ತೀರ್ಥಹಳ್ಳಿಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಮಧು ಬಂಗಾರಪ್ಪ
– ಅನಧಿಕೃತ ಮನೆಗಳಿಗೂ ಕೂಡ ಪರಿಹಾರ ಕೊಡುವುದಾಗಿ ಭರವಸೆ
– ಸಾರ್ವಜನಿಕರಿಗೆ ಜಾಗರೂಕರಾಗಿರುವಂತೆ ಮನವಿ ಮಾಡಿದ ಸಚಿವರು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳು ಹಾಗೂ ಕಟ್ಟಡಗಳನ್ನು ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಆರಗ ಜ್ಞಾನೇಂದ್ರ, ಅಧಿಕಾರಿಗಳು ವೀಕ್ಷಣೆ ಮಾಡಿದರು.
ಐಬಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ ನಡೆಸಿ, ಮಳೆ ಹೆಚ್ಚಿರುವಂತ ಭಾಗದಲ್ಲಿ ಅಲ್ಲಿರುವಂತಹ ಉಸ್ತುವಾರಿ ಸಚಿವರುಗಳು ಹೋಗಿ ನೋಡಿಕೊಂಡು ಬರಲು ತಿಳಿಸಿದ್ದರು. ಸಂಪೂರ್ಣವಾಗಿ ನಾವು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.
ಮಲೆನಾಡು ಭಾಗದಲ್ಲಿ ಮನೆಗಳಿಗೆ ತುಂಬಾ ಹಾನಿಯಾಗಿರುವುದು ಕಾಣಿಸುತ್ತಿದೆ, ಅದರಲ್ಲೂ ಅನಧಿಕೃತವಾಗಿ ಕೆಲವರು ಮನೆ ಕಟ್ಟಿಕೊಂಡಿದ್ದು ಅದು ಕೂಡ ಹಾನಿಯಾಗಿರುವಂತ ಘಟನೆಗಳು ನಡೆದಿದೆ. ಇನ್ನೂ ಮೂರು ದಿನ ಮಳೆ ಇರಲಿದ್ದು ಡಿಸಿ ಅವರು ಇನ್ನೊಂದು ಬಾರಿ ಭೇಟಿ ನೀಡಲಿದ್ದಾರೆ ಎಂದರು.
ಶಾಲೆ ಕಟ್ಟಡಗಳು ಕೂಡ ಹಾನಿಯಾಗಿದ್ದು, ಅದನ್ನು ಮುಂಚೂಣಿಯಲ್ಲಿ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ ಎಂದರು. ಜನರು ಜಾಗರೂಕರಾಗಿದ್ದು ಅದರಲ್ಲೂ ವಯಸ್ಸಾದವರು ಮತ್ತು ಮಕ್ಕಳು ಸುರಕ್ಷತೆಯಿಂದ ಇರಲು ಮನವಿ ಮಾಡಿದರು.
ಇನ್ನು ಮಲೆನಾಡಿನಲ್ಲಿ ಸೋರುವುದು ಸಹಜವಾಗಿರುತ್ತದೆ. ಆದರೆ ತಂಡಿ ಬಾರದ ರೀತಿಯಲ್ಲಿ ಮಾಡಿ ಎಂದು ಹೇಳಿದ್ದೆ, ಕಳಪೆ ಕಾಮಗಾರಿಗೆ ಸುಮ್ಮನಿರುತ್ತೀನಿ ಎಂದು ನಾನು ಯಾವತ್ತು ಹೇಳಿಲ್ಲ,
ಕುರುವಳ್ಳಿ – ಬಾಳೆಬೈಲು ಬೈಪಾಸ್ ರಸ್ತೆ ತಡೆಗೋಡೆ ಕುಸಿತ, ತಾಲೂಕು ಪಂಚಾಯತ್ ಕಟ್ಟಡ ಇರಲಿ ಅದರ ರಿಪೋರ್ಟ್ ತರಿಸಲು ಜಿಲ್ಲಾಧಿಕಾರಿಗಳ ಬಳಿ ಹೇಳಿದ್ದೇನೆ. ಕಳಪೆ ಕಾಮಗಾರಿ ಯಾರದ್ದೇ ಇದ್ದರೂ ಕೂಡ ಯಾರೇ ಮಾಡಿದ್ದರು ಕೂಡ, ಯಾರ ಸರ್ಕಾರದ್ದೆ ಆಗಿದ್ದರೂ ಕೂಡ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿ ಕಳಪೆ ಕಾಮಗಾರಿ ಮಾಡಿದ್ದರೆ ಅದಕ್ಕೆ ಏನು ಮಾಡಬೇಕೊ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಾಲೂಕು ದಂಡಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
