ಜನಪರ ಅಧಿಕಾರಿ ವಿನಯ್ ನಾಯ್ಕ್ ಆಗುಂಬೆಯಿಂದ ವರ್ಗಾವಣೆ – 9 ವರ್ಷಗಳ ಸುದೀರ್ಘ ಸೇವೆಯಲ್ಲಿ ಜನರ ಪರ ಕಾಳಜಿ – ಸೇವಾ ಜೀವನಕ್ಕೆ ಶುಭ ಕೋರಿದ ಆಗುಂಬೆ ಸಾರ್ವಜನಿಕರು NAMMUR EXPRESS NEWS ತೀರ್ಥಹಳ್ಳಿ: ಕುದುರೆಮುಖ ನ್ಯಾಷನಲ್ ಪಾರ್ಕ್ ವ್ಯಾಪ್ತಿಯ ಆಗುಂಬೆ ವನ್ಯ ಜೀವಿ ವಲಯದ ಉಪ ವಲಯ ಅರಣ್ಯ ಅಧಿಕಾರಿ ವಿನಯ್ ಜಿ ನಾಯ್ಕ್ ಅವರು ಕುಂದಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗುಂಬೆ ವಲಯದಲ್ಲಿ ಕಳೆದ 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ವಿನಯ್ ಅವರು ಜನರಿಗೆ ಸಹಕಾರದ ಜತೆಗೆ ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆಗುಂಬೆ ವನ್ಯ ಜೀವಿ ವಲಯದಲ್ಲಿ ಯಾವುದೇ ಸಮಸ್ಯೆ ಆದರೂ ಜನರ ಸ್ಪಂದನೆಗೆ ಸಿಗುತ್ತಿದ್ದರು. ಆಗುಂಬೆ ಜನ ಅವರ ವರ್ಗಾವಣೆ ಬಳಿಕ ಅವರ ಸೇವೆಯನನ್ನು ನೆನೆಯುತ್ತಿದ್ದಾರೆ. ಹೆಬ್ರಿ ವಲಯದ ನಾರಾಯಣ್ ನಾಯಕ್ ಇದೀಗ ಇಲ್ಲಿಗೆ ವರ್ಗಾವಣೆ ಆಗಿದ್ದಾರೆ. ವಿನಯ್ ಅವರು 9 ವರ್ಷದಲ್ಲಿ ಸಾವಿರಾರುಜನರಿಗೆ ಸಹಕಾರ ಮಾಡಿದ್ದಾರೆ. ಜತೆಗೆ ಯಾವುದೇ ತುರ್ತು ಸಂದರ್ಭದಲ್ಲಿ ಜನರ ಜತೆಗೆ ಇದ್ದಾರೆ. ಇದೀಗ…
Author: Nammur Express Admin
ಚರಂಡಿಗೆ ಉರುಳಿದ ಬಸ್.: 17 ವಿದ್ಯಾರ್ಥಿಗಳಿಗೆ ಗಾಯ – ಕರಾವಳಿಯ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿದ್ದರು! – ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ – ಬಂಟ್ವಾಳ : ಲಾರಿಯಲ್ಲಿದ್ದ ಸಿ.ಎನ್.ಜಿ ಗ್ಯಾಸ್ ಸೋರಿಕೆ! – ಕುಂದಾಪುರ: ಚಲಿಸುತ್ತಿದ್ದಾಗಲೇ ಕಳಚಿದ ಸರ್ಕಾರಿ ಬಸ್ಸಿನ ಟಯರ್! NAMMUR EXPRESS NEWS ಕೊಲ್ಲೂರು: ನಾಗೋಡಿ ಘಾಟಿ ಬಳಿ ಖಾಸಗಿ ಬಸ್ ಒಂದು ಚರಂಡಿಗೆ ಉರುಳಿದ ಘಟನೆ ಸೋಮವಾರ ನಡೆದಿದೆ. ಶಿವಮೊಗ್ಗದಿಂದ ಕೊಲ್ಲೂರಿನತ್ತ ಬಸ್ಸು ಬರುತ್ತಿತ್ತು. ಬಸ್ಸಿನಲ್ಲಿದ್ದ ಕೊಲ್ಲೂರು ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಹಾಗೂ ಕೊಲ್ಲೂರು ಜೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡವರೆಲ್ಲರೂ ಮಲೆನಾಡು ಭಾಗದ ವಿದ್ಯಾರ್ಥಿಗಳೆಂದು ತಿಳಿದುಬ೦ದಿದೆ. ಶಾಲೆಗೆ ನಿರಂತರ ರಜೆಯಿದ್ದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದ ಅವರು ಸೋಮವಾರ ಮತ್ತೆ ಶಾಲೆಗೆ ಹಿಂದಿರುಗುತ್ತಿದ್ದರು. ಬೆಳಿಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಚರಂಡಿಗೆ ನುಗ್ಗಿದೆ. ಉಡುಪಿ…
ಟಾಪ್ 3 ನ್ಯೂಸ್ ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ ನಾಲ್ಕು ಜನರು ಗಂಭೀರ. – ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು, ಮನೆಗೆ ನುಗ್ಗಿ ಮಹಿಳೆಯನ್ನ ಕೊಂದರು – ಹಾಸನ : ಭಾರಿ ಮಳೆಗೆ ಸೋರುತ್ತಿರುವ ಗ್ರಂಥಾಲಯ NAMMUR EXPRESS NEWS ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು ಬಿದ್ದಿದೆ. ಚಿತ್ರಮಂದಿರ ಪಕ್ಕದಲ್ಲೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ತಬರೀಸ್ ಮತ್ತು ಅರ್ಮಾನ್ ಎಂಬುವವರು ಗಂಭೀರವಾಗಿ ಗಾಯಗೊಂಡವರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗೋಡೆ ಕೆಳಗೆ ಬಿದ್ದ ಪರಿಣಾಮ ಬಟ್ಟೆ ಅಂಗಡಿಯ ಸ್ಟಾಲ್‌ಗಳು ನೆಲಕಚ್ಚಿವೆ. ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ. – ಮೈಸೂರು: ಏಳಿಗೆ ಸಹಿಸದ ಸಂಬಂಧಿಕರು, ಮನೆಗೆ ನುಗ್ಗಿ ಮಹಿಳೆಯನ್ನ ಕೊಂದರು…
ಮಲೆನಾಡಲ್ಲಿ ಕಡಿಮೆಯಾದ ಮಳೆ..! – ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ನಿಧಾನ – ಆಗುಂಬೆಯಲ್ಲಿ ನೂರು ಮಿ.ಮೀ.ಗಿಂತಲೂ ಹೆಚ್ಚು ವರ್ಷಧಾರೆ – ಮಳೆ ತಗ್ಗಿದರೂ ಅನಾಹುತ ನಿಂತಿಲ್ಲ: ವಿದ್ಯುತ್, ನೆಟ್ವರ್ಕ್ ಇಲ್ಲ NAMMUR EXPRESS NEWS ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆ ಆಗಿದೆ. ಜತೆಗೆ ಬಿಟ್ಟು ಬಿಟ್ಟು ಮಳೆ ಬರುತ್ತಿದೆ. ಆದರೆ ಮಳೆಯ ಅನಾಹುತ ಕಡಿಮೆ ಆಗಿಲ್ಲ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಮಳೆ ಕಡಿಮೆ ಆಗಿದೆ. ಮರಗಳು ವಿದ್ಯುತ್ ಕಂಬಗಳು ಬೀಳುತ್ತಿವೆ. ಇದರಿಂದ ವಿದ್ಯುತ್ ಮತ್ತು ನೆಟ್ವರ್ಕ್ ಇಲ್ಲದಾಗಿದೆ. ತೀರ್ಥಹಳ್ಳಿಯಲ್ಲಿ ಮಳೆ ಕಡಿಮೆ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 36.10 ಮಿ.ಮೀ ಮಳೆಯಾಗಿದೆ. ತಾಲೂಕಿನ ಆಗುಂಬೆಯಲ್ಲಿ ಭಾರಿ ಮಳೆಯಾಗಿದೆ. ಇನ್ನು ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ನೀರಿನ ಮಟ್ಟ ಕಮ್ಮಿಯಾಗಿದ್ದು, ಇದೀಗ ಮಲೆನಾಡು ಬಿಸಿಲಿನ ಮುಖ ನೋಡುತ್ತಿದೆ. ಎಲ್ಲೆಲ್ಲಿ ಎಷ್ಟಾಗಿದೆ? ತೀರ್ಥಹಳ್ಳಿ ತಾಲೂಕಿನ ಆಗುಂಬೆ – 124.2 ಮಿ.ಮೀ, ಆರಗ…
ತೀರ್ಥಹಳ್ಳಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮಧು ಬಂಗಾರಪ್ಪ – ಅನಧಿಕೃತ ಮನೆಗಳಿಗೂ ಕೂಡ ಪರಿಹಾರ ಕೊಡುವುದಾಗಿ ಭರವಸೆ – ಸಾರ್ವಜನಿಕರಿಗೆ ಜಾಗರೂಕರಾಗಿರುವಂತೆ ಮನವಿ ಮಾಡಿದ ಸಚಿವರು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳು ಹಾಗೂ ಕಟ್ಟಡಗಳನ್ನು ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಆರಗ ಜ್ಞಾನೇಂದ್ರ, ಅಧಿಕಾರಿಗಳು ವೀಕ್ಷಣೆ ಮಾಡಿದರು. ಐಬಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ, ಮಳೆ ಹೆಚ್ಚಿರುವಂತ ಭಾಗದಲ್ಲಿ ಅಲ್ಲಿರುವಂತಹ ಉಸ್ತುವಾರಿ ಸಚಿವರುಗಳು ಹೋಗಿ ನೋಡಿಕೊಂಡು ಬರಲು ತಿಳಿಸಿದ್ದರು. ಸಂಪೂರ್ಣವಾಗಿ ನಾವು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು. ಮಲೆನಾಡು ಭಾಗದಲ್ಲಿ ಮನೆಗಳಿಗೆ ತುಂಬಾ ಹಾನಿಯಾಗಿರುವುದು ಕಾಣಿಸುತ್ತಿದೆ, ಅದರಲ್ಲೂ ಅನಧಿಕೃತವಾಗಿ ಕೆಲವರು ಮನೆ ಕಟ್ಟಿಕೊಂಡಿದ್ದು ಅದು ಕೂಡ ಹಾನಿಯಾಗಿರುವಂತ ಘಟನೆಗಳು ನಡೆದಿದೆ. ಇನ್ನೂ ಮೂರು ದಿನ ಮಳೆ ಇರಲಿದ್ದು ಡಿಸಿ ಅವರು ಇನ್ನೊಂದು ಬಾರಿ ಭೇಟಿ ನೀಡಲಿದ್ದಾರೆ ಎಂದರು. ಶಾಲೆ ಕಟ್ಟಡಗಳು ಕೂಡ ಹಾನಿಯಾಗಿದ್ದು, ಅದನ್ನು ಮುಂಚೂಣಿಯಲ್ಲಿ…
ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಯುವಕ ಕಣ್ಮರೆ..! – 6 ದಿನಗಳಿಂದ ಶೋಧ: ಪತ್ತೆಯಾಗದ ಯುವಕ – ಹೊಳೆಹೊನ್ನೂರು: ಖಾಸಗಿ ಬಸ್ ಹಿಟ್ ಅಂಡ್ ರನ್ – ಶಿವಮೊಗ್ಗ : ಬಸ್ ನಿಲ್ದಾಣದಲ್ಲಿ ಬಂಗಾರದ ಸರ ಕಳ್ಳತನ – ಶಿವಮೊಗ್ಗ : ನೆಹರು ರಸ್ತೆಯಲ್ಲಿ ಬೈಕ್ ಕಳ್ಳತನ NAMMUR EXPRESS NEWS ಶಿವಮೊಗ್ಗ: ಯುವಕನೊಬ್ಬ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದ ಆದರೆ ವೀಕ್ಷಣೆಗೆ ಎಂದು ಬಂದವನು ಕಣ್ಮರೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಗದಗ ಮೂಲದ ಆನಂದ್ (24) ಕಣ್ಮರೆಯದ ಯುವಕ ಎಂದು ಹೇಳಲಾಗುತ್ತಿದ್ದು, ಜೂನ್ 15 ರಂದು ಆನಂದ್ ಜೋಗ ಜಲಪಾತ ವೀಕ್ಷಿಸಲು ಬೆಂಗಳೂರಿನಿಂದ ಆಗಮಿಸಿದ್ದ. ಬೆಂಗಳೂರಲ್ಲಿ ಆನಂದ್ ಟೀ ಪಾಯಿಂಟ್ ಇಟ್ಟುಕೊಂಡಿದ್ದ. ಇದೀಗ ಪೋಲೀಸರು ಆನಂದ್ ಗಾಗಿ ಶೋಧ ನಡೆಸುತ್ತಿದ್ದು, ದಟ್ಟ ಮಂಜು ಇದ್ದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿದಂತೆ ಸ್ಥಳೀಯರ ಸಹಕಾರದೊಂದಿಗೆ ಯುವಕನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಹೊಳೆಹೊನ್ನೂರು:…
ಟಾಪ್ ನ್ಯೂಸ್ ಕರಾವಳಿ ಸ್ನಾನ ಮಾಡುತ್ತಿದ್ದ ಯುವತಿ ವೀಡಿಯೋ ಚಿತ್ರೀಕರಣ! – ಯುವಕನಿಗೆ ಧರ್ಮದೇಟು ನೀಡಿದ ಸ್ಥಳಿಯರು – ಪುತ್ತೂರು: ಹೊಳೆಗೆ ಹಾರಿದ್ದ ಯುವಕ ಸನ್ಮತ್ ಮೃತದೇಹ ಪತ್ತೆ – ಕುಂದಾಪುರ: ಜುಗಾರಿ ಆಟ: ಆರು ಜನರ ಅರೆಸ್ಟ್! NAMMUR EXPRESS NEWS ಮಂಗಳೂರು : ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಲು ಹೋಗಿ ಸಿಕ್ಕಿ ಬಿದ್ದ ಯುವಕನಿಗೆ ಸ್ಥಳಿಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ತೋಟಬೆಂಗ್ರೆಯಲ್ಲಿ ನಡೆದಿದೆ. ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದಾಗ ಮನೆಯ ಹಿಂಭಾಗದಿಂದ ಬಂದಿದ್ದ ಯುವಕನೊಬ್ಬ ಕದ್ದು ವೀಡಿಯೋ ಮಾಡುತ್ತಿದ್ದು, ಇದನ್ನು ಗಮನಿಸಿದ ಯುವತಿಯು ಬೊಬ್ಬೆ ಹಾಕಿದ್ದಾಳೆ, ಕೂಡಲೇ ಸ್ಥಳೀಯರು ಬೆನ್ನತ್ತಿ ಯುವಕನನ್ನು ಹಿಡಿದು ತದಕಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗ್ರೆ ನಿವಾಸಿ ಮೊಹಮ್ಮದ್ ರಂಶಿದ್ (21) ಆರೋಪಿ ಎಂದು ಗುರುತಿಸಲಾಗಿದೆ. ಮಾದಕ ದ್ರವ್ಯ ವ್ಯಸನಿಯೂ ಆಗಿರುವ ಈತನನ್ನು ಪಣಂಬೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪುತ್ತೂರು: ಹೊಳೆಗೆ ಹಾರಿದ್ದ ಯುವಕ…
ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ? – ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮ ದಿನವು ಸಾಮಾನ್ಯವಾಗಿರುತ್ತದೆ. ದೀರ್ಘಕಾಲದ ಕಾಯಿಲೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುತ್ತದೆ. ಆದರೆ ಕೆಲವರು ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಯೋಜಿಸಿ. ಇದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ. ** ವೃಷಭ ರಾಶಿ : ಇಂದು ನಿಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಇಂದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅನೇಕ ಆದಾಯದ ಮೂಲಗಳಿಂದ ಆರ್ಥಿಕ ಲಾಭವಿದೆ. ಕಚೇರಿಯಲ್ಲಿ ಕೆಲಸಕ್ಕಾಗಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ…
ಕುರಿಯಾಕೋಸ್ ನಿರ್ಗಮನ.. ನಾಗರಾಜ್ ಆಗಮನ – ತೀರ್ಥಹಳ್ಳಿ ಪಪಂ ಮುಖ್ಯ ಅಧಿಕಾರಿ ಬೀಳ್ಕೊಡುಗೆ ಸಮಾರಂಭ – ನೂತನ ಮುಖ್ಯ ಅಧಿಕಾರಿ ನಾಗರಾಜ್ ಅವರಿಗೆ ಸ್ವಾಗತ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಕುರಿಯಾಕೋಸ್ ಅವರ ಬೀಳ್ಕೊಡುಗೆ ಸಮಾರಂಭ ತೀರ್ಥಹಳ್ಳಿಯಲ್ಲಿ ಶನಿವಾರ ನಡೆಯಿತು. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಮೂರುವರೆ ವರ್ಷದಿಂದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಕುರಿಯಾಕೋಸ್ ಅವರಿಗೆ ತೀರ್ಥಹಳ್ಳಿಯ ಜನತೆಯ ಪರವಾಗಿ ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ದಂಡಾಧಿಕಾರಿ, ಮತ್ತು ಶಾಸಕ ಅರಗ ಜ್ಞಾನೇಂದ್ರ, ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಕೂಡ ಕುರಿಯಾಕೋಸ್ ಅವರ ಸೇವೆ ಹಾಗೂ ವ್ಯಕ್ತಿತ್ವದ ಬಗ್ಗೆ ಬಣ್ಣಿಸಿದರು. ಪಟ್ಟಣ ಪಂಚಾಯತಿಯ ಸದಸ್ಯರೆಲ್ಲರೂ ಕಳೆದ ಮೂರುವರೆ ವರ್ಷದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಹಾಗೂ ಜನಪರವಾಗಿ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಆರಗ ಜ್ಞಾನೇಂದ್ರ ಕುರಿಯಾಕೊಸ್ ಅವರಿಗೆ ಶಾಲು…
ಆಷಾಢ ಮಾಸ, ಚಿನ್ನದ ದರ ಇಳಿಕೆ! – 3 ಸಾವಿರಕ್ಕೂ ಕಡಿಮೆಯಾದ ಬೆಲೆ – ಚಿನ್ನ, ಬೆಳ್ಳಿ ಬೆಲೆ ಎಷ್ಟು ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಚಿನ್ನದಲ್ಲಿ ಬಂಪರ್ ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ ಒಂದು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6,780, 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,397 ಎಂಟು ಗ್ರಾಂ ಚಿನ್ನ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 54,240 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 59,176 ಹತ್ತು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 67,800 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 73,970 ನೂರು ಗ್ರಾಂ ಚಿನ್ನ 22 ಕ್ಯಾರೆಟ್…