Categories
ತೀರ್ಥಹಳ್ಳಿ

ಸಹ್ಯಾದ್ರಿ ಪಿಯು ಕಾಲೇಜು ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ!

ಸಹ್ಯಾದ್ರಿ ಪಿಯು ಕಾಲೇಜು ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ!
– ಜಿಲ್ಲಾ ಮಟ್ಟದ ವಾಲೀಬಾಲ್ ಚಾಂಪಿಯನ್: ಬಾಲಕ,ಬಾಲಕಿಯರ ಅಮೋಘ ಪ್ರದರ್ಶನ
– ಚೆಸ್ ಪಂದ್ಯಾಟದಲ್ಲೂ ಜಿಲ್ಲಾ ಮಟ್ಟಕ್ಕೆ ಸಹ್ಯಾದ್ರಿ ಶಾಲೆ ವಿದ್ಯಾರ್ಥಿಗಳು

NAMMUR EXPRESS NEWS
ತೀರ್ಥಹಳ್ಳಿ: ಸೆಪ್ಟೆಂಬರ್ 2 ಮತ್ತು 3 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹೊನಲು ಬೆಳಕಿನ ಯುನೈಟೆಡ್ ಕಪ್ 2024-25ರ ವಾಲೀಬಾಲ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಪಿ ಕಾಲೇಜು ಸಂಸ್ಥೆಯ ಪಿ.ಯು ಬಾಲಕ & ಬಾಲಕಿಯರ ತಂಡವು ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಒಂದೇ ಕಾಲೇಜಿನ ಎರಡೂ ತಂಡವು ಜಿಲ್ಲಾ ಮಟ್ಟದ ವಾಲೀಬಾಲ್ ಚಾಂಪಿಯನ್ ಆಗುವುದರ ಮೂಲಕ ಐತಿಹಾಸಿಕ ಸಾಧನೆಯೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಕೊಟ್ಟಿದ್ದಾರೆ. ಅಂತಿಮ ಹಣಾಹಣಿಯಲ್ಲಿ ಸಾಗರ ಪಿ.ಯು ಕಾಲೇಜಿನ ವಾಲೀಬಾಲ್ ತಂಡದೊಂದಿಗೆ ಸಹ್ಯಾದ್ರಿ ಪಿ ಯು ಕಾಲೇಜಿನ ತಂಡವು ಅತ್ಯಂತ ರೋಚಕ ಫೈನಲ್‌ ಪ್ಯಾವಳಿಯಲ್ಲಿ ನೇರ ಎರಡು ಸೆಟ್‌ಗಳನ್ನು ಸೆಣಿಸುವ ಮೂಲಕ ಕಿಕ್ಕಿರಿದು ತುಂಬಿರುವ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮನಗೆದ್ದಿದ್ದಿದಾರೆ.
ಬಾಲಕರ ವಿಭಾಗದ ಜಿಲ್ಲಾ ಮಟ್ಟದ ಬೆಸ್ಟ್ ಅಟ್ಯಾಕರ್ ಆಗಿ ಆಸಿಫ್ ದ್ವಿತೀಯ ಪಿ.ಯು, ಬಾಲಕಿಯರ ವಿಭಾಗದ ಬೆಸ್ಟ್ ಅಟ್ಯಾಕರ್ ಆಗಿ ಕು.ನವ್ಯಾ ಪ್ರಥಮ ಪಿ.ಯು ಹಾಗೂ ಅತ್ಯುತ್ತಮ ಆಲ್‌ರೌಂಡರ್ ಆಗಿ ಸಮೃದ್ ಎಂದು ಗುರುತಿಸಲಾಗಿದೆ.
ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಹಾಗೂ ತರಬೇತಿಗೊಳಿಸಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ಎಂ.ಎಸ್ ಇವರನ್ನು ಸಹ್ಯಾದ್ರಿ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಉಪನ್ಯಾಸಕ ವೃಂದದವರು ಹಾಗೂ ಪೋಷಕರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.

ಚೆಸ್: ಪಾವನಿ ಮತ್ತು ಗಾನವಿ ಜಿಲ್ಲಾಮಟ್ಟಕ್ಕೆ ಆಯ್ಕೆ

ತೀರ್ಥಹಳ್ಳಿ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯಿತಿ ತೂದೂರು ಇವರ ವತಿಯಿಂದ ಸರ್ಕಾರಿ ಪ್ರೌಢಶಾಲೆ ತೂದೂರು ಇವರ ಸಂಯುಕ್ತ ಆಶ್ರಯದಲ್ಲಿ ಆ.30ರಂದು ತೀರ್ಥಹಳ್ಳಿ ತಾಲ್ಲೂಕು ಮಟ್ಟದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ಬಾಲಕ, ಬಾಲಕಿಯರ ಯೋಗಾಸನ ಮತ್ತು ಚೆಸ್ ಪಂದ್ಯಾವಳಿಯಲ್ಲಿ ನಮ್ಮ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಪಾವನಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಗಾನವಿ ತಾಲ್ಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತರಬೇತಿ ನೀಡಿದ
ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್.ಎಂ.ಎಸ್ ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,ಪದಾಧಿಕಾರಿಗಳು, ನಿರ್ದೇಶಕರು, ಆಡಳಿತಾಧಿಕಾರಿಗಳು,ಪ್ರಾಂಶುಪಾಲರು ಭೋದ ಭೋದಕೇತರ ವರ್ಗದವರು,ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.