Categories
ತೀರ್ಥಹಳ್ಳಿ

ಶಿವಪ್ರಸಾದ್ ಅವರಿಗೆ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ

ಶಿವಪ್ರಸಾದ್ ಅವರಿಗೆ ಅತ್ಯುತ್ತಮ ಗಣಿತ ಶಿಕ್ಷಕ ಪ್ರಶಸ್ತಿ
– 17 ವರ್ಷ ಸೇವಾವಧಿಯಲ್ಲಿ ಗಣಿತ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ
– ತೀರ್ಥಹಳ್ಳಿ ತಾಲೂಕು ಗಣಿತ ಶಿಕ್ಷಕರ ವೇದಿಕೆ ಅಭಿನಂದನೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಉತ್ತಮ ಗಣಿತ ಶಿಕ್ಷಕರಾಗಿ ಕಟ್ಟೆಹಕ್ಕಲು ಸರ್ಕಾರಿ ಪ್ರೌಢಶಾಲೆಯ ಶಿವಪ್ರಸಾದ್ ಆಯ್ಕೆಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಶಿಕ್ಷಣ ದಿನಾಚರಣೆ ಅಂಗವಾಗಿ ತಾಲೂಕು ಶಾಲಾ ಶಿಕ್ಷಣ ಇಲಾಖೆಯು ಶಿವಪ್ರಸಾದ್ ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಉತ್ತಮ ಶಿಕ್ಷಕ ಪುರಸ್ಕಾರವನ್ನು ನೀಡಿದೆ.
ಸುಮಾರು 17 ವರ್ಷ ಸೇವಾವಧಿಯಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಗಣಿತ ಶಿಕ್ಷಕ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ವಿವಿಧ ತರಬೇತಿ ಕಾರ್ಯಗಾರಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತರಬೇತಿ ನೀಡಿದ್ದರು. ಶಿವಮೊಗ್ಗ ಜಿಲ್ಲೆಯ ಎಲ್ಲಾ ಗಣಿತ ಶಿಕ್ಷಕರಿಗೆ ಂತ್ರಜ್ಞಾನ ಆಧಾರಿತ ಬೋಧನೆಯ ಬಗ್ಗೆ ವಿಶೇಷ ತರಬೇತಿಯನ್ನು ನೀಡಿದ್ದರು.
ಇತ್ತೀಚೆಗೆ ಇವರ ಪುತ್ರ ಅಮಿತ್ ಶಾಸ್ತ್ರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 624 ಅಂಕಗಳನ್ನು ಪಡೆದು ರಾಜ್ಯದ ಗಮನ ಸೆಳೆದಿದ್ದನು. ಶಿವಪ್ರಸಾದ್ ರವರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿರುವುದು ಗಣಿತ ಶಿಕ್ಷಕರ ವಲಯದಲ್ಲಿ ಸಂತಸ ಮೂಡಿದ್ದು ತೀರ್ಥಹಳ್ಳಿ ತಾಲೂಕು ಗಣಿತ ಶಿಕ್ಷಕರ ವೇದಿಕೆ ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.