ಶಿಮೂಲ್ ಮೊದಲು ಸಭೆ: ಅಭಿವೃದ್ಧಿಗೆ ಪ್ಲಾನ್! – ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ಸಭೆ – ಸಹಕಾರ ನಾಯಕ ಮಂಜುನಾಥ ಗೌಡರಿಗೆ ಸನ್ಮಾನ NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾಲೂ ಒಕ್ಕೂಟ (ಶಿಮೂಲ್) ಈ ಸಾಲಿನ ಮೊದಲ ಆಡಳಿತ ಮಂಡಳಿಯ ಸಭೆ ನೂತನ ಅಧ್ಯಕ್ಷರಾದ ಗುರುಶಕ್ತಿ ವಿಧ್ಯಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಶಿಮೂಲ್ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಿತು. ವಿದ್ಯಾಧರ ಗುರುಶಕ್ತಿ ಅವರ ಅಧ್ಯಕ್ಷತೆಯಲ್ಲಿ ರೈತರ ಮತ್ತು ಹಾಲು ಸಂಘಗಳ ಜೊತೆಗೆ ಸಿಬ್ಬಂದಿಗಳ ಬಗ್ಗೆ ಹಲವಾರು ವಿಚಾರದ ಚರ್ಚೆ ನಡೆಸಿದ ಶಿಮೂಲ್ ನಿರ್ದೇಶಕರು, ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥಗೌಡ ಅವರು ಅನೇಕ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷರಾದ ಚೇತನ್, ಹಿರಿಯ ನಿರ್ದೇಶಕರಾದ ಶಿವಶಂಕರ್ ಭದ್ರಾವತಿ ಕುಮಾರ್, ಆನಂದ್, ರವಿಕುಮಾರ್,ಸಂಜೀವಮೂರ್ತಿ ಬಣಕಾರ್ ದೀನೇಶ್ ಬಸಪ್ಪ ಮತ್ತು ಎಲ್ಲಾ ನಿರ್ದೇಶಕರು ಇದ್ದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ…
Author: Nammur Express Admin
ಇನ್ಮೇಲೆ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಟ್! * ಸೆ.1 ರಿಂದ ಕಟ್ಟುನಿಟ್ಟಾಗಿ ನಿಯಮ ಪಾಲನೆ: 15 ದಿನ ಬಡ್ಡಿಯಿಲ್ಲದೆ ಕಾಲಾವಕಾಶ – ಬೆಸ್ಕಾಂ ಅಲ್ಲಿ ಮೊದಲ ಪ್ರಯೋಗ: ಬಳಿಕ ಎಲ್ಲಾ ಕಡೆ ಜಾರಿ? NAMMUR EXPFESS NEWS ಬೆಂಗಳೂರು: ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಸೆ.1 ರಿಂದ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ- ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಮೀಟರ್ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸಿ ಎಂದು ಬೆಸ್ಕಾಂ ಪ್ರಕಟಣೆ ಕೋರಿದೆ. ಪ್ರತಿ ತಿಂಗಳ ಮೊದಲ 15 ದಿನದಲ್ಲಿ…
ಪುನೀತ್ ಪತ್ನಿ ಅಶ್ವಿನಿ ಬಗ್ಗೆ ಕೆಟ್ಟ ಪೋಸ್ಟ್: ಅಭಿಮಾನಿಗಳ ಕಿಚ್ಚು! * ಅಶ್ವಿನಿ ಪುನೀತ್ ರಾಜ್‌ಕುಮಾರ್ ನಕಲಿ ಫೋಟೋ ಬಳಕೆ * ಮದುವೆ ಯಾಗ್ತೇನೆ ಎಂದು ಪೋಸ್ಟ್ ಹಾಕಿದ ಅವಿವೇಕಿ NAMMUR EXPRESS NEWS ಬೆಂಗಳೂರು: ಕರ್ನಾಟಕ ರತ್ನ, ಪವರ್‌ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಡೀಪ್‌ಫೇಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿಯೋರ್ವ ಅತಿರೇಕ ಪ್ರದರ್ಶಿಸಿದ್ದಾನೆ. ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಡೀಪ್ ಫೇಕ್ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ.ಆ. 29 2024 ರಂದು ನಾನು ವಿವಾಹ ವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು, ರಾಜವಂಶದ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಬರೆಯಲಾಗಿದೆ. ್ವಿಟರ್‌ನ್ಲಿ ಕೇವಲ 100 ಫಾಲೋವರ್ಸ್ ಅನ್ನು ಹೊಂದಿರುವ ಯೋಗೇಂದ್ರ ಎಂಬ ಹೆಸರಿನ…
ಅಕ್ರಮ ಸಕ್ರಮ ಪೋಡಿ ಮಾಡಲು ಅಭಿಯಾನ * ಲಕ್ಷಾಂತರ ರೈತರ ಅನೇಕ ವರ್ಷಗಳಿಂದ ಪ್ರಯತ್ನ * ರೈತರ ಸಮಸ್ಯೆಗೆ ಶಾಶ್ವತ ಪರಿಹಾರ”ಸೂಚನೆ * ಪೋಡಿ ದುರಸ್ಥಿಗೆ ಡಿಜಿಟಲ್ ಆ್ಯಪ್ ಸಿದ್ಧ! NAMMUR EXPRESS NEWS ಬೆಂಗಳೂರು: ಸೆಪ್ಟೆಂಬರ್ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಆ.30ರಂದು ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದ್ದಾರೆ. “ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ…
ಕೊನೆಯ ಶ್ರಾವಣ ಶನಿವಾರ: ನಿಮ್ಮ ದಿನ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಲಾಭ ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕುಟುಂಬ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿರೋಧಿಗಳು ಸಕ್ರಿಯವಾಗಿ ಉಳಿಯುತ್ತಾರೆ. ಕೆಲಸದ ನಿಮಿತ್ತ ಹೆಚ್ಚು ಪ್ರಯಾಣ ಮಾಡಬೇಕಾಗುವುದು. ಕೆಲವರಿಗೆ ಆಸ್ತಿ ನಷ್ಟವಾಗಬಹುದು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ಸುದ್ದಿ ಸಿಗಬಹುದು. ** ವೃಷಭ ರಾಶಿ : ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಮೃದ್ಧಿ ಇರುತ್ತದೆ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಪ್ರೇರಿತರಾಗಿ ಕಾಣಿಸಿಕೊಳ್ಳುತ್ತೀರಿ. ್ರೀ ಕೃಷ್ಣನನ್ನು ಆರಾಧಿಸಿ. ಗುಂಪು ಅಧ್ಯಯನವು ವಿದ್ಯಾರ್ಥಿಗಳಿಗೆ…
ಮಾಜಿ ಸಚಿವ ಕೆ ಹೆಚ್ ಶ್ರೀನಿವಾಸ್ ಇನ್ನಿಲ್ಲ! – ಶಿಕಾರಿಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ – ಹೊಸನಗರ: ಬೈಕ್, ಕಾರು ನಡುವೆ ಮುಖಾಮುಖಿ ಡಿಕ್ಕಿ – ತೀರ್ಥಹಳ್ಳಿ: ಮಾಕೋಡು ಬಳಿ ಹಿಟ್ ಅಂಡ್ ರನ್! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆಎಚ್ ಶ್ರೀನಿವಾಸ್ ನಿಧನರಾಗಿದ್ದಾರೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಕರೂ ಆಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು.ಶ್ರೀನಿವಾಸ್ ಅವರಿಗೆ 86 ವರ್ಷ ವಯಸ್ಸಾಗಿತ್ತು.ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಕೆ ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ರಾಜಕೀಯ ವಲಯ ಸೇರಿ ಎಲ್ಲಾ ವಲಯದಿಂದಲೂ ಕಂಬನಿ ವ್ಯಕ್ತಪಡಿಸಿದ್ದಾರೆ.…
ಅರಣ್ಯ ಒತ್ತುವರಿ ತೆರವು ವಿರೋಧ: ಸಭೆ – ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಬಾಳೆಹೊನ್ನೂರಲ್ಲಿ ಮಹತ್ವದ ಸಭೆ. NAMMUR EXPRESS NEWS ಬಾಳೆಹೊನ್ನೂರು: ಅರಣ್ಯ ಒತ್ತುವರಿ ತೆರವನ್ನು ವಿರೋಧಿಸಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಇದೇ ಸೆಪ್ಟೆಂಬರ್ 01ಕ್ಕೆ ಮಹತ್ವದ ಸಭೆ ಕರೆದಿದೆ. 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಾಹಾಭಗವತ್ಪಾಂದಗಳವರ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಅರಣ್ಯ ಒತ್ತುವರಿ ತೆರವಿನಿಂದ ಮಲೆನಾಡಿಗರ ಬದುಕು ಮುಂದೇನು,? ಕಾನೂನಾತ್ಮಕ ಪರಿಹಾರಗಳೇನು? ಎಂಬುದರ ಕುರಿತು ಮಲೆನಾಡಿಗರ ಮಹತ್ವದ ಸಭೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಮಠದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 01 ಭಾನುವಾರದಂದು ಕರೆಯಲಾಗಿದ್ದು, ವಿಶೇಷ ಆಹ್ವಾನಿತರಾಗಿ ನ್ಯಾಯವಾದಿಗಳು ಹಾಗೂ ಜನಪರ ಹೋರಾಟಗಾರರಾದ ರವೀಂದ್ರನಾಥ್ ನಾಯಕ್ ಆಗಮಿಸಲಿದ್ದಾರೆ ಎಂದು ಮಲೆನಾಡು ಕರಾವಳಿ ಒಕ್ಕೂಟದ ಪ್ರಧಾನ ಸಂಚಾಲಕರಾದ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.
ಕರಾವಳಿ ಟಾಪ್ ನ್ಯೂಸ್ ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೋಟೊಶೂಟ್ ಕಿರಿಕ್! – ಕಾರ್ಕಳ: ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಪರಾರಿ! – ಪುತ್ತೂರು: ತಡೆಯಾಜ್ಞೆ ತಂದ ಅರುಣ್ ಕುಮಾರ್ ಪುತ್ತಿಲ NAMMUR EXPRESS NEWS ಕುಂದಾಪುರ: ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೋಟೊಶೂಟ್‌ಗೆ ಪೊಲೀಸರು ಅಡ್ಡಿಪಡಿಸಿದ್ದಕ್ಕೆ ಮಾಡೆಲ್‌ವೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಬಟ್ಟೆ ಬದಲಿಸಿ ಇಲ್ಲದಿದ್ದರೆ, ಸ್ಥಳೀಯರು ರೊಚ್ಚಿಗೆದ್ದು ಹಲ್ಲೆ ಮಾಡುತ್ತಾರೆ ಎಂದು ಬೆದರಿಸಿದ್ದರಂತೆ. ಸದ್ಯ ಈ ಸಂಬಂಧ ಮಾಡೆಲ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ ಎಂದು ಮಾಡೆಲ್‌ವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಪಡುಕೆರೆ ಬೀಚ್‌ನಲ್ಲಾದ ಕಹಿ ಅನುಭವವನ್ನು ಮಾಡೆಲ್ ಹಂಚಿಕೊಂಡಿದ್ದಾರೆ. ಬೀಚ್‌ನಲ್ಲಿ ನನ್ನ ಪತಿ ಬಿಕಿನಿ ಫೋಟೊಶೂಟ್ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರುಅಡ್ಡಿ ಪಡಿಸಿದ್ದಾರೆ ಎಂದು ದೂರಿದರು. ಪ್ರತಿಕ್ರಿಯಿಸಿ ಬೀಚ್‌ನಲ್ಲಿ ಬಿಕಿನಿ ರಿಸವುದು ಯಾವುದೇ ಅಪರಾಧವಲ್ಲ. ಸಾರ್ವಜನಿಕ ಸ್ಥಳದಲ್ಲಿ ಫೋಟ್‌ಶೂಟ್ ಮಾಡಲು…
ಸೌಜನ್ಯ ಕೇಸ್ ಮರು ತನಿಖೆ ಇಲ್ಲ!? – ಸೌಜನ್ಯ ಪೋಷಕರು ಸಲ್ಲಿಸಿದ ಅರ್ಜಿ ವಜಾ ಮಾಡಿದ ಕೋರ್ಟ್ – ಸೌಜನ್ಯ ಪರ ಹೋರಾಟಗಾರರಿಗೆ ತುಸು ನಿರಾಸೆ NAMMUR EXPRESS NEWS ಬೆಂಗಳೂರು: ದೇಶದಲ್ಲೇ ಭಾರೀ ಸಂಚಲನ ಮೂಡಿಸಿ ಇನ್ನೂ ನಿಗೂಢವಾಗಿ ಉಳಿದ ಸೌಜನ್ಯ ಪ್ರಕರಣದ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಸೌಜನ್ಯ ಕೊಲೆಯಾಗಿ 12 ವರ್ಷ ಆದರೂ ಇಂದು ನ್ಯಾಯ ಸಿಕ್ಕಿಲ್ಲ. ಈ ಹಿಂದೆ ನಡೆದ ತನಿಖೆಗಳಲ್ಲಿ ಸೌಜನ್ಯಗಳಿಗೆ ಸರ್ಕಾರದ ಅಂಗ ಸಂಸ್ಥೆಗಳೇ ಅನ್ಯಾಯ ಮಾಡಿದ್ದವು. ಹೀಗಾಗಿ ಸೌಜನ್ಯ ಮರುತನಿಗೆ ಮಾಡಬೇಕು ಎನ್ನುವ ಹಕ್ಕೋತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಲು ಆಗುವುದಿಲ್ಲ ಎಂದು ಹೇಳಿದೆ ಹೈಕೋರ್ಟ್. ಈ ಮೂಲಕ ಸೌಜನ್ಯಾ ಪೋಷಕರು ಸಲ್ಲಿಸಿದ ಅರ್ಜಿ ವಜಾ ಆಗಿದೆ. ಧರ್ಮಸ್ಥಳದ ಸೌಜನ್ಯ ಪ್ರಕರಣವನ್ನು ಪೊಲೀಸರುಗಳು ವೈದ್ಯರುಗಳು ರಾಜಕಾರಣಿಗಳು ಮತ್ತು ಡೀ ್ಯವಸ್ಥೆ ತನಿಖೆ…
ಕಾರ್ಕಳ ಪುರಸಭೆಗೆ ನೂತನ ಸಾರಥಿಗಳು! – ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ , ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆ – ಬಿಜೆಪಿ ಆಡಳಿತ ಪಡೆದ ಕಾರ್ಕಳ ಪುರಸಭೆ: ಅಭಿನಂದನೆಗಳು NAMMUR EXPRESS NEWS ಕಾರ್ಕಳ: ಕಾರ್ಕಳ ಪುರಸಭೆಯ ನೂತನ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಅಧಿಕಾರವನ್ನು ಮತ್ತೆ ಬಿಜೆಪಿ ಉಳಿಸಿಕೊಂಡಿದೆ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆ. 30ರಂದು ಚುನಾವಣೆ ನಡೆದಿದ್ದು, 23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಒರ್ವರು ಪಕ್ಷೇತರ ಸದಸ್ಯರಿದ್ದಾರೆ. ಯಾರು ಯಾರು ನಾಮಪತ್ರ ಸಲ್ಲಿಸಿದ್ದರು? ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ, ಕಾಂಗ್ರೆಸ್ ಸಮ…