Categories
ರಾಜ್ಯ

ಹೂವು-ಹಣ್ಣು, ಪೂಜಾ ಸಾಮಗ್ರಿ ಬೆಲೆ ಏರಿಕೆ ಬಿಸಿ!

ಹೂವು-ಹಣ್ಣು, ಪೂಜಾ ಸಾಮಗ್ರಿ ಬೆಲೆ ಏರಿಕೆ ಬಿಸಿ!
– ಜನರ ಖರೀದಿ ಭರಾಟೆ ಜೋರು: ಬಂದ ಬಣ್ಣ ಬಣ್ಣದ ಗಣಪ!
– ಗಣೇಶ ಉತ್ಸವಕ್ಕೆ ಕ್ಷಣಗಣನೆ ಶುರು

NAMMUR EXPRESS NEWS
ಬೆಂಗಳೂರು: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರದ ಮಾರ್ಕೆಟ್​ಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಹೂವು-ಹಣ್ಣು, ಪೂಜಾ ಸಾಮಗ್ರಿ, ಗಣೇಶನ ಮೂರ್ತಿ, ತಳಿರು ತೋರಣಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮುಂಜಾನೆಯಿಂದಲೇ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದ್ದು, ಬೆಲೆ ಏರಿಕೆಯ ಬಿಸಿ ನಡುವೆಯೂ ಹೂವು-ಹಣ್ಣುಗಳ ಖರೀದಿಗಾಗಿ ಜನರು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದಾರೆ.

ಬಂದ ಬಣ್ಣ ಬಣ್ಣದ ಗಣಪ!

ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್​​ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ. ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಗಣೇಶ ಉತ್ಸವಕ್ಕೆ ಕ್ಷಣಗಣನೆ ಶುರು

ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆ ಉತ್ಸವಕ್ಕೆ ಸಜ್ಜುಗೊಂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.