ಶಿವಪ್ರಸಾದ್ ಅವರಿಗೆ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ – 17 ವರ್ಷ ಸೇವಾವಧಿಯಲ್ಲಿ ಗಣಿತ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ – ತೀರ್ಥಹಳ್ಳಿ ತಾಲೂಕು ಗಣಿತ ಶಿಕ್ಷಕರ ವೇದಿಕೆ ಅಭಿನಂದನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಉತ್ತಮ ಗಣಿತ ಶಿಕ್ಷಕರಾಗಿ ಕಟ್ಟೆಹಕ್ಕಲು ಸರ್ಕಾರಿ ಪ್ರೌಢಶಾಲೆಯ ಶಿವಪ್ರಸಾದ್ ಆಯ್ಕೆಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಶಿಕ್ಷಣ ದಿನಾಚರಣೆ ಅಂಗವಾಗಿ ತಾಲೂಕು ಶಾಲಾ ಶಿಕ್ಷಣ ಇಲಾಖೆಯು ಶಿವಪ್ರಸಾದ್ ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಉತ್ತಮ ಶಿಕ್ಷಕ ಪುರಸ್ಕಾರವನ್ನು ನೀಡಿದೆ. ಸುಮಾರು 17 ವರ್ಷ ಸೇವಾವಧಿಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಗಣಿತ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ವಿವಿಧ ತರಬೇತಿ ಕಾರ್ಯಗಾರಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತರಬೇತಿ ನೀಡಿದ್ದರು. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಣಿತ ಶಿಕ್ಷಕರಿಗೆ ಂತ್ರಜ್ಞಾನ ಆಧಾರಿತ ಬೋಧನೆಯ ಬಗ್ಗೆ ವಿಶೇಷ ತರಬೇತಿಯನ್ನು ನೀಡಿದ್ದರು. ಇತ್ತೀಚೆಗೆ ಇವರ ಪುತ್ರ ಅಮಿತ್ ಶಾಸ್ತ್ರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 624 ಅಂಕಗಳನ್ನು ಪಡೆದು ರಾಜ್ಯದ ಗಮನ ಸೆಳೆದಿದ್ದನು.…
Author: Nammur Express Admin
ವೀರೇಶ್ ರಾಜ್ಯದ ಬೆಸ್ಟ್ ಟೀಚರ್! – ಶಿಕ್ಷಕರಾಗಿ, ಮಾರ್ಗದರ್ಶಕರಾಗಿ, ಶಾಲೆ ಕಟ್ಟುವ ಕಟ್ಟಾಳುವಾಗಿ ಸೇವೆ – ಸಾವಿರಾರು ಮಕ್ಕಳ ಬದುಕಲ್ಲಿ ಬೆಳಕು: ಸೇವೆಗೆ ಸಂದ ಫಲ – ರಾಜ್ಯ ಮಟ್ಟದಲ್ಲಿ ಮತ್ತೆ ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆ ಸಾಧನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಶಿಕ್ಷಕ ವೀರೇಶ್ ಅವರಿಗೆ ಈ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು, ಎಲ್ಲೆಡೆ ಪ್ರಶಂಸೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಜ್ಯದಲ್ಲಿ ತನ್ನ ವಿಶೇಷ ಅಭಿವೃದ್ಧಿ, ಸಾಧನೆ ಮೂಲಕವೇ ಗುರುತಿಸಿಕೊಂಡಿರುವ ಹೊಸೂರು ಗುಡ್ಡೇಕೇರಿಯ ಸರ್ಕಾರಿ ಪ್ರೌಢ ಶಾಲೆ ಇದೀಗ ಮತ್ತೊಂದು ಐತಿಹಾಸಿಕ ದಾಖಲೆ ಮಾಡಿದೆ. ಸರ್ಕಾರಿ ಶಾಲೆಗಳೂ ಹೀಗೆ ಇರಬಹುದು ಎಂದು ತೋರಿಸಿಕೊಟ್ಟ ದೊಡ್ಡ ಸಾಧಕರ ತಂಡವೆ ಇಲ್ಲಿದೆ. ಈಗಾಗಲೇ ಶಾಲೆಯ ಮುಖ್ಯ ಉಪಾಧ್ಯಾಯರಾದ ಮಂಜು ಬಾಬು ಪೂಜಾರ್ ರಾಜ್ಯ ಮಟ್ಟದಲ್ಲಿ ವಯುಕ್ತಿ ಹಾಗೂ ಶಾಲೆಗೆ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ನಡುವೆ ವೀರೇಶ್…
ಗಣೇಶೋತ್ಸವ: ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರ ಎಚ್ಚರ! – ವಿದ್ಯುತ್ ಇಲಾಖೆಯಿಂದ ಸಹಾಯವಾಣಿ ಮಾರ್ಗಸೂಚಿ ಪ್ರಕಟ – ಗಣೇಶೋತ್ಸವ ಆಚರಣೆಗೆ ವಿದ್ಯುತ್ ಬಳಕೆ ಬಗ್ಗೆ ಸೂಚನೆ – ತುರ್ತು ಸಂದರ್ಭದಲ್ಲಿ 1912 ಸಹಾಯವಾಣಿಗೆ ಕರೆ ಮಾಡಿ..! NAMMUR EXPRESS NEWS ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ.7ರಂದು ಕರ್ನಾಟಕದಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈಗಾಗಲೇ ಸಾರ್ವಜನಿಕರು ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದು, ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರ ವಹಿಸುವಂತೆ ವಿದ್ಯುತ್ ಇಲಾಖೆ ಮಾರ್ಗಸೂಚನೆಗಳನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ, ವಿದ್ಯುತ್ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಬೇಕು.ಜಾಗರೂಕರಾಗಿರಿ, ಯಾವುದೇ ವಿದ್ಯುತ್ ಅವಘಡಗಳಿಗೆ ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದೆ.ಈ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸ್ಮರಣೀಯವಾಗಿಸೋಣ ಎಂದು ಬೆಸ್ಕಾಂ ತಿಳಿಸಿದೆ ಮಾರ್ಗಸೂಚಗಳು ಹೀಗಿೆ ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್…
ಕೊಳೆ ರೋಗ ಹೆಚ್ಚಳ: ಅಡಿಕೆ ರಕ್ಷಿಸಲು ಮಾಹಿತಿ * ಕೊಳೆರೋಗದ ಜೊತೆಗೆ ಎಲೆಚುಕ್ಕೆ ರೋಗ ನಿಯಂತ್ರಿಸಲು ಸಹಾಯಕ * ಮುಖ್ಯಸ್ಥರ ಅಡಿಕೆ ಸಂಶೋಧನಾ ಮಾಹಿತಿ NAMMUR EXPRESS NEWS ತೀರ್ಥಹಳ್ಳಿ: ಹೆಚ್ಚು ಮಳೆ, ಮೋಡಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆದ್ರತೆ (ಶೇ. 90 ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಹೆಚ್ಚಿರುವುದರಿಂದ ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು ಎಂದು ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ಅವರು ಮಾಹಿತಿ ನೀಡಿರುತ್ತಾರೆ. ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು. ಕೊಳೆಬಾಧಿತ ಬಿದ್ದಂತಹ ಕಾಯಿಗಳನ್ನು ಆರಿಸಿ ಹೊರಗಡೆ ಹಾಕಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಹಾಗೂ ತೋಟದ ಅಂಚಿನ ಮರಗಳ ಹೆಚ್ಚುವರಿ ರೆಂಬೆಗಳನು ಕತ್ತರಿಸಿ ತೆಗೆಯುವುದು. ವೈಜ್ಞಾನಿಕವಾಗಿ ತಯಾರಿಸಿದ ರಸಸಾರ (pH) 7ರ ಶೇ.1 ರ…
2 ತಿಂಗಳಲ್ಲಿ ತಾಪಂ, ಜಿಪಂ ಚುನಾವಣೆ?! – ಮೀಸಲು ನಿಗದಿಗೆ ಮೂರು ವಾರಗಳ ಅವಧಿ ಕೇಳಿದ ಸರ್ಕಾರ – ವಿಚಾರಣೆ ಸೆ.30ಕ್ಕೆ ವಿಚಾರಣೆ: ಚುನಾವಣೆ ಘೋಷಣೆ ಆಗುತ್ತಾ? NAMMUR EXPRESS NEWS ಬೆಂಗಳೂರು: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಮೂರು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ. ಈ ಮೂಲಕ ಚುನಾವಣೆ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ಸಿಗುವ ಸಾಧ್ಯತೆಗಳಿವೆ. ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಜತೆಗೆ ನಗರ-ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ನ್ಯಾಯಪೀಠ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ 2 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳು ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್, ನ್ಯಾಯಮೂರ್ತಿ ಕೆ.ರಾಜೇಶ್ ರೈ ವರಿದ್ದ ೀಠದ ಮುಂದೆ ಗುರುವಾರ ವಿಚಾರಣೆಗೆ ಬಂದವು.…
ಗೌರಿ ಹಬ್ಬದ ಸಡಗರ… ಸಂಭ್ರಮ..! – ಹೆಣ್ಣಿನ ಸೌಭಾಗ್ಯದ ಪವಿತ್ರ ಹಬ್ಬ ಸ್ವರ್ಣಗೌರಿ ಹಬ್ಬ – ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು NAMMUR EXPRESS NEWS ಹೆಣ್ಣು ತನ್ನ ಸೌಮಾಂಗಲ್ಯಕ್ಕಾಗಿ ಮಾಡುವ ವಿವಿಧ ಪೂಜೆ- ವ್ರತಗಳಲ್ಲಿ ಸ್ವರ್ಣಗೌರಿ ವ್ರತ ಪ್ರಮುಖವಾದದ್ದು. ಈ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಹೊಸದಾಗಿ ಮದುವೆಯಾದವರಿಗೆ ಈ ಹಬ್ಬ ಪವಿತ್ರವಾದುದು. ಇನ್ನು ಪ್ರತಿ ಮನೆಯಲ್ಲೂ ತವರಿನ ಬಾಗಿನ ಕೊಡುವುದು ವಾಡಿಕೆ ಇದೆ. ಭಾದ್ರಪದ ಮಾಸದ ತದಿಗೆಯಂದು ಸ್ವರ್ಣಗೌರಿ ವ್ರತವನ್ನು ಆಚರಿಸಲಾಗುತ್ತದೆ. ಆಷಾಢಮಾಸದ ಮಧ್ಯದಲ್ಲಿ ಉತ್ತರಾಯಣ ಕಾಲ ಮುಗಿದು ದಕ್ಷಿಣಾಯನ ಆರಂಭವಾಗುತ್ತಿದ್ದಂತೆ ವ್ರತಗಳು ಆರಂಭವಾಗುತ್ತವೆ. ಜ್ಯೋತಿರ್ಭೀಮೇಶ್ವರ ವ್ರತದಿಂದ ಆರಂಭವಾಗಿ ಶ್ರಾವಣಮಾಸದಲ್ಲಿ ಮಂಗಳಗೌರಿ, ವರಮಹಾಲಕ್ಷ್ಮಿ ವ್ರತಗಳ ನಂತರ ಬರುವುದೇ ಭಾದ್ರಪದ ಮಾಸದ ತದಿಗೆ. ಮಹಾಗೌರಿಯನ್ನು ಪೂಜಿಸುವ ಸ್ವರ್ಣಗೌರಿ ವ್ರತವು ಸುಮಂಗಲಿಯರ ಪ್ರಮುಖ ಹಬ್ಬ. ಸ್ವರ್ಣಗೌರಿಯನ್ನು ವ್ರತ ನಿಯಮದಂತೆ ಪೂಜಿಸುವ ಮುತ್ತೈದೆಯರಿಗೆ ದೀರ್ಘ ಸೌಮಾಂಗಲ್ಯ ಪ್ರಪ್ಿಯಾಗಿ ಸಕಲ ಭೋಗ-ಭಾಗ್ಯಗಳು ದೊರೆಯುತ್ತವೆ ಎಂದು ಶಾಸ್ತ್ರಗ್ರಂಥಗಳು ಉಲ್ಲೇಖಿಸಿವೆ. ಶಿವ-ಪಾರ್ವತಿಯರ ಪುತ್ರಶ್ರೇಷ್ಠನಾದ…
ಗೌರಿ ಹಬ್ಬದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? – ಗೌರಿ ಹಬ್ಬ, ಈ ರಾಶಿಗೆ ತಾಯಿ ಲಕ್ಷ್ಮಿ ಕೃಪಾಕಟಾಕ್ಷ – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಆದಾಗ್ಯೂ, ಮನಸ್ಸು ಯಾವುದೋ ಒಂದು ವಿಷಯದಿಂದ ತೊಂದರೆಗೊಳಗಾಗುತ್ತದೆ. ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಕೆಲವು ಸಂಭ್ರಮಾಚರಣೆ ಇರಬಹುದು. ಬಟ್ಟೆಗಳನ್ನು ಉಡುಗೊರೆಯಾಗಿ ನೀಡಬಹುದು. ಉತ್ತಮ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳಿ. ಹಿರಿಯರಿಂದ ಅಮೂಲ್ಯ ಸಲಹೆ ಪಡೆಯುವ ಸಾಧ್ಯತೆ ಇದೆ. ಇಂದು, ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ಇಂದು ಚಂಚಲ ಮನಸ್ಸು ಇರುತ್ತದೆ. ಆರೋಗ್ಯದ ಗ್ಗೆ ಜಾಗರೂಕರಾಗಿರಿ.…
ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಶಿಕ್ಷಕರ ದಿನಾಚರಣೆ ಬಹಿಷ್ಕಾರ! – ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿಕೆ ಸರಿಯಲ್ಲ – ಸೇವಾ ಹಿರಿತನವಿದ್ದರೂ ಕೂಡ ಯಾವುದೇ ರೀತಿಯ ಮುಂಬಡ್ತಿ ಇಲ್ಲ – ಉನ್ನತ ವಿದ್ಯಾಭ್ಯಾಸ ಪರಿಗಣನೆ ಇಲ್ಲದೆ ವರ್ಗಾವಣೆಯಲ್ಲೂ ಮೋಸ – ಮುಖ್ಯ ಉಪಾಧ್ಯಾಯರ ಬಡ್ತಿಯಲ್ಲಿ ಅವಕಾಶ ವಂಚಿತರಾಗಿರುವುದು – ಶಾಲೆಗಳಲ್ಲಿ ಪಾಠ ಮಾಡಿ ಕಾರ್ಯಕ್ರಮಕ್ಕೆ ಹಾಜರಾಗದೆ ಬಹಿಷ್ಕಾರ NAMMUR EXPRESS NEWS ತೀರ್ಥಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದು, ಸೇವಾ ಹಿರಿತನವಿದ್ದರೂ ಕೂಡ ಯಾವುದೇ ರೀತಿಯ ಮುಂಬಡ್ತಿ ಇಲ್ಲ. ಉನ್ನತ ವಿದ್ಯಾಭ್ಯಾಸ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮುಖ್ಯ ಉಪಾಧ್ಯಾಯರ ಬಡ್ತಿಯಲ್ಲಿ ಅವಕಾಶ ವಂಚಿತರಾಗಿರುವುದು, ವರ್ಗಾವಣೆಯಲ್ಲಿ ಅಸಮರ್ಪಕ ನಿಯಮ ಖಂಡಿಸಿ ತೀರ್ಥಹಳ್ಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆ ಮೇರೆಗೆ ಗುರುವಾರ ಶಿಕ್ಷಕರ ದಿನಾಚರಣೆ ಬಹಿಷ್ಕಾರ ಮಾಡಿ ಶಾಲೆಗಳಲ್ಲಿ ಪಾಠ ಮಾಡಿ ಶಿಕ್ಷಕರ ದಿನಾಚರಣೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದರಿಂದ ಏಳನೇ ತರಗತಿ…
ಭೀಕರ ಅಪಘಾತ: ನಾಲ್ಕು ಮಕ್ಕಳ ಕಾಲು ತುಂಡು! – ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ಶಾಲಾ ಬಸ್ ಅಪಘಾತ – ಚಿತ್ರದುರ್ಗದಲ್ಲಿ ತಹಸೀಲ್ದಾರ್ ಜೀಪಿಗೆ ಬೆಂಕಿ ಹಚ್ಚಿದ ಯುವಕ! – ರೇಣುಕಾಸ್ವಾಮಿ ಕೊಲೆ: ದರ್ಶನ್ ಕೇಸಲ್ಲಿ ಲಾರಿ ಪ್ರಮುಖ ಸಾಕ್ಷಿ! NAMMUR EXPRESS NEWS ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ಗುರುವಾರ ಬೆಳಿಗ್ಗೆ ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಸ್ಕೂಲ್ ಬಸ್ ನಡುವೆ ಕಪಗಲ್ ಕ್ರಾಸ್ ಬಳಿ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಜನರಿಗೆ ಪೆಟ್ಟು ಬಿದ್ದಿದ್ದು ಅದರಲ್ಲಿ ಮೂರು ಜನ ವಿದ್ಯಾರ್ಥಿಗಳ ಕಾಲುಗಳು ತುಂಡಾಗಿವೆ. ಪ್ರಸ್ತುತ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್ ಕೇಸಲ್ಲಿ ಲಾರಿ ಪ್ರಮುಖ ಸಾಕ್ಷಿ! ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ನಡೆಸಿದ್ದ ಕ್ರೌರ್ಯದ ಫೋಟೋಗಳು ಈಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದ ಿದ…
ಬಿಎಂಡಬ್ಲ್ಯೂ ಕಾರು ಚಲಿಸುತ್ತಿರುವಾಗಲೇ ಬೆಂಕಿಗೆ ಆಹುತಿ! – ಮಂಗಳೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ – ಸ್ಥಳದಲ್ಲೇ ಸುಟ್ಟು ಕರಕಲಾದ ಕಾರು: ಅಪಾಯದಿಂದ ಪಾರು NAMMUR EXPRESS NEWS ಸುರತ್ಕಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯೂ ಕಾರೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಸುರತ್ಕಲ್ ಎನ್ಐಟಿಕೆ ಹಳೆ ಟೋಲ್ ಗೇಟ್ ಬಳಿ ಸೆ. 5ರ ಗುರುವಾರ ಬೆಳಗ್ಗೆ ವರದಿಯಾಗಿದೆ. ಸುಟ್ಟು ಕರಕಲಾದ ಕಾರು ಉಡುಪಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಎನ್ ಐಟಿಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಕಾರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.