Author: Nammur Express Admin

ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ! – ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ: ಎಲ್ಲೆಡೆ ಸಂಭ್ರಮ – ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಗಣೇಶನ ಮೂರ್ತಿ NAMMUR EXPRESS NEWS ಗೌರಿ, ಗಣೇಶ ಹಬ್ಬ ಎಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಲೆಂದು ಭರ್ಜರಿ ತಯಾರಿಯೂ ನಡೆಯುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಹಬ್ಬಕ್ಕೆಂದು ಸಾಕಷ್ಟು ತಯಾರಿಯಲ್ಲಿ ಇರುತ್ತಾರೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ. ಗೌರಿ ಹಬ್ಬ ಹೆಣ್ಣುಮಕ್ಕಳ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬದಲ್ಲಿ ತವರು ಮನೆಯಿಂದ ಬರುವ ಉಡುಗೊರೆಯನ್ನ ತುಂಬಾ ಸಂಭ್ರಮದಿಂದ ಹೆಣ್ಣು ಮಕ್ಕಳು ಆಚರಿಸುವ ಹಬ್ಬವೇ ಆಗಿದೆ. ಹಳ್ಳಿ ಹಳ್ಳಿಗಳಿಂದ ಹಿಡಿದು ಎಲ್ಲಾ ನಗರ ಭಾಗಗಳಲ್ಲೂ ಗಣೇಶ ಕೂರಿಸುವುದು ಎಂದರೆ ಒಂದು ರೀತಿಯ ಸಂಭ್ರಮ. ಈಗಾಗೇ ಮಾರುಕಟ್ಟೆಯಲ್ಲೂ ಕೂಡ ಗಣೇಶನ ಮೂರ್ತಿಗಳು ಬಂದಿವೆ. ಗಣೇಶನ ಮೂರ್ತಿಗಳನ್ನು ಕೆಲವೊಂದಿಷ್ಟು ಹಳ್ಳಿಗಳಲ್ಲಿ ನಗರ ಪ್ರದೇಶಗಳಲ್ಲಿ ಅದನ್ನ ಬುಕ್ ಮಾಡಿಕೊಂಡು ಹೋಗಿರುತ್ತಾರೆ, ವಿವಿಧ…

Read More

ತೆರವು ಆದೇಶ ವಿರೋಧಿಸಿ ಶೃಂಗೇರಿಯಲ್ಲಿ ಹೋರಾಟ – ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ NAMMUR EXPRESS NEWS ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ಆದೇಶ ವಿರೋಧಿಸಿ ಶೃಂಗೇರಿಯಲ್ಲಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು. ಪಟ್ಟಣದ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಸರ್ಕಾರಕ್ಕೆ ಈ ರೈತರ ಒತ್ತುವರಿ ತೆರವು ಆದೇಶವನ್ನು ಹಿಂಪಡೆಯುವಂತೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಅಂಬ್ಲೂರು ರಾಮಕೃಷ್ಣ “2002ರಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಒಂದು ಆದೇಶ ಇವತ್ತು ಮಲೆನಾಡಿಗರಿಗೆ ಬಹಳ ಮಾರಕವಾಗಿ ಪರಿಣಮಿಸಿದೆ. ಮಂಜೂರಾತಿಗೆ ಬೇಕಾಗಿರುವಂತಹ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಈಗ ಅರಣ್ಯ ಇಲಾಖೆ ಆ ಜಾಗವೆಲ್ಲ ನಮ್ಮದೂ ಎಂದು ತೆರವು ಮಾಡಲು ಮುಂದಾಗಿದೆ. ನಾವು ಇದನ್ನು ಕಂಡಿಸುತ್ತಿದ್ದು ಇಲಾಖೆ ಅಗತ್ಯರುವ ಜಾಗಗಳು,ಕೃಷಿ ಭೂಮಿಯನ್ನು ಇತ್ಯರ್ಥವಾಗದ ಹೊರತು ತೆರವು ಮಾಡ ಕೂಡದು.…

Read More

ಶಿವಮೊಗ್ಗ ಜಿಲ್ಲೆ: 21 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ * ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ,ಪ್ರೌಢ ಶಾಲಾ ವಿಭಾಗ * ಯಾರು ಯಾರಿಗೆ ಪ್ರಶಸ್ತಿ?: ಇಲ್ಲಿದೆ ಡೀಟೇಲ್ಸ್ * ತೀರ್ಥಹಳ್ಳಿಯ ನಾಗರಾಜ್, ಗಣೇಶ ನಾಯ್ಕ್ ಅವರಿಗೆ ಒಲಿದ ಪ್ರಶಸ್ತಿ NAMMUR EXPRESS NEWS ಶಿವಮೊಗ್ಗ : ಜಿಲ್ಲಾ ಮಟ್ಟದ 2024-25ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 21 ಮಂದಿ ಶಿಕ್ಷಕರುಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೋಹನ್ ಕುಮಾರ್ ಹೆಚ್ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾರಂಬಳ್ಳಿ, ಬಸವರಾಜಪ್ಪ ಹೆಚ್ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನೆಗೊಪ್ಪ, ಸುಧಾಚಕ್ರಸಾಲಿ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಾಬಾಳು, ಈಶ್ವರಪ್ಪ ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಕಳಲೆ, ನಿತ್ಯಾನಂದ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯರೇಕಟ್ಟೆ, ಆರ್ ಪಲಾ ನಾಯ್ಕ ಸಹಶಿಕ್ಷಕರು ಸರಕಾರಿ ಕಿರಿಯ…

Read More

ಉಡುಪಿ:15 ಮಂದಿ ಶಿಕ್ಷಕರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ! * ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ,ಪ್ರೌಢ ಶಾಲಾ ವಿಭಾಗ * 2024-25ನೇ ಸಾಲಿನ ಶಿಕ್ಷಕರು! NAMMUR EXPRESS NEWS ಉಡುಪಿ : ಜಿಲ್ಲಾ ಮಟ್ಟದ 2024-25ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ ಒಟ್ಟು 15 ಮಂದಿ ಶಿಕ್ಷಕರುಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾಲಿನಿ ಮುಖ್ಯ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಚ್ಚೂರು ಕಾರ್ಕಳ ವಲಯ, ಖಾತುನ್ ಬಿ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲ್ಲಾರು ಉರ್ದು ಉಡುಪಿ ವಲಯ, ರವಿರಾಜ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಹಿ ಪ್ರಾ ಶಾಲೆ ಹೈಕಾಡಿ ಬ್ರಹ್ಮಾವರ ವಲಯ, ಶ್ರೀನಿವಾಸ ಶೆಟ್ಟಿ ಸಹಶಿಕ್ಷಕರು ಸಕಿಪ್ರಾ ಶಾಲೆ ಗೋಪಾಡಿ ಪಡು ಕುಂದಾಪುರ ವಲಯ, ಅಮಿತಾ ಬಿ ಸಹಶಿಕ್ಷಕರು ಸಕಿಪ್ರಾಶಾಲೆ ಬಾರಂದಾಡಿ ಬೈಂದೂರು ವಲಯ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಭಾಸ್ಕರ ಪೂಜಾರಿ ಸಹ ಶಿಕ್ಷಕರು…

Read More

ಸಹ್ಯಾದ್ರಿ ಪಿಯು ಕಾಲೇಜು ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ! – ಜಿಲ್ಲಾ ಮಟ್ಟದ ವಾಲೀಬಾಲ್ ಚಾಂಪಿಯನ್: ಬಾಲಕ,ಬಾಲಕಿಯರ ಅಮೋಘ ಪ್ರದರ್ಶನ – ಚೆಸ್ ಪಂದ್ಯಾಟದಲ್ಲೂ ಜಿಲ್ಲಾ ಮಟ್ಟಕ್ಕೆ ಸಹ್ಯಾದ್ರಿ ಶಾಲೆ ವಿದ್ಯಾರ್ಥಿಗಳು NAMMUR EXPRESS NEWS ತೀರ್ಥಹಳ್ಳಿ: ಸೆಪ್ಟೆಂಬರ್ 2 ಮತ್ತು 3 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹೊನಲು ಬೆಳಕಿನ ಯುನೈಟೆಡ್ ಕಪ್ 2024-25ರ ವಾಲೀಬಾಲ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪಿ ಕಾಲೇಜು ಸಂಸ್ಥೆಯ ಪಿ.ಯು ಬಾಲಕ & ಬಾಲಕಿಯರ ತಂಡವು ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಒಂದೇ ಕಾಲೇಜಿನ ಎರಡೂ ತಂಡವು ಜಿಲ್ಲಾ ಮಟ್ಟದ ವಾಲೀಬಾಲ್ ಚಾಂಪಿಯನ್ ಆಗುವುದರ ಮೂಲಕ ಐತಿಹಾಸಿಕ ಸಾಧನೆಯೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಕೊಟ್ಟಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಸಾಗರ ಪಿ.ಯು ಕಾಲೇಜಿನ ವಾಲೀಬಾಲ್ ತಂಡದೊಂದಿಗೆ ಸಹ್ಯಾದ್ರಿ ಪಿ ಯು ಕಾಲೇಜಿನ ತಂಡವು ಅತ್ಯಂತ ರೋಚಕ ಫೈನಲ್‌ ಪ್ಯಾವಳಿಯಲ್ಲಿ ನೇರ ಎರಡು ಸೆಟ್‌ಗಳನ್ನು…

Read More

ಗಣೇಶ ಹಬ್ಬಕ್ಕೆ ಬರುತ್ತಾ ಗೃಹ ಲಕ್ಷ್ಮಿ ಹಣ? – ಇನ್ನು 4 ದಿನದಲ್ಲಿ ಹಣ ಸಂದಾಯ: ಸಚಿವೆ – ಜಿ‌ಎಸ್ ಟಿ, ಆದಾಯ ತೆರಿಗೆ ಕಟ್ಟುವವರಿಗೆ ಹಣ ಹಾಕಲ್ಲ NAMMUR EXPRESS NEWS ಬೆಂಗಳೂರು: ಮನೆ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹ ಲಕ್ಷ್ಮೀ ಹಣ ಇನ್ನೂ ನಾಲ್ಕು ದಿನಗಳಲ್ಲಿ ಒಟ್ಟಿಗೆ ಸಂದಾಯ ಮಾಡುತ್ತೇವೆ ಎಂದಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ 11 ನೇ ಕಂತು ಹಣ ಬಿಡುಗಡೆ ಆಗಿದ್ದು, ನಾಲ್ಕೈದು ದಿನಗಳಲ್ಲಿ 12ನೇ ಹಾಗೂ 13ನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ, ಗೃಹಲಕ್ಷ್ಮೀ ಖಾತೆಗಳು ಡಿಲೀಟ್ ಆಗಿವೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದುವರೆಗೂ ಒಂದೇ ಒಂದು ಕೂಡ ಡಿಲೀಟ್ ಆಗಿಲ್ಲ.ಯಾರು ಜಿ‌ಎಸ್ ಟಿ, ಆದಾಯ ತೆರಿಗೆ ಕಟ್ಟುತ್ತಿದ್ದಾರೆ, ಅಂತಹವರದ್ದು ಅವರು ಅಪ್ ಲೋಡ್ ಮಾಡಿದಾಗಲೇ ಡಿಲೀಟ್ ಮಾಡಿದ್ದೇವೆ. ನೋಂದಣಿ ಆದ ಬಳಿಕ ನಾವು ಡಿಲೀಟ್ ಮಾಡಿಲ್ಲ ಎಂದರು‌.

Read More

ಸಿಗರೇಟ್ ಮಾತ್ರವಲ್ಲ ಅಗರಬತ್ತಿಯಿಂದಲೂ ಕ್ಯಾನ್ಸರ್? * ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು!! * ಅಗರಬತ್ತಿಯಿಂದ ಆಗುವ ಹಾನಿಗಳೇನು? NAMMUR EXPRESS NEWS ಸಿಗರೇಟ್ ನಿಂದ ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳು ಬರುತ್ತವೆ ಎನ್ನುವುದನ್ನು ಕೇಳಿದ್ದೇವೆ.! ಆದರೆ ಅಗರಬತ್ತಿ ಅಥವಾ ಊದುಬತ್ತಿಯಿಂದಲೂ ಕ್ಯಾನ್ಸರ್ ಸೇರಿದಂತೆ ಹಲವು ಅನಾರೋಗ್ಯಗಳು ಬರುತ್ತವೆ ಎನ್ನುವುದನ್ನು ನೀವು ನಂಬುತ್ತೀರಾ? ನಂಬದಿದ್ದರೂ ಇದು ಸತ್ಯ. ಸಿಗರೇಟ್ ಹೊಗೆಯಿಂದ ಕ್ಯಾನ್ಸರ್ ಬರುವಂತೆ, ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ಗಳು (Poly-Aromatic Hydrocarbons) ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಮಾತ್ರವಲ್ಲದೇ ಉಸಿರಾಟದ ತೊಂದರೆಗಳಿಗೂ ಇದು ಕಾರಣವಾಗಬಹುದಾಗಿದೆ. * ಅಗರಬತ್ತಿಯಿಂದ ಆಗುವ ಹಾನಿಗಳೇನು? ಊದುಬತ್ತಿಯ ಹೊಗೆಯನ್ನು ನಿರಂತರವಾಗಿ ಉಸಿರಾಡುತ್ತಿದ್ದರೆ, ಹೃದಯದ ಜೀವಕೋಶಗಳ ಮೇಲೆ ಇದು ಪರಿಣಾಮ ಬೀರಿ, ಹೃದಯದ ಜೀವಕೋಶಗಳಿಗೆ ಹಾನಿಯಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು. ಊದುಬತ್ತಿಯಲ್ಲಿ ಬಳಸುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಅಗರ ಬತ್ತಯಿಂದ ಹೊ ಬರುವ ಕಾರ್ಬನ್ ಮೋನೋ ಆಕ್ಸೈಡ್ ಶ್ವಾಸಕೋಶದ…

Read More

ಚಿಕ್ಕಮಗಳೂರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ – 8 ವರ್ಗಗಳಿಗೆ ಮೂರು ವಿಭಾಗಗಳಿಂದ 24 ಶಿಕ್ಷಕರ ಆಯ್ಕೆ – ಯಾವ ತಾಲೂಕು ಯಾರಿಗೆ ಪ್ರಶಸ್ತಿ? ಇಲ್ಲಿದೆ ಪಟ್ಟಿ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ 2024-25 ನೇ ಸಾಲಿನ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು 8 ವರ್ಗಗಳಿಗೆ ಮೂರು ವಿಭಾಗಗಳಿಂದ 24 ಶಿಕ್ಷಕರನ್ನು ಆಯ್ಕೆ ಮಾಡಿದೆ. ಕಿರಿಯ ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗಗಳಲ್ಲಿ ತಲಾ 8 ಶಿಕ್ಷಕರನ್ನು ಆಯ್ಕೆ ಮಾಡಿದೆ, ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು 5000ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರು. ಕಿರಿಯ ಪ್ರಾಥಮಿಕ ವಿಭಾಗ: 1) ಗಣೇಶಪ್ಪ ಕೆ.ಎಸ್. ಗುಡ್ಡೆಕೊಪ್ಪ, ಚಿಕ್ಕಮಗಳೂರು ತಾಲೂಕು 2) ಶ್ರೀಮತಿ ರೇಣುಕಮ್ಮ ಸಿ.ಟಿ ಪರ್ವತನಹಳ್ಳಿ,ಕಡೂರು ತಾಲೂಕು 3) ಮಂಜುನಾಥ ಜಿ ಚನ್ನೇನಹಳ್ಳಿ, ಬೀರೂರು…

Read More

ಮತ್ತೆ ವೆನ್ಲ್ಯಾಕ್ ಆಸ್ಪತ್ರೆಗೆ ಡಾ.ಶಿವಪ್ರಕಾಶ್ ವರ್ಗಾವಣೆ – ಭದ್ರಾವತಿಯಿಂದ ಮಂಗಳೂರಿಗೆ ಜನ ಮೆಚ್ಚಿದ ಡಾಕ್ಟರ್ – ತೀರ್ಥಹಳ್ಳಿ ಸಂಜೀವಿನಿ ಕ್ಲಿನಿಕ್ ಡಾ.ನಾಗರಾಜ್ ಅವರಿಗೆ ಆಯುಷ್ ಎಕ್ಸಲೆನ್ಸ್ ಅವಾರ್ಡ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಉತ್ತಮ ಸೇವೆ ನೀಡುವ ಮೂಲಕ ಜನಸ್ನೇಹಿ ವೈದ್ಯರು ಎಂಬ ಖ್ಯಾತಿ ಗಳಿಸಿರುವ ಡಾ.ಶಿವಪ್ರಕಾಶ್ ಅವರನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧಿಕ್ಷಕರು ಇವರನ್ನು ಮಂಗಳೂರಿನ ವೆನ್ಲ್ಯಾಕ್ ಆಸ್ಪತ್ರೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಭದ್ರಾವತಿಗೂ ಮುನ್ನ ತೀರ್ಥಹಳ್ಳಿಯ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲ ಸೇವೆ ನಡೆಸಿ ರೋಗಿಗಳಿಗೆ ಅದರಲ್ಲೂ ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಿಗೆ ತಮ್ಮ ನಗುಮುಖದ ಉತ್ತಮ ಸೇವೆಯಿಂದ ಇಡೀ ತಾಲೂಕಿನಲ್ಲಿ ಅಲ್ಲದೆ ಅಕ್ಕ ಪಕ್ಕದ ಊರುಗಳಲ್ಲಿ ಹಾಗೂ ಕೊಪ್ಪ, ಎನ್ ಆರ್ ಪುರ, ಕಳಸ, ಾಳಹೊನ್ನೂರು, ಜಯಪುರ ಇತ್ತ ಹೊಸನಗರ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದರು. ಇದೀಗ ವೆನ್ಲ್ಯಾಕ್ ಆಸ್ಪತ್ರೆಗೆ…

Read More

ಕರಾವಳಿ ಟಾಪ್ ನ್ಯೂಸ್ * ವೇಶ್ಯವಾಟಿಕೆ ದಂದೆಯಲ್ಲಿ ಸಿಕ್ಕಿಬಿದ್ದ ಬೆಳ್ತಂಗಡಿ ಟೆಕ್ಕಿ!! * ಉಡುಪಿ: ಇಸ್ಲಾಂಗೆ ಮತಾಂತರವಾಗುವಂತೆ ಮುಸ್ಲಿಂ ಯುವಕನಿಂದ ಷರತ್ತು!! * ಮಣಿಪಾಲ:ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕಳ್ಳತನ! NAMMUR EXPRESS NEWS ಬೆಳ್ತಂಗಡಿ: ಕೆಲವೇ ದಿನಗಳಲ್ಲಿ ಮದುವೆ ನಿಶ್ಚಿತಾರ್ಥವಾಗಬೇಕಿದ್ದ ಟೆಕ್ಕಿಯೊಬ್ಬ ವೇಶ್ಯಾವಾಟಿಕೆ ದಂಧೆಯಲ್ಲಿ ಬೆಂಗಳೂರಿನಲ್ಲಿ సిసిబి ಪೊಲೀಸರ ಅತಿಥಿಯಾಗಿದ್ದಾನೆ. ಈ ವಿಷಯ ತಿಳಿದಿದ್ದಂತೆ ಇದನ್ನು ನಿಶ್ಚಿತಾರ್ಥ ರದ್ದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬೆಳ್ತಂಗಡಿ ಮೂಲದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಶಾಸಿ, ಹೊಂಗಸಂದ್ರದ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್ ಹಾಗೂ ಶಾಂತಿಪುರದ ಸೂರಜ್ ಶಾಹಜೀ ಬಂಧಿತರು. ಆರೋಪಿಗಳಾದ ಕರಿಷ್ಮಾ ಹಾಗೂ ಸೂರಜ್ ಮೂಲತಃ ಪಶ್ಚಿಮ ಬಂಗಾಳದ ರಾಜ್ಯದವರು ಎಂು ಗುರುತಿಸಲಾಗಿ ಇವರು ಹಲವು ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗಕ್ಕಾಗಿ ಬಂದಿದ್ದು, ನಂತರ ವೇಶ್ಯಾವಾಟಿಕೆ ದಂಧೆಗೆ ಇಳಿದಿದ್ದರು. ನಗರದಲ್ಲಿ ಮನೆ ಬಾಡಿಗೆ ಪಡೆದು ಅಲ್ಲಿ ತಮ್ಮ ದಂಧೆಯನ್ನು ನಡೆಸುತ್ತಿದ್ದರು. ಕೆಲ ದಿನಗಳ…

Read More