ಕುರಿಯಾಕೋಸ್ ನಿರ್ಗಮನ.. ನಾಗರಾಜ್ ಆಗಮನ
– ತೀರ್ಥಹಳ್ಳಿ ಪಪಂ ಮುಖ್ಯ ಅಧಿಕಾರಿ ಬೀಳ್ಕೊಡುಗೆ ಸಮಾರಂಭ
– ನೂತನ ಮುಖ್ಯ ಅಧಿಕಾರಿ ನಾಗರಾಜ್ ಅವರಿಗೆ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ
ಕುರಿಯಾಕೋಸ್ ಅವರ ಬೀಳ್ಕೊಡುಗೆ ಸಮಾರಂಭ ತೀರ್ಥಹಳ್ಳಿಯಲ್ಲಿ ಶನಿವಾರ ನಡೆಯಿತು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಮೂರುವರೆ ವರ್ಷದಿಂದ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಕುರಿಯಾಕೋಸ್ ಅವರಿಗೆ ತೀರ್ಥಹಳ್ಳಿಯ ಜನತೆಯ ಪರವಾಗಿ ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾಲೂಕು ದಂಡಾಧಿಕಾರಿ, ಮತ್ತು ಶಾಸಕ ಅರಗ ಜ್ಞಾನೇಂದ್ರ, ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಕೂಡ ಕುರಿಯಾಕೋಸ್ ಅವರ ಸೇವೆ ಹಾಗೂ ವ್ಯಕ್ತಿತ್ವದ ಬಗ್ಗೆ ಬಣ್ಣಿಸಿದರು.
ಪಟ್ಟಣ ಪಂಚಾಯತಿಯ ಸದಸ್ಯರೆಲ್ಲರೂ ಕಳೆದ ಮೂರುವರೆ ವರ್ಷದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಹಾಗೂ ಜನಪರವಾಗಿ ಕೆಲಸ ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಆರಗ ಜ್ಞಾನೇಂದ್ರ ಕುರಿಯಾಕೊಸ್ ಅವರಿಗೆ ಶಾಲು ಹೊಂದಿಸಿ ಮಾಲಾರ್ಪಣೆ ಮಾಡಿ ಹೂಗುಚ್ಚ ನೀಡಿ ಅಭಿನಂದಿಸಿದರು.
ನೂತನವಾಗಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಾಗರಾಜ ಅವರಿಗೆ ಹೂಗುಚ್ಚ ನೀಡಿ ಸ್ವಾಗತವನ್ನು ಮಾಡಿದರು.
ಕುರಿಯಾಕೋಸ್ ಹೇಳಿದ್ದೇನು?
ತೀರ್ಥಹಳ್ಳಿ ಪಟ್ಟಣದ ಎಲ್ಲಾ ಜನರಿಗೂ ಕುರಿಯಾಕೋಸ್ ಧನ್ಯವಾದ ಹೇಳಿದ್ದಾರೆ. ನನ್ನ ಸೇವೆಯಲ್ಲಿ ಪ್ರಮುಖವಾಗಿ ಈಗಿನ ಶಾಸಕರು ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಈ ಕ್ಷೇತ್ರಕ್ಕೆ ಇವರಿಬ್ಬರು ಎರಡು ಕಣ್ಣು ಇದ್ದ ಹಾಗೆ. ಇವರ ತುಂಬು ಹೃದಯದ ಸಹಕಾರದಿಂದ ಮತ್ತು ಪಟ್ಟಣ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರದಿಂದ ನಾನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಜನಮನ್ನಣೆ ಗಳಿಸಲು ಕಾರಣವಾಯಿತು ಎಂದರು. ನಿಮ್ಮ ಎಲ್ಲಾ ಸಹಕಾರಕ್ಕೆ ನಾನು ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅರಗ ಜ್ಞಾನೇಂದ್ರ, ತಾಲೂಕು ದಂಡಾಧಿಕಾರಿ ಜಕ್ಕಣ್ಣಗೌಡರ್ , ನೂತನ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ನಾಗರಾಜ್, ಹಾಗೂ ಪಟ್ಟಣ ಪಂಚಾಯತ್ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
