Author: Nammur Express Admin

ದೇಶ ವಿದೇಶಕ್ಕೂ ಹಬ್ಬಿದ ಅಡಿಕೆ ಮಾಫಿಯಾ! – ರಾಳದ ಹೆಸರಲ್ಲಿ ದುಬೈನಿಂದ ಅಡಿಕೆ ಆಮದು – ಸಂಸದರು, ಶಾಸಕರು ಅಕ್ರಮದ ವಿರುದ್ಧ ದನಿ ಇತ್ತಲ್ಲ ಏಕೆ? NAMMUR EXPRESS NEWS ಶಿವಮೊಗ್ಗ: ಮಲೆನಾಡಿನ ಅಡಿಕೆ ಮಾಫಿಯಾದ ಕೈಗಳು ಈಗ ದೇಶ ವಿದೇಶದಲ್ಲೂ ತಮ್ಮ ಚಾಲಾಕಿತನದ ಮೂಲಕ ವ್ಯವಹಾರ ಮಾಡಲು ಮುಂದಾಗಿವೆ. ಗುಜರಾತಿನ ಮುಂದ್ರಾ ಬಂದರಿನಲ್ಲಿ 3 ಕೋಟಿ ಮೌಲ್ಯದ 53 ಟನ್ ಅಕ್ರಮ ಅಡಕೆ ವಶಪಡಿಸಿಕೊಳ್ಳಲಾಗಿದೆ. ರಾಳದ ಹೆಸರಿನಲ್ಲಿ ದುಬೈ ನಿಂದ ಬಂದಿದ್ದ ಅಡಿಕೆ ಕಂಟೈನರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಚ್‌ನ ಮುಂಡ್ರಾ ಬಂದರಿನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣ ವರದಿಯಾಗಿದ್ದು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ 53 ಟನ್ ಅಡಿಕೆಯ ಎರಡು ಕಂಟೈನರ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಕಂಟೈನರ್‌ಗಳು ದುಬೈನಿಂದ ಬಂದಿತ್ತು. ರಾಳ ಹಾಗೂ ಧಾನ್ಯ ಎಂದು ಉಲ್ಲೇಖಿಸಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಧಿಕಾರಿಗಳು ತನಿಖೆ ನಡೆಸುವ ವೇಳೆ, ಅಡಿಕೆ ಸಾಗಿಸುತ್ತಿದ್ದ ಎರಡು ಕಂಟೈನರ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಬಂದರಿನಲ್ಲಿ ರಾಳ ಅಥವಾ ಧಾನ್ಯಗಳು ಎಂದು…

Read More

ಟಾಪ್ 3 ನ್ಯೂಸ್ ಮಲ್ನಾಡ್ ಕೊಪ್ಪ: ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದ ಪಿಕಪ್ – ಶಿಕಾರಿಪುರ: ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು! – ಶಿವಮೊಗ್ಗ-ಸಾಗರ ನಡವಿನ ರಸ್ತೆಯಲ್ಲಿ ಮರಗಳ ಮೇಲೆ ಗುರುತು ಯಾಕೆ? NAMMUR EXPRESS NEWS ಕೊಪ್ಪ: ಪಿಕಪ್ ವಾಹನ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಕೆಳಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದ ಬಳಿ ನಡೆದಿದೆ. ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದ ಕಾರಣ ತಿರುವಿನಲ್ಲಿ ಗಾಡಿ ಸ್ಕಿಡ್ ಆಗಿ 20 ಅಡಿ ಎತ್ತರಿಂದ ಗುಡ್ಡದ ಮರಗಿಡಗಳಿಗೆ ಸಿಲುಕಿ ಕೆಳಗೆ ಬಿದ್ದಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. – ಶಿಕಾರಿಪುರ: ಜ್ಯೂಸ್ ಬಾಟಲಿ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು! ಶಿಕಾರಿಪುರ : ಮನೆಯಲ್ಲಿ ಆಟವಾಡುವ…

Read More

ಹಬ್ಬದ ಎಫೆಕ್ಟ್: ಬಾಳೆಹಣ್ಣು ಬಲು ದುಬಾರಿ! – ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ಕಡಿಮೆ – ಬಾಳೆ ಹಣ್ಣಿಗೆ ಈಗ ಡಿಮ್ಯಾಂಡ್ ಡಿಮ್ಯಾಂಡ್ NAMMUR EXPRESS NEWS ಮಂಗಳೂರು: ವಿಪರೀತ ಮಳೆಯಿಂದಾಗಿ ಬಾಳೆ ಬೆಳೆ ತೀವ್ರ ಹಾನಿಯಾಗಿದ್ದು, ಜತೆಗೆ ಶ್ರೀ ಗಣೇಶ ಚತುರ್ಥಿ ಸಹಿತ ಸಾಲು ಸಾಲು ಹಬ್ಬಗಳ ಕಾರಣದಿಂದ ಬಾಳೆಹಣ್ಣಿನ ಬೆಳೆ ಗಗನಕ್ಕೇರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕದಳಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ 20ರಿಂದ 30 ರೂ.ನಷ್ಟು ಹೆಚ್ಚಾಗಿದೆ. ಘಟ್ಟದ ಕದಳಿಗೆ 120 ರೂ.: ಬಿ.ಸಿ.ರೋಡಿನ ಮಾರುಕಟ್ಟೆಯಲ್ಲಿ ಊರಿನ ಕದಳಿ ಬಾಳೆಹಣ್ಣು ಕೆ.ಜಿ.ಗೆ 80 ರೂ.ಗಳಿಗೆ ಮಾರಾಟವಾಗುತ್ತಿದ್ದು, ಕೆಲವು ಸಮಯಗಳ ಹಿಂದೆ 50 ರೂ.ನಷ್ಟಿತ್ತು. ಘಟ್ಟದ ಕದಳಿ ಧಾರಣೆ ಕೆ.ಜಿ.ಗೆ 120 ರೂ. ಇದೆ. ಇದರ ಕಾಯಿ 88ರಿಂದ 90 ರೂ.ಗಳಿಗೆ ರಖಂ ವರ್ತಕರಿಗೆ ಬರುತ್ತಿದ್ದು, ಇದು ಕೂಡ 20ರಿಂದ 30 ರೂ.ಗಳನ್ನಷ್ಟು ದುಬಾರಿಯಾಗಿದೆ. ಉಳಿದಂತೆ ಗಾಳಿ, ಬೂದಿ ಬಾಳೆಹಣ್ಣು ಬೆಲೆ 40 ರೂ., ಕ್ಯಾವಂಡೀಸ್‌ 40 ರೂ.ಗಳಿಗೆ ಮಾರಾಟವಾಗುತ್ತಿದೆ.…

Read More

ಗೌರಿ – ಗಣೇಶ ಹಬ್ಬಕ್ಕೆ ಮಳೆ ಅಡ್ಡಿ! – ನಿರಂತರ ಗಾಳಿ ಜತೆಗೆ ಭಾರಿ‌ ಮಳೆ ಎಚ್ಚರಿಕೆ – ಮುಂದಿನ ಮೂರು ದಿನ ಬಾರಿ ಮಳೆಯಾಗುವ ಮುನ್ಸೂಚನೆ NAMMUR EXPRESS NEWS ಬೆಂಗಳೂರು: ನೈರುತ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ. ಗುರುವಾರದಂದು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯೊಂದಿಗೆ ನಿರಂತರ ಗಾಳಿಯ ವೇಗ ತಲುಪುವ ಸಾಧ್ಯತೆಯಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. – ಗೌರಿ-ಗಣೇಶ ಹಬ್ಬಕ್ಕೆ ಮಳೆಯಾಟ ಸೆ.6-7ರಂದು ಗೌರಿ -ಗಣೇಶ ಹಬ್ಬದಂದು ಮಳೆಯು ಅಬ್ಬರಿಸಲಿದೆ. ಶುಕ್ರವಾರದಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ…

Read More

ವಾಹನ ಸವಾರರೇ ಎಚ್ಚರ: ಈ ತಿಂಗಳು ಹೊಸ ರೂಲ್ಸ್ ಫಿಕ್ಸ್! – ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸೆ.15 ಕೊನೆ ದಿನ – ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ದಂಡ NAMMUR EXPRESS NEWS ಬೆಂಗಳೂರು: 2019ರ ಏಪ್ರಿಲ್ 1 ರ ಹಿಂದೆ ರಾಜ್ಯದಲ್ಲಿ ನೋಂದಣಿ ಆಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್‌ಸಿ ನಂಬರ್‌ ಪ್ಲೇಟ್ ವಾಹನಗಳಿಗೆ ಅಳವಡಿಸುವುದು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ 2023ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಬಳಿಕ ಗಡುವು ನೀಡುತ್ತಾ ಬಂದಿದ್ದು, ಇದೀಗ ಮತ್ತೆ ಗಡುವು ನೀಡಿದೆ. ಸಾರಿಗೆ ಇಲಾಖೆ ಸೂಚಿಸಿದಂತೆ ಎಚ್​ಎಸ್​ಆರ್‌ಪಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಕೆ ಮಾಡಿದ್ದು, ಕೆಲವರು ಗಡುವು ನೀಡುತ್ತಾ ಬಂದಿದ್ದರೂ ಕೂಡ ಅಳವಡಿಕೆ ಮಾಡಿಕೊಂಡಿಲ್ಲ. ಆದ್ದರಿಂದ ಸಾರಿಗೆ ಇಲಾಖೆ ಮಹತ್ವದ ನಿರ್ಧಾರಕ್ಕೆ ಬಂದಿದೆ. ಇದೀಗ ಮತ್ತೆ ಸೆಪ್ಟೆಂಬರ್ 15ರವರೆಗೆ ಎಚ್ಎಸ್​ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಅವಕಾಶ ಕಲ್ಪಿಸಿದೆ. ಇದನ್ನು ಮೀರಿ HSRPಗಳನ್ನು ಅಳವಡಿಕೆ ಮಾಡದ ವಾಹನ ಮಾಲೀಕರು ಸೆಪ್ಟೆಂಬರ್‌ 16 ರಿಂದ ದಂಡವನ್ನು ಪಾವತಿಸಬೇಕಾಗಬಹುದು…

Read More

ಕರಾವಳಿ ಟಾಪ್ ನ್ಯೂಸ್ ಪೊದೆಯಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು! – ಮೂಡುಬಿದಿರೆ: ಕಟ್ಟಡದಿಂದ ಕೆಳಗೆ ಬಿದ್ದು ಯುವಕ ಸಾವು – ಕಾಸರಗೋಡು: 50 ಲಕ್ಷ ರೂ. ದರೋಡೆ ಪ್ರಕರಣ: ಆರೋಪಿ ಅರೆಸ್ಟ್! – ಬಂಟ್ವಾಳ: ಮೆಕ್ಕಾದ ಬಗ್ಗೆ ಅವಹೇಳನಕಾರಿ ಪೋಸ್ಟ್: ಬಂಧನ – ಕಾರ್ಕಳ: ಆನ್‌ಲೈನ್‌ನಲ್ಲಿ ವಂಚನ: ಒಡಿಶಾದಲ್ಲಿ ಆರೋಪಿ ಸಿಕ್ಕಿಬಿದ್ದ! NAMMUR EXPRESS NEWS ಕಾರವಾರ: ಒಂದು ದಿನದ ನವಜಾತ ಶಿಶುವನ್ನು ದುಷ್ಕರ್ಮಿಗಳು ಪೊದೆಯಲ್ಲಿ ಬಿಸಾಕಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ವಿಜಯನಗರದಲ್ಲಿ ನಡೆದಿದೆ. ಜೋಪಡಿಯೊಂದರ ಟಾಯ್ಲೆಟ್ ಬಳಿಬೆಳಗ್ಗೆ 5 ಗಂಟೆ ಸುಮಾರಿಗೆ ನವಜಾತ ಶಿಶು ಅಳುತ್ತಿರುವ ಸದ್ದು ಕೇಳಿದೆ. ಪಕ್ಕದ ಮನೆಯವರದ್ದೆಂದು ಜೋಪಡಿ ನಿವಾಸಿಗಳು ಸುಮ್ಮನಾಗಿದ್ದಾರೆ. ಆದರೆ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋಗುವಾಗ ಪೊದೆಯಲ್ಲಿ ಮಗು ಬಿಸಾಕಿರುವುದು ಕಾಣಿಸಿದೆ. ಕರುಳು ಬಳಳಿಯನನು ಕೂಡ ಕತ್ತರಿಸದೇ ಪೊದೆಯಲ್ಲಿ ಬಿಸಾಕಿರುವ ಪಾಪಿಗಳು. ಹೆಣ್ಣುಮಗುವಾಗಿದ್ದರಿಂದ ಬಿಸಾಡಿ ಹೋದ್ರ ಅಥವಾ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು ಬಿಟ್ಟು…

Read More

ಪ್ಲಿಪ್‌ಕಾರ್ಟ್‌ ಕಂಪನಿಯಿಂದ 1 ಲಕ್ಷ ಉದ್ಯೋಗ ಸೃಷ್ಟಿ! – ಹಬ್ಬದ ಸೀಸನ್ ಇಂದ ಮತ್ತಷ್ಟು ಉದ್ಯೋಗ – ಯಾರಿಗೆ ಉದ್ಯೋಗ, ಕಂಪನಿ ಹೇಳಿದ್ದೇನು? NAMMUR EXPRESS NEWS ನವದೆಹಲಿ : ಪ್ರಮುಖ ಇ-ಕಾಮರ್ಸ್ ಕಂಪನಿ ಪ್ಲಿಪ್‌ಕಾರ್ಟ್‌ ಹಬ್ಬದ ಸೀಸನ್‌ನಲ್ಲಿ ಆಯೋಜಿಸಲಾಗಿರುವ ತನ್ನ ಮುಂಬರುವ ಮಾರಾಟ ‘ದಿ ಬಿಗ್ ಬಿಲಿಯನ್ ಡೇಸ್ 2024’ ಸಮಯದಲ್ಲಿ ದೇಶಾದ್ಯಂತ ಸುಮಾರು ಒಂದು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಮುಂಬರುವ ಹಬ್ಬದ ಮಾರಾಟಕ್ಕೆ ಮುಂಚಿತವಾಗಿ, ಒಂಬತ್ತು ನಗರಗಳಲ್ಲಿ 11 ಹೊಸ ನೆರವೇರಿಕೆ ಕೇಂದ್ರಗಳನ್ನು ಪ್ರಾರಂಭಿಸಿದ್ದು, ದೇಶದಲ್ಲಿ ಈ ಕೇಂದ್ರಗಳ ಸಂಖ್ಯೆಯನ್ನು 83 ಕ್ಕೆ ತೆಗೆದುಕೊಂಡಿದೆ ಎಂದು ಪ್ಲಿಪ್‌ಕಾರ್ಟ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ವಾಲ್‌ಮಾರ್ಟ್ ಗ್ರೂಪ್ ಕಂಪನಿಯು, “ಪ್ಲಿಪ್‌ಕಾರ್ಟ್ ದೇಶಾದ್ಯಂತ ತನ್ನ ಪೂರೈಕೆ ಸರಪಳಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ವರ್ಷದ ಹಬ್ಬದ ಋತುವಿನಲ್ಲಿ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಆರ್ಥಿಕ ಬೆಳಣಿಗೆಯನ್ನು ೇಗಗೊಳಿಸಲು ಇದು ಗುರಿಯನ್ನು ಹೊಂದಿದೆ.” ಹೊಸ ಉದ್ಯೋಗಗಳು ಪೂರೈಕೆ…

Read More

ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ! – ಎಲ್ಲೆಡೆ ಶಿಕ್ಷಕರಿಗೆ ಗೌರವಿಸುವ ದಿನ: ಕಾರ್ಯಕ್ರಮ – ಸಮಸ್ತ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ದಾರಿದೀಪವೇ ಗುರು. ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ವಿದ್ಯಾರ್ಥಿಯ ಯಶಸ್ಸು ಒಬ್ಬ ಶಿಕ್ಷಕನಿಂದ ಮಾತ್ರ ಸಾಧ್ಯ ಗುರು ಒಬ್ಬ ನಿಸ್ವಾರ್ಥ ವ್ಯಕ್ತಿ ವಿದ್ಯಾರ್ಥಿಯ ಭವ್ಯ ಭವಿಷ್ಯದ ಬುನಾದಿಯನ್ನು ಹಾಕಿ ಅದರ ಮೇಲೆ ಜ್ಞಾನದ ಭವ್ಯವಾದ ಅರಮನೆಯನ್ನು ನಿರ್ಮಿಸಲು ಕಾರಣರಾದ ಗುರುವನ್ನು ದೈವಿಕ ಭಾವದಿಂದ ಕಾಣುವ ಗುರು ಪರಂಪರೆ ನಮ್ಮದು. ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ತರಲು ಮಗುವಿನಲ್ಲಿ ಸ್ನೇಹ ಪ್ರೀತಿಯ ಮೂಲಕ ಶಿಸ್ತು, ಸಂಯಮ,ಸಮಯಪಾಲನೆ ಕಲಿಸಿ ಸೃಜನಶೀಲ ಅಭಿವ್ಯಕ್ತಿಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿ ಆತ್ಮಸ್ಥೈರ್ಯವನ್ನು ತುಂಬಿ ನಿಸ್ವಾರ್ಥದಿಂದ ಸೇವೆ ಮಾಡುವ ಸಾಕಾರಮೂರ್ತಿ ಅಂಥಹ ಗುರುವರ್ಯರಿಗೆ ಗೌರವ ಸಮರ್ಿಸುವ ಸದಿನ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಸಿದ್ಧ ತತ್ವಜ್ಞಾನಿ ಆದರ್ಶ…

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ದಿನವು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರದ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣ ಬರಲಿದೆ. ಸದ್ಯಕ್ಕೆ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ಜಯವನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರಲಿದೆ. ಇಂದು ಭೂಮಿ ಅಥವಾ ವಾಹನ ಖರೀದಿಗೆ ಶುಭ ದಿನವಾಗಿದೆ. ** ವೃಷಭ ರಾಶಿ : ಇಂದು ವೃಷಭ ರಾಶಿಯವರಿಗೆ ದಿನವು ಆಹ್ಲಾದಕರವಾಗಿರುತ್ತದೆ. ಕೆಲವು ಪ್ರಮುಖ ಕೆಲಸಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ, ಇದರಿಂದ ನಿಮ್ಮ ಮನಸ್ಸನ್ನು ಉತ್ಸುಕಗೊಳಿಸುತ್ತದೆ. ನೀವು ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ನಿಮ್ಮ ಪ್ರೀತಿಪಾತ್ರರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ.…

Read More

ಬೈಕಲ್ಲಿ ಹೋಗುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್! – ತೀರ್ಥಹಳ್ಳಿಯ ಹೊದಲ ಬಳಿ ಯುವಕ ದುರ್ಮರಣ  – ಆಸ್ಪತ್ರೆ ಹೋಗುವ ಮುನ್ನ ದಾರಿಯಲ್ಲೇ ಬಿದ್ದು ಸಾವು!   NAMMUR EXPRESS NEWS  ತೀರ್ಥಹಳ್ಳಿ: ಬೈಕಲ್ಲಿ ಹೋಗುತ್ತಿರುವಾಗಲೇ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ತೀರ್ಥಹಳ್ಳಿ ಸಮೀಪದ ಹೊದಲದಲ್ಲಿ ನಡೆದಿದೆ. ಹೊದಲದ ಕೌದಳ್ಳಿ ಸಮೀಪದ ಹೊಸಗದ್ದೆಯ ಯುವಕ ಬೈಕ್ ಚಾಲನೆ ಮಾಡುವಾಗ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಂತೋಷ (34 ವರ್ಷ) ಮೃತ ಪಟ್ಟ ದುರ್ದೈವಿ. ಈತನಿಗೆ ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಸ್ಕೂಟಿಯಲ್ಲಿಯೇ ಹೊರಟು ಹೊದಲದ ಅಂಗಡಿಯೊಂದರ ಬಳಿ ಬಂದು ಕುಳಿತಿದ್ದಾರೆ. ನಂತರ ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ಹೊರಟಿದ್ದಾರೆ. ವಡ್ಡಿನಬೈಲು ಸಮೀಪ ಬರುವ ವೇಳೆ ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸ್ಕೂಟಿಯೂ ಸಹ ಅವರ ಮೇಲೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಬಾಣಂತಿಯಾಗಿದ್ದು ಮೂು ತಿಂಗಳ…

Read More