Categories
ತೀರ್ಥಹಳ್ಳಿ

ಬೈಕಲ್ಲಿ ಹೋಗುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್!

ಬೈಕಲ್ಲಿ ಹೋಗುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್!

– ತೀರ್ಥಹಳ್ಳಿಯ ಹೊದಲ ಬಳಿ ಯುವಕ ದುರ್ಮರಣ 

– ಆಸ್ಪತ್ರೆ ಹೋಗುವ ಮುನ್ನ ದಾರಿಯಲ್ಲೇ ಬಿದ್ದು ಸಾವು!

 

NAMMUR EXPRESS NEWS 

ತೀರ್ಥಹಳ್ಳಿ: ಬೈಕಲ್ಲಿ ಹೋಗುತ್ತಿರುವಾಗಲೇ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ತೀರ್ಥಹಳ್ಳಿ ಸಮೀಪದ ಹೊದಲದಲ್ಲಿ ನಡೆದಿದೆ.

ಹೊದಲದ ಕೌದಳ್ಳಿ ಸಮೀಪದ ಹೊಸಗದ್ದೆಯ ಯುವಕ ಬೈಕ್ ಚಾಲನೆ ಮಾಡುವಾಗ ರಸ್ತೆಯಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸಂತೋಷ (34 ವರ್ಷ) ಮೃತ ಪಟ್ಟ ದುರ್ದೈವಿ. ಈತನಿಗೆ ಮಧ್ಯಾಹ್ನದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಸ್ಕೂಟಿಯಲ್ಲಿಯೇ ಹೊರಟು ಹೊದಲದ ಅಂಗಡಿಯೊಂದರ ಬಳಿ ಬಂದು ಕುಳಿತಿದ್ದಾರೆ. ನಂತರ ಅಲ್ಲಿಂದ ತೀರ್ಥಹಳ್ಳಿ ಆಸ್ಪತ್ರೆಗೆ ಹೊರಟಿದ್ದಾರೆ.

ವಡ್ಡಿನಬೈಲು ಸಮೀಪ ಬರುವ ವೇಳೆ ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸ್ಕೂಟಿಯೂ ಸಹ ಅವರ ಮೇಲೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅವರ ಪತ್ನಿ ಬಾಣಂತಿಯಾಗಿದ್ದು ಮೂು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.