್ರಮವನ್ನ ಕೈಗೊಳ್ಳುತ್ತೇವೆ. ಡ್ರಗ್ಸ್ ಎಲ್ಲಿಂದ ಬಂದಿದೆ ಅದನ್ನು ಕೂಡ ತನಿಖೆ ಮಾಡಲಾಗುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ಆರು ಜನರನ್ನು ಬಂಧನ ಮಾಡಲಾಗಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಎಲ್ಲಿ ಸಿಕ್ಕಿತು ಅದನ್ನ ಬೆಂಗಳೂರು ಸಿಸಿಬಿ ಅವರೊಂದಿಗೆ ಚರ್ಚೆ ಕೂಡ ಮಾಡಲಾಗುತ್ತದೆ. ಉಳ್ಳಾಲ: ಇಬ್ಬರು ಸಿಟಿ ಬಸ್ ಕಂಡಕ್ಟರ್ ನಡುವೆ ಹೊಡೆದಾಟ ಉಳ್ಳಾಲ:…
ಕರಾವಳಿಯಲ್ಲಿ ಗಣೇಶೋತ್ಸವದ ರಂಗು! – ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಿದ್ಧತೆ – ಹಳ್ಳಿ ಹಳ್ಳಿಯಲ್ಲೂ ಗಣೇಶ ಹಬ್ಬದ ಸಂಭ್ರಮ NAMMUR EXPRESS NEWS ಉಡುಪಿ/ಕರಾವಳಿ: ಗಣೇಶ ಚತುರ್ಥಿಯ ಸಂಭ್ರಮದ ಎಲ್ಲೆಡೆ ಜೋರಾಗಿದೆ. ಒಂದು ದಿನ ಮಾತ್ರ ಬಾಕಿ ಉಳಿದಿದ್ದು ಎಲ್ಲೆಡೆ ಗಣೇಶೋತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ನಡೆದಿದೆ. ಕರಾವಳಿಯಲ್ಲೂ ಗಣೇಶ ಸಂಭ್ರಮ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧತೆ ನಡೆದಿದೆ. ಶುಕ್ರವಾರ ಗೌರಿ ಹಬ್ಬ ಮತ್ತು ಶನಿವಾರ ಗಣಪತಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗಣೇಶ ಹಬ್ಬ ನಡೆಯಲಿದೆ. ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸೇರಿ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಲಿದೆ. ಈಗಾಗಲೇ ಸಂಘ ಸಂಸ್ಥೆಗಳು ಗಣೇಶನ ಹಬ್ಬಕ್ಕೆ ಸಜ್ಜುಗೊಂಡಿದ್ದಾರೆ. ಪೆಂಡಾಲು ನಿರ್ಮಾಣ, ಸ್ವಾಗತ ಕಮಾನು, ದೀಪಾಲಂಕಾರ ಸಹಿತ ಉತ್ಸವ ಆಚರಣೆಗೆ ಸಂಬಂಧಿಸಿದ ಸಿದ್ದತೆ ಅಂತಿಮ ಹಂತದಲ್ಲಿವೆ. ಪೊಲೀಸ್ ಲಾಖೆ…
ಹೂವು-ಹಣ್ಣು, ಪೂಜಾ ಸಾಮಗ್ರಿ ಬೆಲೆ ಏರಿಕೆ ಬಿಸಿ! – ಜನರ ಖರೀದಿ ಭರಾಟೆ ಜೋರು: ಬಂದ ಬಣ್ಣ ಬಣ್ಣದ ಗಣಪ! – ಗಣೇಶ ಉತ್ಸವಕ್ಕೆ ಕ್ಷಣಗಣನೆ ಶುರು NAMMUR EXPRESS NEWS ಬೆಂಗಳೂರು: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರದ ಮಾರ್ಕೆಟ್ಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಹೂವು-ಹಣ್ಣು, ಪೂಜಾ ಸಾಮಗ್ರಿ, ಗಣೇಶನ ಮೂರ್ತಿ, ತಳಿರು ತೋರಣಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮುಂಜಾನೆಯಿಂದಲೇ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಬೆಲೆ ಏರಿಕೆಯ ಬಿಸಿ ನಡುವೆಯೂ ಹೂವು-ಹಣ್ಣುಗಳ ಖರೀದಿಗಾಗಿ ಜನರು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಾರೆ. ಬಂದ ಬಣ್ಣ ಬಣ್ಣದ ಗಣಪ! ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ. ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಗಣೇಶ ಉತ್ಸವಕ್ಕೆ ಕ್ಷಣಗಣನೆ ಶುರು ಗಣೇಶ ಹಬ್ಬದ ಸಂಭ್ರಮಕ್ಕೆ…